ನೋಟು ಕೊಡ್ತೀವಿ, ಓಟು ಹಾಕಿಸಿಕೊಳ್ತೀವಿ; ಎಂಟಿಬಿ ನಾಗರಾಜ್​ ವಿವಾದಾತ್ಮಕ ಹೇಳಿಕೆ

ನರೇಂದ್ರ ಮೋದಿ ಅವರು ಪ್ರಧಾನಿ ಆಗಿರಲಿಲ್ಲ ಎಂದಿದ್ದರೆ, ಇಷ್ಟೊತ್ತಿಗೆ ದೇಶದ ಮೇಲೆ ಬಾಂಬ್ ಹಾಕುತ್ತಿದ್ದರು. ಪಕ್ಕದ ಶತ್ರು ದೇಶಗಳು ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿವೆ. ನರೇಂದ್ರ ಮೋದಿ ಬಹಳ ಧೈರ್ಯವಂತರು, ಹಾಗಾಗಿ ಎಲ್ಲವನ್ನು ನಿಭಾಯಿಸುತ್ತಿದ್ದಾರೆ ಎಂದು ಮೋದಿಯನ್ನು ಹಾಡಿ ಹೊಗಳಿದರು.

Latha CG | news18-kannada
Updated:November 19, 2019, 7:10 PM IST
ನೋಟು ಕೊಡ್ತೀವಿ, ಓಟು ಹಾಕಿಸಿಕೊಳ್ತೀವಿ; ಎಂಟಿಬಿ ನಾಗರಾಜ್​ ವಿವಾದಾತ್ಮಕ ಹೇಳಿಕೆ
ಚುನವಾಣಾ ಪ್ರಚಾರದಲ್ಲಿ ಎಂಟಿಬಿ ನಾಗರಾಜ್​
  • Share this:
ಕೋಲಾರ(ನ.19): ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್  ಚುನಾವಣಾ ಪ್ರಚಾರ ಭರದಿಂದ ನಡೆಯುತ್ತಿದೆ. ಜೊತೆಗೆ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ. ಮತದಾರರಿಗೆ ಹಣದ ಆಮಿಷವೊಡ್ಡಿ ಮತ ಹಾಕಿಸಿಕೊಳ್ಳುವುದಾಗಿ ಎಂಟಿಬಿ ನೇರವಾಗಿ ಹೇಳಿದ್ದಾರೆ. 

ಹೊಸಕೋಟೆಯ ಇಟ್ಟಸಂದ್ರದಲ್ಲಿ ಚುನಾವಣಾ ಪ್ರಚಾರದ ವೇಳೆಮಾತನಾಡಿದ ಅವರು, "ನೋಟು ಕೊಡ್ತೀವಿ, ಓಟು ಹಾಕಿಸಿಕೊಳ್ತೀವಿ. ಕೆಲವರು ಮನಸ್ಫೂರ್ತಿಯಿಂದ ಓಟು ಹಾಕ್ತಾರೆ. ಇನ್ನು ಕೆಲವರು ಬೈದುಕೊಂಡು ಓಟು ಹಾಕ್ತಾರೆ," ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಂದುವರೆದ ಅವರು, "ನಾನು 40 ರೂ. ಸಂಬಳ ಪಡೆದು ಕೆಲಸ ಮಾಡಿದ್ದೆ. ಕಷ್ಟಪಟ್ಟು ಹಣ ಸಂಪಾದಿಸಿದ್ದೇನೆ. ಅಕ್ರಮವಾಗಿ ಹಣ ಸಂಪಾದನೆ ಮಾಡಿಲ್ಲ. ಸರ್ಕಾರಕ್ಕೆ ತೆರಿಗೆ ಕಟ್ಟಿ ಆಸ್ತಿ ಮಾಡಿದ್ದೇನೆ. ಯಾವುದೇ ಅಕ್ರಮ ಆಸ್ತಿ ಸಂಪಾದಿಸಿಲ್ಲ," ಎಂದು ಹೇಳಿದರು.

ರಾಜಸ್ಥಾನ ಸ್ಥಳೀಯ ಚುನಾವಣೆ: ಕಾಂಗ್ರೆಸ್ ಜಯಭೇರಿ; ಬಿಜೆಪಿಗೆ ನಿರಾಸೆ

ನರೇಂದ್ರ ಮೋದಿ ಅವರು ಪ್ರಧಾನಿ ಆಗಿರಲಿಲ್ಲ ಎಂದಿದ್ದರೆ, ಇಷ್ಟೊತ್ತಿಗೆ ದೇಶದ ಮೇಲೆ ಬಾಂಬ್ ಹಾಕುತ್ತಿದ್ದರು. ಪಕ್ಕದ ಶತ್ರು ದೇಶಗಳು ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿವೆ. ನರೇಂದ್ರ ಮೋದಿ ಬಹಳ ಧೈರ್ಯವಂತರು, ಹಾಗಾಗಿ ಎಲ್ಲವನ್ನು ನಿಭಾಯಿಸುತ್ತಿದ್ದಾರೆ ಎಂದು ಮೋದಿಯನ್ನು ಹಾಡಿ ಹೊಗಳಿದರು.

ನನ್ನ ಬಿಜೆಪಿ ಸೇರ್ಪಡೆಗೆ ಬಚ್ಚೇಗೌಡರೇ ಒಪ್ಪಿದ್ದರು

ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಸೇರ್ಪಡೆಗೆ ಸಿಎಂ ಯಡಿಯೂರಪ್ಪ ಆಹ್ವಾನ ನೀಡಿದ್ದರು. ಬಿಜೆಪಿ ಸೇರ್ಪಡೆಗೆ ಬಚ್ಚೇಗೌಡರ ಒಪ್ಪಿಗೆ ಬೇಕು ಎಂದಿದ್ದೆ. ಬಚ್ಚೇಗೌಡರ ಜೊತೆ 2 ಸುತ್ತು ಮಾತುಕತೆ ನಡೆಸಿದ್ದೆವು. 2 ಬಾರಿ ಮಾತುಕತೆ ಬಳಿಕ ಬಚ್ಚೇಗೌಡರೂ ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು, ಬಿಎಸ್​ವೈ ಸಿಎಂ ಆಗಬೇಕು. ಉಪಚುನಾವಣೆಯಲ್ಲಿ ನನ್ನ ಭವಿಷ್ಯವನ್ನು ಕ್ಷೇತ್ರದ ಜನ ತೀರ್ಮಾನಿಸಲಿದ್ದಾರೆ ಎಂದರು.ಸುಮಲತಾ ಜೊತೆ ಮೋದಿ, ಅಮಿತ್​ ಶಾ ಚರ್ಚಿಸಿದ್ದಾರೆ; ಯಾರಿಗೆ ಬೆಂಬಲ ಕೊಡಬೇಕೆಂದು ಸಂಸದೆಗೆ ಗೊತ್ತಿದೆ; ಶ್ರೀರಾಮುಲು

ಆಗ ಬಿಎನ್  ಬಚ್ಚೇಗೌಡ ಮತ್ತು ನಾನು ಕಳೆದ ಇಪ್ಪತ್ತು ವರ್ಷಗಳಿಂದ ಜಿದ್ದಾಜಿದ್ದಿನ ಹೋರಾಟ ನಡೆಸಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು, ಯಡಿಯೂರಪ್ಪ ಸಿಎಂ ಆಗಬೇಕು. ಹಾಗಾಗಿ ಎಂಟಿಬಿ ನಾಗರಾಜ್​​​ ಅವರನ್ನು ಕರೆದುಕೊಳ್ಳಿ. ನಮ್ಮದೇನು ಅಭ್ಯಂತರವಿಲ್ಲ ಎಂದು ಬಚ್ಚೇಗೌಡರು ಹೇಳಿದ್ದರು. ಆರ್​ ಆಶೋಕ್​​ ಅವರೂ ಸಹ ಈ ಬಗ್ಗೆ ಹೇಳಿದ್ದರು. ಆದರೆ ನಾನು ಬಿಜೆಪಿ ಪಕ್ಷ ಸೇರ್ಪಡೆ ಆದ ಮೇಲೆ ರಾಜಕೀಯ ದೊಂಬರಾಟ ಆಡ್ತಿದ್ದಾರೆ. ಇದರ ಬಗ್ಗೆ ನಾವು ಏನು ಮಾತನಾಡಲು ಹೋಗುವುದಿಲ್ಲ. ಕ್ಷೇತ್ರದ ಜನ ಉಪ ಚುನಾವಣೆಯಲ್ಲಿ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

First published: November 19, 2019, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading