ಬೆಳಗಾವಿ: ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Former Minister Satish Jarkiholi) ಅವರನ್ನು ಸೋಲಿಸಲು ಬಿಜೆಪಿ (BJP) ರಣತಂತ್ರ ಪ್ರಯೋಗಿಸುತ್ತಿದೆ. ಜಾರಕಿಹೊಳಿ ಅವರ ಯಮಕನಕರಡಿ (Yamakanakaradi) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾರುತಿ ಅಷ್ಟಗಿ (Maruti Ashtagi) ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. 2013 ಮತ್ತು 2018ರ ಚುನಾವಣೆಯಲ್ಲಿಯೂ ಸತೀಶ್ ಜಾರಕಿಹೊಳಿ ವಿರುದ್ಧ ಮಾರುತಿ ಅಷ್ಟಗಿ ಸ್ಪರ್ಧಿಸಿ ಸೋತಿದ್ದರು. ಜಾರಕಿಹೊಳಿ ಗೆಲುವಿನ ಕುದುರೆ ಕಟ್ಟಿಹಾಕಲು ಹಿಂದುತ್ವದ ಅಜೆಂಡಾ (Hindutva Agenda) ಇಟ್ಟುಕೊಂಡು ಬಿಜೆಪಿ ಚುನಾವಣಾ ಅಖಾಡಕ್ಕೆ ಇಳಿದಿದೆ. ಹಿಂದು ಫೈರ್ ಬ್ರಾಂಡ್ ಗಳನ್ನ ಕರೆಸಿ ಪ್ರಚಾರ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಹಿಂದು ಅಶ್ಲೀಲ ಎಂದಿದ್ದ ಸತೀಶ್ ಜಾರಕಿಹೊಳಿಯವರನ್ನು ಹಿಂದುತ್ವದ ಮೂಲಕವೇ ಕಟ್ಟಿ ಹಾಕಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಸತೀಶ್ ಜಾರಕಿಹೋಳಿ ಆಡಿದ ಮಾತುಗಳನ್ನೆ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಮುಖ್ಯವಾಗಿ ಚುನಾವಣಾ ದಾಳವಾಗಿ ಮಾಡಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ಮಾರುತಿ ಅಷ್ಟಗಿಗೆ ಅನುಕಂಪದ ಅಲೆ
ಸಿಎಂ ಯೋಗಿ ಆದಿತ್ಯನಾಥ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಂತಹ ನಾಯಕರನ್ನ ಕರೆಸಿ ಪ್ರಚಾರ ಮಾಡಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಕಳೆದ ಬಾರಿ ಚುನಾವಣೆಯಲ್ಲಿ ಮಾರುತಿ ಅಷ್ಟಗಿ 2,400 ಮತಗಳ ಅಂತರದಿಂದ ಸೋತಿದ್ದರು. ಸೋತರು ಕ್ಷೇತ್ರದಲ್ಲಿಯೇ ಇರೋ ಮಾರುತಿ ಅಷ್ಟಗಿ ಅನುಕಂಪದ ಅಲೆ ವರ್ಕೌಟ್ ಆಗಬಹುದು ಎನ್ನಲಾಗುತ್ತಿದೆ.
ಯಮಕನಮರಡಿ ಕ್ಷೇತ್ರ ಮರಾಠಾ, ಹಿಂದೂ ಹಾಗೂ ಎಸ್ಟಿ ಸಮುದಾಯದ ಮತಗಳನ್ನು ಹೊಂದಿದೆ. ಈ ಬಾರಿ ಹೇಗಾದರೂ ಮಾಡಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿ ಕ್ಷೇತ್ರ ವಶಕ್ಕೆ ಪಡೆಯಲು ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ: PM Modi: ಇಂದು ಚಿಕ್ಕಬಳ್ಳಾಪುರ, ಬೆಂಗಳೂರು, ದಾವಣಗೆರೆಗೆ ಮೋದಿ; ಪ್ರಧಾನಿಗಳ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ
ಜಾರಕಿಹೊಳಿ ವರ್ಚಸ್ಸು ತಗ್ಗಿಸಲು ಪ್ಲಾನ್
ಯಮಕನಕರಡಿಯಲ್ಲಿ ಪ್ರಚಾರ ಹೆಚ್ಚಿಸಿದರೆ ಸತೀಶ್ ಜಾರಕಿಹೊಳಿ ಕ್ಷೇತ್ರ ಬಿಟ್ಟು ಓಡಾಡಲ್ಲ. ಜಿಲ್ಲೆಯಲ್ಲಿ ಪ್ರಚಾರ ನಡೆಸದೇ ತಮ್ಮ ಕ್ಷೇತ್ರದಲ್ಲಿಯೇ ಉಳಿಯುತ್ತಾರೆ. ಈ ಮೂಲಕ ಜಿಲ್ಲೆಯಲ್ಲಿ ಜಾರಕಿಹೊಳಿ ವರ್ಚಸ್ಸು ತಗ್ಗಿಸಿ ಇನ್ನುಳಿದ ಕ್ಷೇತ್ರದಲ್ಲೂ ಬಿಜೆಪಿ ಸುಲಭವಾಗಿ ಗೆಲ್ಲಸಿಕೊಳ್ಳಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ