news18-kannada Updated:November 2, 2020, 10:28 AM IST
ಸಾಂದರ್ಭಿಕ ಚಿತ್ರ
ಕಾರವಾರ(ನ.02): ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ ತಾಲೂಕಿನ ನಗರಸಭೆ ಆಡಳಿತ ಮತ್ತು ಅಂಕೋಲಾ ತಾಲೂಕಿನ ಪುರಸಭೆ ಆಡಳಿತ ಬಿಜೆಪಿ ಬಾಚಿಕೊಂಡಿದೆ. ಕಾಂಗ್ರೆಸ್ ಪಕ್ಷ ಸ್ಪರ್ಧೆಗೂ ಬಾರದೆ ಹಿಂದೆ ಸರಿದಿದೆ. ತೀರಾ ಕುತೂಹಲ ಕೆರಳಿಸಿದ್ದ ಕಾರವಾರ ನಗರಸಭೆ ಆಡಳಿತ ಕೊನೆಗೂ ಬಿಜೆಪಿ ತೆಕ್ಕೆಗೆ ಬಂದಿದೆ. ಬಿಜೆಪಿ ಆಡಳಿತಕ್ಕೆ ಬರಲು ಜೆಡಿಎಸ್ ಪಕ್ಷ ಬೇಷರತ್ ಬೆಂಬಲ ನೀಡಿ ಅಚ್ಚರಿ ಬೆಳವಣಿಗೆಗೆ ಕಾರಣವಾಗಿದೆ. ಭಾನುವಾರ ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು, ಬಿಜೆಪಿ ಪಕ್ಷ ಅವಿರೋಧವಾಗಿ ಜೆಡಿಎಸ್ ಸಹಾಯದಿಂದ ಆಡಳಿತಕ್ಕೆ ಬಂದಿದೆ. ಶಿರಸಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಸದಸ್ಯರು ಪೈಪೋಟಿ ನೀಡಿದರಾದರೂ, ಗೆಲುವಿನ ದಡ ತಲುಪಲಾಗದೆ ಪರಾಭವಗೊಂಡರು. ಈ ಹಿನ್ನಲೆಯಲ್ಲಿ ಶಿರಸಿ ನಗರಸಭೆ ಗಾದಿ ಕೂಡಾ ಬಿಜೆಪಿ ತೆಕ್ಕೆಗೆ ಬಂತು. ಇನ್ನು ಅಂಕೋಲಾ ಪುರಸಭೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್ ಸ್ಪರ್ಧೆಗೆ ಬಾರದೆ ಹಿಂದೆ ಸರಿದಿದೆ. ಭಾನುವಾರ ನಡೆದ ಮೂರು ತಾಲೂಕಿನ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
ಕಾಂಗ್ರೆಸ್ ಮೌನಇತ್ತೀಚಿನ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತೀರಾ ಹಿಂದೆ ಸರಿಯುತ್ತಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಉತ್ತರ ಕನ್ನಡ ಜಿಲ್ಲೆ ಈಗ ಬಿಜೆಪಿ ಮಯವಾಗುತ್ತಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಕಬ್ಜ ಪಡೆದುಕೊಳ್ಳುತ್ತಿದೆ. ಇಷ್ಟೆಲ್ಲ ಬೆಳವಣಿಗೆ ನಡೆದರೂ ಕಾಂಗ್ರೆಸ್ ನಾಯಕರು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ತಣ್ಣಗಾಗಿದ್ದಾರೆ.
ಸೋಂಕಿತನೊಂದಿಗೆ ಸಂಪರ್ಕ; ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಸ್ವಯಂ ಕ್ವಾರಂಟೈನ್
ಕಾರವಾರ ನಗರಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಗಿ ಆಡಳಿತ ನಡೆಸುವ ಎಲ್ಲ ಅವಕಾಶ ಇತ್ತು. ಆದ್ರೆ ಇಲ್ಲಿ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರು ಸೇರಿ ಇಲ್ಲಿನ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಸತೀಶ್ ಸೈಲ್ ಆಸಕ್ತಿ ತೋರದೆ ಇದಿದ್ರಿಂದ ಕೊನೆ ಗಳಿಗೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡ ಆನಂದ ಅಸ್ನೋಟಿಕರ್ ಬೆಜೆಪಿಗೆ ಬೇಷರತ್ ಬೆಂಬಲ ನೀಡಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿದ್ದಾರೆ. ಇದು ಕ್ಷೇತ್ರದಲ್ಲಿ ಅಚ್ಚರಿ ಬೆಳವಣಿಗೆ ಕೂಡಾ ಹೌದು. ಈಗ ಬಿಜೆಪಿಯ ಐವರು ಮತ್ತು ಕಾಂಗ್ರೆಸ್ ಪಕ್ಷದಿಂದ ಓರ್ವ ಮಾತ್ರ ಶಾಸಕರಿದ್ದಾರೆ, ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಜಿಲ್ಲೆ ಈಗ ಕೇವಲ ಒಂದು ಶಾಸಕ ಸ್ಥಾನಕ್ಕೆ ಸೀಮಿತವಾಗಿದೆ. ಹೀಗಿರುವಾಗ ನಗರಸಭೆ ಅಧಿಕಾರ ಕೂಡಾ ಬಿಜೆಪಿ ಪಾಲಾಗುತ್ತಿರೋದು ಕಾಂಗ್ರೆಸ್ ಜಿಲ್ಲೆಯಲ್ಲಿ ತೆರೆಮರೆಗೆ ಸರಿಯುತ್ತಿದೆ.
ಕಾಂಗ್ರೆಸ್ನಿಂದ ಬಿಜೆಪಿ ಹಾರಲು ಪ್ರಯತ್ನ
ಜಿಲ್ಲೆಯ ಬಹುತೇಕ ಕಾಂಗ್ರೆಸ್ ನಾಯಕರು ಬಿಜೆಪಿ ಹೊಸಿಲು ತುಳಿಯಲು ತಯಾರಿಯಲ್ಲಿ ಇದ್ದಾರೆ. ಹೀಗಿರುವಾಗ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಾವ್ಯಾಕೆ ಹರಸಾಹಸ ಪಡಬೇಕು ಎನ್ನುವ ಉದಾಸೀನತೆ ಕೂಡಾ ಇವತ್ತುಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ ದೇಶಪಾಂಡೆ ಕಾಂಗ್ರೆಸ್ ಭದ್ರಕೋಟೆಯನ್ನ ಉಳಿಸಿಕೊಂಡಿದ್ದು, ಇಲ್ಲಿ ಏನೇ ನಡೆದರು ದೇಶಪಾಂಡೆ ಮೂಗಿನ ಕೆಳಗೆ ನಡೆಯಬೇಕು. ಈ ಕ್ಷೇತ್ರ ಹೊರತು ಪಡಿಸಿ ಎಲ್ಲ ಕ್ಷೇತ್ರದಲ್ಲೂ ಕಾಂಗ್ರೆಸ್ ಹಿಡಿತ ಕಳೆದುಕೊಂಡಿದೆ.
ಮಾಜಿ ಶಾಸಕರಲ್ಲಿ ಇಲ್ಲ ಆಸಕ್ತಿ!
ಉತ್ತರ ಕನ್ನಡ ಜಿಲ್ಲೆಯ ಮಾಜಿ ಶಾಸಕರಲ್ಲಿ ಅಧಿಕಾರದ ಬಗ್ಗೆ ಮತ್ತು ಪಕ್ಷ ಸಂಘಟನೆ ಬಗ್ಗೆ ಆಸಕ್ತಿ ಇಲ್ಲದಂತಾಗಿದೆ. ತಳಮಟ್ಟದ ಕಾರ್ಯಕರ್ತರ ಸಂಖ್ಯೆ ಕೂಡಾ ಕ್ಷೀಣಿಸುತ್ತಿದೆ, ಬಿಜೆಪಿ ಈ ಎಲ್ಲ ಕ್ಷೇತ್ರವನ್ನು ಕಬ್ಜ ಪಡೆದುಕೊಂಡು ಮೆರೆಯುತ್ತಿದೆ. ಇವೆಲ್ಲ ಕಾಂಗ್ರೆಸ್ ಮಾಜಿಗಳಿಗೆ ಕಂಡರೂ ಮುಂದೊಂದು ದಿನ ನಾವು ಬಿಜೆಪಿ ತಾನೆ ಎಂಬ ಮನೋಭಾವನೆಯಲ್ಲಿ ತೇಲುವಂತಿದ್ದೆ ಇವರ ನಡೆ.. ಒಟ್ಟಾರೆ ಕಾಂಗ್ರೆಸ್ ಭದ್ರ ಕೋಟೆಯನ್ನ ಬಿಜೆಪಿ ಛಿದ್ರ ಮಾಡುತ್ತಿದೆ. ಮತ್ತೆ ಕಾಂಗ್ರೆಸ್ ಕಟ್ಟಲು ಹರಸಾಹಸವೇ ಪಡಬೇಕು.
Published by:
Latha CG
First published:
November 2, 2020, 10:28 AM IST