• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • (VIDEO): ಸ್ಥಳೀಯ ಸಂಸ್ಥೆ ಚುನಾವಣೆ: ಗೆದ್ದ ಬಳಿಕ ಗಂಗೂಲಿ ಅಭಿಮಾನಿ ಮಾಡಿದ್ದೇನು?

(VIDEO): ಸ್ಥಳೀಯ ಸಂಸ್ಥೆ ಚುನಾವಣೆ: ಗೆದ್ದ ಬಳಿಕ ಗಂಗೂಲಿ ಅಭಿಮಾನಿ ಮಾಡಿದ್ದೇನು?

  • News18
  • 2-MIN READ
  • Last Updated :
  • Share this:

    ನ್ಯೂಸ್ 18 ಕನ್ನಡ

    ಕಳೆದ 2002 ರಲ್ಲಿ ಲಂಡನ್​​​ನ ಲಾರ್ಡ್ಸ್​​ ಅಂಗಳದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತ್ತು. ಭಾರತ ನ್ಯಾಟ್​​ವೆಸ್ಟ್​ ಫೈನಲ್​ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಅಂದಿನ ಟೀಂ ಇಂಡಿಯಾದ ನಾಯಕ ಸೌರವ್ ಗಂಗೂಲಿ ಬಾಲ್ಕನಿಯಲ್ಲಿ ಶರ್ಟ್​ ಬಿಚ್ಚಿ ಜೋಶ್​ನಲ್ಲಿ ತಿರುಗಿಸಿದ್ದು ಕ್ರಿಕೆಟ್​​ ಇತಿಹಾಸದಲ್ಲೇ ಅವಿಸ್ಮರಣೀಯ ಕ್ಷಣವಾಗಿತ್ತು.

    ಇದೇ ಮಾದರಿಯಲ್ಲಿಯೇ ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾಣೆಯಲ್ಲಿ ಗೆದ್ದ ಗಂಗೂಲಿ ಅಭಿಮಾನಿಯೋರ್ವ ಶರ್ಟ್​ ಬಿಚ್ಚಿ ದಾದ ಅವರ ಅಪರೂಪದ ಘಟನೆಯನ್ನು ನೆನಪಿಸಿದ್ದಾರೆ. ನಿನ್ನೆ(ಸೆ. 04) ರಂದು ಭಾರೀ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ.

     



    ಮೂರು ನರಸಭೆ ಸೇರಿದಂತೆ 102 ಪುರಸಭೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ ಒಟ್ಟು ​2662 ವಾರ್ಡ್​ಗಳ ಪೈಕಿ ಕಾಂಗ್ರೆಸ್​ಗೆ 982, ಬಿಜೆಪಿ 929, ಜೆಡಿಎಸ್-ಬಿಎಸ್​​ಪಿ 388 ಸ್ಥಾನ ಗೆದ್ದಿದ್ದಾರೆ. ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡದೆ, ಅತಂತ್ರ ಫಲಿತಾಂಶ ಬಂದಿದೆ.

    ಆದರೆ, ಬಾಗಲಕೋಟೆಯಲ್ಲಿ ಗಂಗೂಲಿ ಅಭಿಮಾನಿಯೋರ್ವ ಪುರಸಭೆ 19ನೇ ವಾರ್ಡ್​​ನಲ್ಲಿ ಜಯಭೇರಿ ಬಾರಿಸಿದ್ದಾರೆ. ವೀರಪ್ಪ ಸಿರಗನ್ನವರ್ ಎಂಬಾತ ದಾದ ಮಾದರಿಯಲ್ಲಿಯೇ ಗೆದ್ದ ಖುಷಿಯಲ್ಲಿ ರಸ್ತೆ ಮಧ್ಯ ಶರ್ಟ್​​ ಬಿಚ್ಚಿ ತಿರುಗಿಸುವ ಮೂಲಕ ಸಂಭ್ರಮಿಸಿದ್ಧಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಟ್ವಿಟರ್​ನಲ್ಲಿ ಈ ಘಟನೆ ಟ್ರೆಂಡ್​ ಶುರು ಮಾಡಿದೆ.

     


     


     

    First published: