ಮಂಡ್ಯ ಲೋಕಸಭಾ ಕ್ಷೇತ್ರ ಗೆಲ್ಲಲು ಬಿಜೆಪಿ ಬಿಗ್ ಪ್ಲ್ಯಾನ್ ; ಯದುವೀರ ಒಡೆಯರ್ ಮಂಡ್ಯದಿಂದ ಸ್ಪರ್ಧೆ ಸಾಧ್ಯತೆ?

news18
Updated:September 7, 2018, 2:48 PM IST
ಮಂಡ್ಯ ಲೋಕಸಭಾ ಕ್ಷೇತ್ರ ಗೆಲ್ಲಲು ಬಿಜೆಪಿ ಬಿಗ್ ಪ್ಲ್ಯಾನ್ ; ಯದುವೀರ ಒಡೆಯರ್ ಮಂಡ್ಯದಿಂದ ಸ್ಪರ್ಧೆ ಸಾಧ್ಯತೆ?
news18
Updated: September 7, 2018, 2:48 PM IST
- ರಾಘವೇಂದ್ರ ಗಂಜಾಮ್ ,ನ್ಯೂಸ್ 18 ಕನ್ನಡ 

ಮಂಡ್ಯ (ಸೆ.07) :  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಮಂಡ್ಯ ಲೋಕಸಭೆ ವಶಪಡಿಸಿಕೊಳ್ಳಲು ಬಿಜೆಪಿ ಬಿಗ್ ಪ್ಲ್ಯಾನ್ ರೆಡಿ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿರುವುದರಿಂದ ಮೈಸೂರು ರಾಜಮನೆತನವನ್ನು ಮಂಡ್ಯಕ್ಕೆ ಕರೆತರಲು ತೆರೆಮರೆಯ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಮೈಸೂರು ಸಂಸ್ಥಾನದ ರಾಜ ಯದುವೀರ್ ಒಡೆಯರ್ ಅವರನ್ನ ಮಂಡ್ಯಕ್ಕೆ ಕರೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಈಗಾಗಲೇ ಬಿಜೆಪಿ ವರಿಷ್ಠರು ಯದುವೀರ್ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಮಂಡ್ಯದಲ್ಲಿ ಯದುವೀರ್ ಒಡೆಯರ್ ಸ್ಪರ್ಧಿಸುವಂತೆ ಬಿಜೆಪಿ ಕಾರ್ಯಕರ್ತರು ಕೂಡಾ ಒತ್ತಾಯಿಸಿದ್ದಾರೆಯದುವೀರ್ ಮಂಡ್ಯದಲ್ಲಿ ಸ್ಪರ್ಧಿಸಿದ್ದರೆ  ಸಕ್ಕರೆ ನಾಡಿನ ಜನರು ಅವರ ಕೈ ಹಿಡಿಯುವ ಸಾಧ್ಯತೆ ಇದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಹಿಂದೆ ಯದುವೀರ್ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಬಿಜೆಪಿ ನಾಯಕರು ಅವರನ್ನ ಮಂಡ್ಯಕ್ಕೆ ಕರೆ ತರಲು ಪ್ಲಾನ್ ಮಾಡುತ್ತಿದ್ದಾರೆಅದರಲ್ಲೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ಸಿಂಹ ಅವರಿಗೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕಾಗಿ  ಮಂಡ್ಯಕ್ಕೆ ಯದುವೀರ್ ಅವರನ್ನ ಮಂಡ್ಯಕ್ಕೆ ಕರೆ ತರಲು ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

.

 
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...