ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಉಸ್ತುವಾರಿಯನ್ನಾಗಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಮತ್ತು ಸಹಪ್ರಭಾರಿಯಾಗಿ ಅಣ್ಣಾಮಲೈ (Annamalai) ಅವರನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP President JP Nadda) ಸಲಹೆ ಮೇರೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸದ್ಯ ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಮಂತ್ರಿಯಾಗಿದ್ದಾರೆ. ಇನ್ನು ಅಣ್ಣಾಮಲೈ ಪ್ರಸ್ತುತ ತಮಿಳುನಾಡು ಬಿಜೆಪಿ ರಾಜಾಧ್ಯಕ್ಷರಾಗಿದ್ದಾರೆ. ಅಣ್ಣಾಮಲೈ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಬಿಜೆಪಿ ಸೇರಿದ್ದಾರೆ.
ವಿಶೇಷ ಕಾರ್ಯಕಾರಿಣಿ ಸಭೆ ಹಿನ್ನೆಲೆ ಬಿಜೆಪಿ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ವೇದಿಕೆಗೆ ತೆರಳುವ ಮುನ್ನ ಸಭಿಕರ ಕುರ್ಚಿಯಲ್ಲಿ ನಾಯಕರು ಕುಳಿತಿದ್ದರು. ಈ ವೇಳೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ, ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಮುಂದಾದರು.
ಈ ವೇಳೆ ಜಗದೀಶ್ ಶೆಟ್ಟರ್, ತಾವು ಕುಳಿತಿದ್ದ ಕುರ್ಚಿಯನ್ನು ಯಡಿಯೂರಪ್ಪ ಅವರಿಗೆ ಬಿಟ್ಟುಕೊಟ್ಟರು. ಕೂಡಲೇ ಬಿ.ಎಲ್.ಸಂತೋಷ್ ತಮ್ಮ ಕುರ್ಚಿಯನ್ನು ಶೆಟ್ಟರ್ ಅವರಿಗೆ ನೀಡಿ ಹಿಂದಿನ ಸಾಲಿನಲ್ಲಿ ಕುಳಿತರು.
BJP National President Shri @JPNadda has appointed Union Minister Shri @dpradhanbjp as the BJP's Incharge and Tamil Nadu BJP President Shri @annamalai_k as the Co-incharge for the upcoming Karnataka Election 2023. pic.twitter.com/Wxe1KswjhL
— BJP (@BJP4India) February 4, 2023
ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮೊನ್ನೆ ತಾನೇ ಕೇಂದ್ರ ಬಜೆಟ್ ಮಂಡನೆ ಮಾಡಿದೆ. ಪ್ರತಿಪಕ್ಷಗಳು ಸಹ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸ್ವಾಗತ ಮಾಡಿದ್ದಾರೆ. ಬಹುಶಃ ಕರ್ನಾಟಕ ರಾಜ್ಯಕ್ಕಂತೂ ಬಜೆಟ್ನಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಏಪ್ರಿಲ್ 10-12 ರೊಳಗೆ ವಿಧಾನಸಭೆ ಚುನಾವಣೆ ಬರ್ತಿದೆ. ಬಹುಶಃ ಈ ಚುನಾವಣೆಯಲ್ಲಿ ಬಹಳ ಸ್ಪಷ್ಟ ಬಹುಮತ ಪಡೆದು 130-140 ಸೀಟು ಗೆದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ ಕಾಂಗ್ರೆಸ್ ನ ಇಬ್ಬರು ಮುಖಂಡರು ನಾನೇ ಮುಖ್ಯಮಂತ್ರಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ನಾನು ಅವರಿಗೆ ಕೇಳ್ತೀನಿ. ನಿಮ್ಮ ನಾಯಕ ಯಾರು ರಾಹುಲ್ ಗಾಂಧಿಯವರಾ ಎಂದು ಪ್ರಶ್ನೆ ಮಾಡಿದರು.
ಕರ್ನಾಟಕ ಬಜೆಟ್ನಲ್ಲಿಯೂ ಹೆಚ್ಚಿನ ಸವಲತ್ತುಗಳು
ನರೇಂದ್ರ ಮೋದಿ, ಅಮಿತ್ ಶಾ ಅಂತಹ ನಾಯಕರು ನಮ್ಮ ಜೊತೆ ಇರಬೇಕಾದರೆ, ಬರುವಂತ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಕರ್ನಾಟಕ ರಾಜ್ಯದ ಯಾವುದಾದರೂ ಒಂದು ಮನೆಗೆ ಹೋಗಿ, ಸರ್ಕಾರದ ಕಾರ್ಯಕ್ರಮ ಒಂದು ತಲುಪಿಲ್ಲ ಎಂಬುದನ್ನು ಒಂದಾದರೂ ಹೇಳಿ. ನಾಳೆ ಕರ್ನಾಟಕದ ಬಜೆಟ್ ಮಂಡನೆ ಕೂಡ ನೀವೆಲ್ಲ ನಿರೀಕ್ಷೆ ಮೀರಿ ಹೆಚ್ಚಿನ ಸವಲತ್ತುಗಳನ್ನು ಕೊಡ್ತೀವಿ ಎಂದು ಹೇಳಿದರು.
ಯಾವುದೇ ಶಕ್ತಿ ಕೂಡ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರುವ ತಡೆಯುವುದನ್ನು ಸಾಧ್ಯವಿಲ್ಲ. ಈ ಆತ್ಮವಿಶ್ವಾಸದ ಮೂಲಕ ನಾವೆಲ್ಲರೂ ಹೋಗಬೇಕಿದೆ. ಎಲ್ಲ ವರ್ಗದ ಸಮಸ್ಯೆ ಗಳ ಪರಿಹಾರ ಕೇಳಿದ್ರೆ ನಾವು 140 ಸ್ಥಾನ ಗೆಲ್ಲೋದಕ್ಕೆ ಕಷ್ಟ ಆಗಲ್ಲ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ
ಗೋಹತ್ಯ ನಿಷೇಧ ಕಾಯಿದೆ ಮಾಡಿದ್ದೇವೆ. ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣ ಆಗ್ತಿದ. ವಿಕಾಸಸೌಧದ ಮುಂದೆ ಅಂಬೇಡ್ಕರ್ ಸ್ಪೂರ್ತಿ ಭವನ ನಿರ್ಮಾಣ ಆಗ್ತಿದೆ, ಕಾಂಗ್ರೆಸ್ ಪಕ್ಷದ ಮುಖಂಡರು ಬಸ್ಸು ಯಾತ್ರೆ ಮಾಡ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ನಲ್ಲಿ ಅತೃಪ್ತಿ, ಅಸಮಧಾನ ತುಂಬಿ ತುಳುಕ್ತಿರೋದನ್ನು ನಾವು ನೋಡಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲರು ಒಟ್ಟಾಗಿದ್ದೇವೆ ಎಂದರು.
ಇದನ್ನೂ ಓದಿ: Bengaluru: ರೀಲ್ಸ್ ಜೊತೆಗಾರನ ಜೊತೆ ರಿಯಲ್ ಲೈಫ್ನಲ್ಲಿ ಪತ್ನಿ ಜೂಟ್; ಪತಿಯಿಂದ ದೂರು ದಾಖಲು
ಕಾಂಗ್ರೆಸ್ ಬಸ್ ಪಂಕ್ಚರ್ ಆಗುತ್ತೆ
ನಾವು ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡೋರು ಇದ್ದೇವೆ. ಕಾಂಗ್ರೆಸ್ ಬಸ್ ಯಾತ್ರೆ ಆರಂಭ ಆಗಿದ್ದರೂ ಅತೃಪ್ತಿ ಉಂಟಾಗಿದೆ. ಪರಮೇಶ್ವರ್ ಕೂಡ ಅಸಮಧಾನಗೊಂಡಿದ್ದಾರೆ. ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗುತ್ತೆ ಎಂದು ವ್ಯಂಗ್ಯ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ