ಇದೇ ನನ್ನ ಕೊನೆ ಚುನಾವಣೆ ಎಂದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆನಂದ್​ ಸಿಂಗ್​ ಹೋರಾಟಕ್ಕಿಳಿದಿದ್ದರು.

news18-kannada
Updated:November 23, 2019, 9:31 PM IST
ಇದೇ ನನ್ನ ಕೊನೆ ಚುನಾವಣೆ ಎಂದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್
ಅನರ್ಹ ಶಾಸಕ ಆನಂದ್ ಸಿಂಗ್
  • Share this:
ಬಳ್ಳಾರಿ(ನ.23): ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಆನಂದ್​ ಸಿಂಗ್​ ಇದೇ ನನ್ನ ಕೊನೆ ಚುನಾವಣೆ ಎಂದು ಘೋಷಿಸಿದ್ದಾರೆ. 

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಇದೇ ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಇದು ಆಕಸ್ಮಿಕವಾಗಿ ಬಂದ ಚುನಾವಣೆಯಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಸಕ್ರಿಯನಾಗುತ್ತೇನೆ. ಬಿಜೆಪಿ ಪಕ್ಷ ಸಂಘಟನೆಯಲ್ಲಿ ಮುಂದಾಗುತ್ತೇನೆ. ಕಾಂಗ್ರೆಸ್​​​​ನಲ್ಲಿ ನಾನು ಶಾಸಕನಾಗಿ ಕೆಲಸ ಮಾಡಲಿಲ್ಲ. ವಿಜಯನಗರ ಜಿಲ್ಲೆಯಾದರೆ ಇಲ್ಲೇ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡುತ್ತೇನೆ ಎಂದರು.

ಎಂಟಿಬಿ ದುಡ್ಡು ಕೊಟ್ರೆ ತಗೊಳ್ಳಿ, ಆದ್ರೆ ಕಾಂಗ್ರೆಸ್​​ಗೆ ಮತ ಹಾಕಿ; ಕೆ.ವೈ.ನಂಜೇಗೌಡ ಕರೆ

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆನಂದ್​ ಸಿಂಗ್​ ಹೋರಾಟಕ್ಕಿಳಿದಿದ್ದರು. ಇತ್ತೀಚೆಗೆ, ವಿಜಯನಗರ ನೂತನ‌ ಜಿಲ್ಲೆಯಾಗಿಯೇ ಆಗುತ್ತದೆ. ಇದನ್ನು ನಾವು ನಿರ್ಧರಿಸಿಲ್ಲ. ಹಂಪಿ ಶ್ರೀವಿರೂಪಾಕ್ಷೇಶ್ವರ ದೇವರೇ ಇದನ್ನು ನಿರ್ಣಯಿಸಿದ್ದಾರೆ. ವಿಜಯನಗರ ಜಿಲ್ಲೆ ಆಗೋದು ಬೇಡ ಎಂಬುದು ಅವರವರ ನಿರ್ಧಾರ ಎಂದು ಹೇಳಿದ್ದರು.

ಬಳ್ಳಾರಿ ಜಿಲ್ಲೆಯಿಂದ 6 ತಾಲೂಕುಗಳನ್ನು ಬೇರ್ಪಡಿಸುವ ಪ್ರಸ್ತಾಪ ಕೇಳಿಬಂದಿತ್ತು. ಭೌಗೋಳಿಕವಾಗಿ ಜಿಲ್ಲೆಯನ್ನು ಬೇರ್ಪಡಿಸಿ ಮ್ಯಾಪ್ ಸಿದ್ಧಪಡಿಸಲಾಗಿದ್ದು, ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೊಸಪೇಟೆ, ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೊಟ್ಟೂರು, ಹರಪನಹಳ್ಳಿಯನ್ನು ಸೇರಿಸಲಾಗಿದೆ. ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬಳ್ಳಾರಿ, ಸಿರಗುಪ್ಪ, ಕೂಡ್ಲಿಗಿ, ಸಂಡೂರು, ಕುರಗೋಡು ತಾಲೂಕುಗಳು ಉಳಿಯಲಿವೆ ಎಂಬ ಮಾತುಗಳು ಕೇಳಿಬಂದಿತ್ತು.

24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿವಸೇನೆ
First published:November 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ