ಬಾಗಲಕೋಟೆಗೂ ಲಗ್ಗೆ ಇಟ್ಟ ಬಿಜೆಪಿ ಪಾಳಯ; ಸಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್​ ಕೆಡವಲು ಈಶ್ವರಪ್ಪ ಮಾಸ್ಟರ್​ ಪ್ಲಾನ್​!

ಇಂದು ಬಾಗಲಕೋಟೆಯಲ್ಲಿ ನಡೆಯಲಿರುವ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆ, ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಈಶ್ವರಪ್ಪ ನಗರಕ್ಕೆ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವುದು ಅವರ ಉದ್ದೇಶ. ಆದರೆ, ಈಶ್ವರಪ್ಪನವರ ಬಾಗಲಕೋಟೆ ಭೇಟಿಗೆ ಇದಕ್ಕಿಂತ ಬೇರೆಯದೇ ಮಹತ್ವದ ಕಾರಣವಿದೆ ಎನ್ನುತ್ತಿದೆ ಬಿಜೆಪಿ ಪಕ್ಷದ ಮೂಲಗಳು.

MAshok Kumar | news18
Updated:June 29, 2019, 8:10 AM IST
ಬಾಗಲಕೋಟೆಗೂ ಲಗ್ಗೆ ಇಟ್ಟ ಬಿಜೆಪಿ ಪಾಳಯ; ಸಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್​ ಕೆಡವಲು ಈಶ್ವರಪ್ಪ ಮಾಸ್ಟರ್​ ಪ್ಲಾನ್​!
ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • News18
  • Last Updated: June 29, 2019, 8:10 AM IST
  • Share this:
ಬಾಗಲಕೋಟೆ (ಜೂನ್.29); ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯನ್ನು ಹಣಿದಂತೆ, ಬಾಗಲಕೋಟೆಯ ಬಾದಾಮಿಯಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಣಿಯಲು ಬಿಜೆಪಿ ಹೊಸ ತಂತ್ರ ಹೆಣೆಯಲು ಮುಂದಾಗಿದೆ. ಈಗಿನಿಂದಲೇ ಕಾರ್ಯರೂಪಕ್ಕೆ ಇಳಿದಿರುವ ಕಮಲ ಪಾಳಯಕ್ಕೆ ಈಶ್ವರಪ್ಪ ಮಾಸ್ಟರ್ ಪ್ಲಾನ್ ರಚಿಸಿದ್ದಾರೆ.

ಈಗಾಗಲೇ ಸಿದ್ದರಾಮಯ್ಯನವರಿಗೆ ಸ್ವಕ್ಷೇತ್ರ ಚಾಮುಂಡಿಯಲ್ಲಿ ಸೋಲುಣಿಸಿರುವ ಬಿಜೆಪಿ ಬಾದಾಮಿಯಲ್ಲೂ ಸೋಲುಣಿಸಲು ಮುಂದಾಗಿದೆ. ಹೀಗಾಗಿ ಸಿದ್ದರಾಮಯ್ಯನವರ ಅಹಿಂದ ಮಂತ್ರವನ್ನು ಅವರಿಗೆ ತಿರುಗು ಮಂತ್ರವನ್ನಾಗಿಸಲು ಯೋಜನೆ ಸಿದ್ದಪಡಿಸಿದ್ದು, ಈಶ್ವರಪ್ಪ ಈಗಾಗಲೇ ಬಾಗಲಕೋಟೆ ಪ್ರವಾಸ ಆರಂಭಿಸಿದ್ದಾರೆ.

ಇದನ್ನೂ ಓದಿ : ಅಮೆರಿಕಾಗೆ ಪ್ರಯಾಣ ಬೆಳೆಸಿದ ಸಿಎಂ ಎಚ್​ಡಿ ಕುಮಾರಸ್ವಾಮಿ; 30ರಂದು ನ್ಯೂಜೆರ್ಸಿಯಲ್ಲಿ ಕಾಲಭೈರವೇಶ್ವರ ದೇಗುಲಕ್ಕೆ ಶಿಲಾನ್ಯಾಸ

ಸಿದ್ದರಾಮಯ್ಯಗೆ ಟಾಂಗ್ ಕೊಡಲು ಈಶ್ವರಪ್ಪ ಬಾಗಲಕೋಟೆಗೆ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಮೂರು ದಿನಗಳಿಂದ ಬಾಗಲಕೋಟೆಯಲ್ಲಿ ಬೀಡು ಬಿಟ್ಟಿದ್ದು, ತಮ್ಮ ಕ್ಷೇತ್ರವಾದ ಬಾದಾಮಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಅಲ್ಲದೆ ಶನಿವಾರವಾದ ಇಂದು ಬಾಗಲಕೋಟೆಯಲ್ಲಿ ಇಂದಿರಾ ಕ್ಯಾಂಟೀನ್ಗೆ ಚಾಲನೆ ನೀಡಿ ಕೆಡಿಪಿ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.

ಆದರೆ, ಇದೇ ಸಂದರ್ಭದಲ್ಲಿ ಶನಿವಾರ ಬಿಜೆಪಿ ಹಿರಿಯ ನಾಯಕ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಸಹ ಬಾಗಲಕೋಟೆಗೆ ಆಗಮಿಸುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಇಂದು ಬಾಗಲಕೋಟೆಯಲ್ಲಿ ನಡೆಯಲಿರುವ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆ, ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಈಶ್ವರಪ್ಪ ನಗರಕ್ಕೆ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವುದು ಅವರ ಉದ್ದೇಶ. ಆದರೆ, ಈಶ್ವರಪ್ಪನವರ ಬಾಗಲಕೋಟೆ ಭೇಟಿಗೆ ಇದಕ್ಕಿಂತ ಬೇರೆಯದೇ ಮಹತ್ವದ ಕಾರಣವಿದೆ ಎನ್ನುತ್ತಿದೆ ಬಿಜೆಪಿ ಪಕ್ಷದ ಮೂಲಗಳು.ಇದನ್ನೂ ಓದಿ : IMA Jewels Fraud Case | ಮನ್ಸೂರ್​ ಖಾನ್​ ಜೊತೆ ವ್ಯವಹಾರ ಪ್ರಕರಣ ಸಂಬಂಧ ಸಚಿವ ಜಮೀರ್​ಗೆ ಇ.ಡಿ.ಯಿಂದ ಸಮನ್ಸ್​ ಜಾರಿ

ಉತ್ತರ ಕರ್ನಾಟಕದಲ್ಲೇ ಅತಿಹೆಚ್ಚು ಕುರುಬ ಹಾಗೂ ಎಸ್.ಟಿ ಜನ ಸಮುದಾಯ ಕಂಡುಬರುವ ಕ್ಷೇತ್ರಗಳಲ್ಲಿ ಬಾಗಲಕೋಟೆ ಸಹ ಒಂದು. ಇದೇ ಕಾರಣಕ್ಕೆ ಕುರುಬ ಮತಗಳನ್ನು ನೆಚ್ಚಿಕೊಂಡು ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸಿದ್ದರು. ಹೀಗಾಗಿ ಈಶ್ವರಪ್ಪನವರೂ ಕುರುಬ ನಾಯಕರೇ ಆಗಿದ್ದು, ಜಿಲ್ಲೆಯಲ್ಲಿ ಕುರುಬ, ದಲಿತ ಹಾಗೂ ಇತರೆ ಹಿಂದುಳಿದ ಸಮಾಜದ ಮತಗಳನ್ನು ಕ್ರೋಢೀಕರಿಸುವುದು ಹಾಗೂ ಆ ಮೂಲಕ ಸಿದ್ದರಾಮಯ್ಯನವರನ್ನು ಕಟ್ಟಿಹಾಕುವುದು ಬಿಜೆಪಿ ಪ್ಲಾನ್.

ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ಈಶ್ವರಪ್ಪನವರಿಗೆ ವಹಿಸಿಕೊಟ್ಟಿದೆ. ಅಲ್ಲದೆ ಇದರ ಕಾರ್ಯ ರೂಪಕ್ಕೆ ಇನ್ನೂ ನಾಲ್ಕು ವರ್ಷಗಳ ಕಾಲಾವಕಾಶ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗಲಿದೆ? ಸಿದ್ದರಾಮ್ಯನವರ ಕೋಟೆಯಲ್ಲಿ ಈಶ್ವರಪ್ಪನ ಅಟ ನಡೆಯುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

First published: June 29, 2019, 8:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading