ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಕುಟುಂಬದ ಹತ್ಯೆಯ ಸಂಚಿಗೆ ಸಂಬಂಧಿಸಿದ ಎನ್ನಲಾದ ಆಡಿಯೋ ಲೀಕ್ (Audio Leak) ಆಗಿದೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikant Rathod, BJP Candidate), ಕಾರ್ಯಕರ್ತ ರವಿ ಎಂಬಾತನ ಜೊತೆ ಮಾತನಾಡಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಡಿಯೋ ಸಂಬಂಧ ಇಂದು ಎಐಸಿಸಿ ನಾಯಕರಾದ ರಣ್ದೀಪ್ ಸುರ್ಜೇವಾಲಾ (Randeep Surjewala), ಪವನ್ ಖೇರಾ (Pavan Khera) ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕ್ ಖರ್ಗೆ (Priyank Kharge) ಸ್ಪರ್ಧೆ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿಅಧ್ಯಕ್ಷರು. ಇದೀಗ ಖರ್ಗೆ,ಹೆಂಡತಿ ಮಕ್ಕಳನ್ನ ಸಾಫ್ ಮಾಡ್ತೇನೆ ಎಂದು ಮಣಿಕಂಠ ರಾಥೋಡ್ ಹೇಳಿದ್ದಾರೆ. ಇದು ತುಂಬಾ ಅಪಾಯಕಾರಿ ನಡೆಯಾಗಿದ್ದು, ಖರ್ಗೆಯವರ ಕುಟುಂಬ ಆತಂಕದಲ್ಲಿದೆ ಎಂದು ರಣ್ದೀಪ್ ಸುರ್ಜೇವಾಲಾ ಹೇಳಿದರು.
ಪ್ರಧಾನಿ, ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು ನಡೆದಿದೆ. ದಲಿತ ನಾಯಕರಾಗಿರುವ ಮಲ್ಲಿಕಾರ್ಜನ ಖರ್ಗೆಯವರ ಹತ್ಯೆಗೆ ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ರಣ್ದೀಪ್ ಸುರ್ಜೇವಾಲಾ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರವಿ ಎಂಬಾತನ ಜೊತೆಯಲ್ಲಿ ಮಣಿಕಂಠ ರಾಥೋಡ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ತುಣಕನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.
ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಆಡಿಯೋದಲ್ಲಿ ಏನಿದೆ?
ರವಿ, ಕಾರ್ಯಕರ್ತ: ಅಣ್ಣಾ, ನಿಮ್ಮ ಮೇಲೆ ಎಷ್ಟು ಕೇಸ್ಗಳಿವೆ?
ಮಣಿಕಂಠ ರಾಥೋಡ್: ಯಾವ ಬೋ.. ಮಗ ಕಾಂಗ್ರೆಸ್ನವನು ಕೇಳಲಿ. 44 ಕೇಸ್ಗಳಿವೆ ಅಂತ ಹೇಳಲಿ.
ರವಿ: ಅಣ್ಣಾ..ಅದನ್ನು ಖರ್ಗೆ ಕಡೆಯವರು ಮಾಡ್ತಾರೆ. ನಾವ್ಯಾರು ಮಾಡಲ್ಲ.
ಮಣಿಕಂಠ ರಾಥೋಡ್: ಖರ್ಗೆ ಕಡೆಯಿಂದಲೇ ಕೇಳಲೇ?
ರವಿ: ಅಣ್ಣಾ ನನ್ನ ಹತ್ರ ಅವರ ನಂಬರ್ ಇಲ್ಲ. ಕೇಳೋಣ ಅಂದ್ರೆ ಅವರ ನಂಬರ್ ಇಲ್ಲ, ಇದ್ರೆ ಕೊಡಿ. ಫೋನ್ ಮಾಡಿ ನಮ್ಮ ಅಣ್ಣನ ಬಗ್ಗೆ ಯಾಕೆ ಹಿಂಗ್ ಮಾತಾಡ್ತೀರಿ ಅಂತ ಕೇಳ್ತೀನಿ.
ಮಣಿಕಂಠ ರಾಥೋಡ್: ನನ್ನ ಬಳಿ ಫೋನ್ ನಂಬರ್ ಇದ್ದಿದ್ರೆ ಅವರ ಹೆಂಡ್ತಿ ಮಕ್ಕಳನ್ನು ಸಾಫ್ ಮಾಡ್ತಿದ್ದೆ.
ರವಿ: ಯಾರ ಹೆಂಡರ ಮಕ್ಕಳ ಅಣ್ಣಾ?
ಮಣಿಕಂಠ ರಾಥೋಡ್: ಇವಾಗ ಯಾರ ಹೆಸರು ತೊಗೊಂಡಿ ನೀನು?
ರವಿ: ಖರ್ಗೆ ಅವರದ್ದು ಅಣ್ಣಾ.
ಮಣಿಕಂಠ ರಾಥೋಡ್: ಖರ್ಗೆ ಅವರ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳನ್ನೆಲ್ಲಾ ಸಾಫ್ ಮಾಡ್ತೀನಿ ಲೇ? ನಂಬರ್ ಇದ್ರೆ ನಾನೇ ಫೋನ್ ಮಾಡಿ ಬೈಯ್ತಿದ್ದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ