ಸಿದ್ದರಾಮಯ್ಯರನ್ನು ಹೊಗಳಿದರೆ ನನಗೇನು ಲಾಭ?; ವಸ್ತು ಸ್ಥಿತಿ ಹೇಳುವುದು ನನ್ನ ಗುಣ; ಹೆಚ್.ವಿಶ್ವನಾಥ್​

ಹೆಚ್.ವಿಶ್ವನಾಥ್ ಮಾತುಗಳಿಗೆ ಬೆಲೆ ಇಲ್ಲ ಎಂಬ ದಿನೇಶ್ ಗುಂಡೂರಾವ್ ಹೇಳಿಕೆಗೆ ಅನರ್ಹ ಶಾಸಕ ತಿರುಗೇಟು ನೀಡಿದರು. ನಿಮಗೆ ಬೆಲೆ ಇದ್ದಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ. ನೀವು ಒಬ್ಬ ಅಭ್ಯರ್ಥಿಯನ್ನು ಹೇಗೆ ಸಂಬೋಧಿಸಿದ್ರಿ ಅನ್ನೋದನ್ನ ನೆನಪಿಟ್ಟುಕೊಳ್ಳಿ. ನಾನು ಮಿನಿಸ್ಟರ್ ಆಗಲು ಬಿಜೆಪಿಗೆ ಬಂದಿಲ್ಲ. ಮೈತ್ರಿ ಸರ್ಕಾರದ ನಡವಳಿಕೆಯಿಂದ ಬೇಸತ್ತು ಬಿಜೆಪಿಗೆ ಬಂದೆ ಎಂದು ಕಿಡಿಕಾರಿದರು.

Latha CG | news18
Updated:November 24, 2019, 3:26 PM IST
ಸಿದ್ದರಾಮಯ್ಯರನ್ನು ಹೊಗಳಿದರೆ ನನಗೇನು ಲಾಭ?; ವಸ್ತು ಸ್ಥಿತಿ ಹೇಳುವುದು ನನ್ನ ಗುಣ; ಹೆಚ್.ವಿಶ್ವನಾಥ್​
ಸಿದ್ದರಾಮಯ್ಯ-ವಿಶ್ವನಾಥ್​
  • News18
  • Last Updated: November 24, 2019, 3:26 PM IST
  • Share this:
ಮೈಸೂರು(ನ.24): ಸಿದ್ದರಾಮಯ್ಯ ಏಕಾಂಗಿಯಲ್ಲ. ಯಾವ ಜನನಾಯಕನು ಏಕಾಂಗಿಯಾಗುವುದಿಲ್ಲ. ಆದರೆ ಅವರ ತಂಡ ಕುಸಿಯುತ್ತಿದೆ. ಇದು ಡಿ.ದೇವರಾಜ ಅರಸು ಅಂತವರಿಗೂ ಆಗಿತ್ತು ಎಂದು ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್​ ಹೇಳಿದ್ದಾರೆ.

ಎಚ್.ವಿಶ್ವನಾಥ್​ ಮತ್ತೆ ಮಾಜಿ ಸಿಎಂ ಸಿದ್ದರಾಯ್ಯ ಪರ ಮೃದು ಧೋರಣೆ ತೋರಿದ್ಧಾರೆ.  ಸಿದ್ದರಾಮಯ್ಯ ಬಗ್ಗೆ ನಾನೇನು ಸುಳ್ಳು ಹೇಳಿದ್ದೀನಾ? ಸಿದ್ದರಾಮಯ್ಯರನ್ನು ಹೊಗಳಿದರೆ ನನಗೇನು ಲಾಭವಾಗುತ್ತೆ. ಯಾವುದನ್ನ ಹೇಗೆ ಸ್ವೀಕಾರ ಮಾಡಬೇಕು ಎನ್ನುವ ಸಾಮಾನ್ಯ ಪ್ರಜ್ಞೆಯೂ ಕಾಂಗ್ರೆಸ್‌ನವರಿಗೆ ಇಲ್ಲ‌. ವಸ್ತುಸ್ಥಿತಿ ಹೇಳುವುದು ನನ್ನ ಗುಣ. ಇದರಿಂದ ನನಗೆ ಯಾವ ರಾಜಕೀಯ ಲಾಭವೂ ಇಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ನಾನು ರಾಜೀನಾಮೆ ಕೊಟ್ಟಾಗ ಯಾರ ಬಗ್ಗೆಯಾದರೂ ಮಾತನಾಡಿದ್ದೆನಾ? ಪಾರ್ಟಿ ಬಿಟ್ಟಾಗ ಪಾರ್ಟಿಗೆ ಬೈದಿಲ್ಲ. ಯಾವುದೇ ಪಕ್ಷ ನನಗೆ ಅವಕಾಶ ಕೊಟ್ಟ ಆ ಪಾರ್ಟಿ ಹಾಗೂ ನಾಯಕತ್ವಕ್ಕೆ ನಾನು ಋಣಿಯಾಗಿದ್ದೇನೆ. ನಾಯಕತ್ವಕ್ಕೆ ಗೌರವ ಕೊಡೋದು ಮನುಷ್ಯತ್ವ ಗುಣ ಎಂದರು.

ಮಹಾರಾಷ್ಟ್ರ ಅಂತಿಮ ತೀರ್ಪು ನಾಳೆಗೆ ಮುಂದೂಡಿದ ಸುಪ್ರೀಂ: ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸಲ್ಲಿಸುವಂತೆ ಸೂಚನೆ

ಹೆಚ್.ವಿಶ್ವನಾಥ್ ಮಾತುಗಳಿಗೆ ಬೆಲೆ ಇಲ್ಲ ಎಂಬ ದಿನೇಶ್ ಗುಂಡೂರಾವ್ ಹೇಳಿಕೆಗೆ ಅನರ್ಹ ಶಾಸಕ ತಿರುಗೇಟು ನೀಡಿದರು. ನಿಮಗೆ ಬೆಲೆ ಇದ್ದಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ. ನೀವು ಒಬ್ಬ ಅಭ್ಯರ್ಥಿಯನ್ನು ಹೇಗೆ ಸಂಬೋಧಿಸಿದ್ರಿ ಅನ್ನೋದನ್ನ ನೆನಪಿಟ್ಟುಕೊಳ್ಳಿ. ನಾನು ಮಿನಿಸ್ಟರ್ ಆಗಲು ಬಿಜೆಪಿಗೆ ಬಂದಿಲ್ಲ. ಮೈತ್ರಿ ಸರ್ಕಾರದ ನಡವಳಿಕೆಯಿಂದ ಬೇಸತ್ತು ಬಿಜೆಪಿಗೆ ಬಂದೆ ಎಂದು ಕಿಡಿಕಾರಿದರು.

ಚುನಾವಣೆಗೂ ಮುನ್ನವೇ ಪ್ರತ್ಯೇಕ ಜಿಲ್ಲೆ ವಿಚಾರವಾಗಿ ನಿಮ್ಮ ನಿಲುವು ತಿಳಿಸಿ ಎಂದು  ಮತ್ತೊಮ್ಮೆ ಕಾಂಗ್ರೆಸ್ ಜೆಡಿಎಸ್ ಪಕ್ಷಗಳಿಗೆ ಸವಾಲು ಹಾಕಿದರು. ನಾನು ಚುನಾವಣೆಗೋಸ್ಕರ ಪ್ರತ್ಯೇಕ ಜಿಲ್ಲೆ ವಿಚಾರ ಮಾತನಾಡುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಂದು ವರ್ಷದಿಂದ ಈ ವಿಚಾರ ಮಾತನಾಡಿದ್ದೇನೆ. ನಿಮ್ಮ ನಿಲವು ಏನು? ಅಭಿವೃದ್ಧಿ ಪರ ಇದ್ದರೆ ಪ್ರತ್ಯೇಕ ಜಿಲ್ಲೆ ಪರ ನಿಂತುಕೊಳ್ಳಿ‌. ಇಲ್ಲ ಅದರ ವಿರುದ್ದ ಇದ್ದೇವೆ ಎನ್ನುವುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

ಅನರ್ಹರಿಗಾಗಿ ಪ್ರಾಣ ಕೊಡಲು ಮುಂದಾಗಿರುವ ಸಿಎಂ ನಿಮಗೆ ಬೇಕಾ?; ಜನರಿಗೆ ಕುಮಾರಸ್ವಾಮಿ ಪ್ರಶ್ನೆ
First published: November 24, 2019, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading