ಉಪಚುನಾವಣೆಗೆ ಕೇಸರಿ ಕಹಳೆ; ಬಿಜೆಪಿಯಿಂದ ಎಲ್ಲಾ 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನಿಯೋಜನೆ

ಬಿಜೆಪಿಯೊಳಗೆ ಬಂಡಾಯ ಎದ್ದಿರುವ ಶರತ್ ಬಚ್ಚೇಗೌಡ ಅವರ ತಂದೆ ಹಾಗೂ ಹಿರಿಯ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯ ಉಸ್ತುವಾರಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಬಂಡಾಯದ ಬಿಸಿ ಇರುವ ಹೊಸಕೋಟೆ ಕ್ಷೇತ್ರಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ, ಎಸ್.ಆರ್. ವಿಶ್ವನಾಥ್ ಅವರಿದ್ದಾರೆ.

news18
Updated:November 13, 2019, 6:08 PM IST
ಉಪಚುನಾವಣೆಗೆ ಕೇಸರಿ ಕಹಳೆ; ಬಿಜೆಪಿಯಿಂದ ಎಲ್ಲಾ 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನಿಯೋಜನೆ
ನಳಿನ್ ಕುಮಾರ್ ಕಟೀಲ್
  • News18
  • Last Updated: November 13, 2019, 6:08 PM IST
  • Share this:
ಬೆಂಗಳೂರು(ನ. 13): ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಬಿಜೆಪಿ ರಾಜಕೀಯವಾಗಿ ಹೆಚ್ಚು ಸಕ್ರಿಯವಾಗಿದೆ. ಉಪಚುನಾವಣೆಗೆ ಪೂರ್ಣ ಮನಸ್ಸಿನಿಂದ ಅಣಿಗೊಂಡಿದೆ. ಎಲ್ಲಾ 15 ಕ್ಷೇತ್ರಗಳು ಪಕ್ಷದ ಉಸ್ತುವಾರಿಗಳನ್ನು ನಿಯೋಜಿಸಿದೆ. ರಾಜ್ಯದ ಬಹುತೇಕ ಹಿರಿಯ ನಾಯಕರೆಲ್ಲರೂ ಉಸ್ತುವಾರಿಗಳ ಪಟ್ಟಿಯಲ್ಲಿದ್ದಾರೆ. ಒಂದೊಂದು ಕ್ಷೇತ್ರಕ್ಕೆ ಇಬ್ಬರಿಂದ ಹಿಡಿದು ಐದಾರು ನಾಯಕರನ್ನು ಉಸ್ತುವಾರಿಗಳನ್ನಾಗಿ ಮಾಡಲಾಗಿದೆ.

ಬಿಜೆಪಿಯೊಳಗೆ ಬಂಡಾಯ ಎದ್ದಿರುವ ಶರತ್ ಬಚ್ಚೇಗೌಡ ಅವರ ತಂದೆ ಹಾಗೂ ಹಿರಿಯ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯ ಉಸ್ತುವಾರಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಬಂಡಾಯದ ಬಿಸಿ ಇರುವ ಹೊಸಕೋಟೆ ಕ್ಷೇತ್ರಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ, ಎಸ್.ಆರ್. ವಿಶ್ವನಾಥ್ ಅವರಿದ್ದಾರೆ. ಬಳ್ಳಾರಿಯ ಬಿ. ಶ್ರೀರಾಮುಲು ಅವರನ್ನು ಹುಣಸೂರಿನಲ್ಲಿ ನಿಯೋಜಿಸಲಾಗಿದೆ.

ಇಂದು ನಡೆದ ಕೋರ್ ಕಮಿಟಿ ಸಭೆಯ ಬಳಿಕ ಈ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ನಾಳೆಯಿಂದಲೇ ಈ ಉಸ್ತುವಾರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಕೋರ್​​ ಕಮಿಟಿ ಸಭೆ ಅಂತ್ಯ: ಅನರ್ಹ ಶಾಸಕರನ್ನೇ ಅಭ್ಯರ್ಥಿಗಳಾಗಿ ಘೋಷಿಸಲು ನಿರ್ಧಾರ

ರಾಜ್ಯ ಬಿಜೆಪಿ ಉಪಚುನಾವಣೆ ಉಸ್ತುವಾರಿಗಳ ಪಟ್ಟಿ:
ಅಥಣಿ- ಸಚಿವ ಕೆ.ಎಸ್‌. ಈಶ್ವರಪ್ಪ, ಡಿಸಿಎಂ ಲಕ್ಷ್ಮಣ ಸವದಿ ಮತ್ತು ಸಂಸದ ಅಣ್ಣಾ ಸಾಹೇಬ್ ಜೊಲ್ಲೆ
ಕಾಗವಾಡ- ಸಚಿವ ಸಿ.ಸಿ. ಪಾಟೀಲ್ , ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಟ, ಶಾಸಕರಾದ ಪಿ.‌ ರಾಜೀವ್ ಮತ್ತು ಅರವಿಂದ ಬೆಲ್ಲದ್ಗೋಕಾಕ್- ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ್, ಎ.ಎಸ್‌.‌ ಪಾಟೀಲ್ ನಡಹಳ್ಳಿ
ಯಲ್ಲಾಪುರ-  ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ,  ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ಅನಂತಕುಮಾರ್ ಹೆಗಡೆ, ಶಾಸಕರಾದ ಸುನೀಲ್ ಕುಮಾರ್, ಹರೀಶ್ ಪೂಂಜಾ
ಹಿರೇಕೆರೂರು- ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಯು.ಬಿ.‌ ಬಣಕಾರ್
ರಾಣೆಬೆನ್ನೂರು-  ಸಚಿವ ಜಗದೀಶ್ ಶೆಟ್ಟರ್, ಸಚಿವ ಪ್ರಭು ಚೌಹಾಣ್, ಸಂಸದ ಜಿ.ಎಂ. ಸಿದ್ದೇಶ್ವರ, ಶಿವಮೊಗ್ಗ ಬಿಜೆಪಿ ಮುಖಂಡ ಗಿರೀಶ್ ಪಟೇಲ್
ವಿಜಯನಗರ- ಡಿಸಿಎಂ ಗೋವಿಂದ ಕಾರಣಜೋಳ, ಎಂಎಲ್ಸಿ ರವಿಕುಮಾರ್, ಸಂಸದ ಸಂಗಣ್ಣ ಕರಡಿ,  ಬಿಜೆಪಿ ಪರಾಜಿತ ಅಭ್ಯರ್ಥಿ ಗವಿಯಪ್ಪ,
ಚಿಕ್ಕಬಳ್ಳಾಪುರ- ಸಚಿವ ಸಿ.ಟಿ. ರವಿ, ಕೇಂದ್ರ ಸಚಿವ ಡಿ.ವಿ.‌ ಸದಾನಂದ ಗೌಡ, ಸಂಸದ ಪಿ.ಸಿ. ಮೋಹನ್, ಸಂಸದ ಬಿ.ಎನ್. ಬಚ್ಚೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮಂಜುನಾಥ್
ಕೆ.ಆರ್. ಪುರಂ- ಸಚಿವ ಆರ್.‌ ಅಶೋಕ್, ಕೇಂದ್ರ ಸಚಿವ ಡಿ.ವಿ.‌ ಸದಾನಂದ ಗೌಡ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಶಾಸಕ ಸತೀಶ್ ರೆಡ್ಡಿ
ಯಶವಂತಪುರ- ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಂ. ಕೃಷ್ಣಪ್ಪ, ಮಾಜಿ ಎಂಎಲ್ಸಿಗಳಾದ ಅಶ್ವಥ್ ನಾರಾಯಣ, ಜಗ್ಗೇಶ್
ಮಹಾಲಕ್ಷ್ಮೀ ಲೇಔಟ್- ಸಚಿವ ವಿ.‌ ಸೋಮಣ್ಣ, ಸಚಿವ ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಖಜಾಂಚಿ ಸುಬ್ಬನರಸಿಂಹ
ಶಿವಾಜಿನಗರ- ಬೆಂಗಳೂರು ಮಹಾ ನಗರ ಅಧ್ಯಕ್ಷ ಪಿ.ಎನ್. ಸದಾಶಿವ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಎಸ್. ಮುನಿರಾಜು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕ ಎಸ್. ರಘು
ಹೊಸಕೋಟೆ- ಡಿಸಿಎಂ ಡಾ. ಅಶ್ವಥ್ ನಾರಾಯಣ, ಸಿಎಂ ರಾಜಕೀಯ ಕಾರ್ಯದರ್ಶ ಎಸ್. ಅರ್. ವಿಶ್ವನಾಥ್, ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ
ಕೆ.ಆರ್. ಪೇಟೆ- ಸಚಿವ ಜೆ.ಸಿ. ಮಾಧುಸ್ವಾಮಿ, ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ,  ಶಾಸಕ ಪ್ರೀತಂ ಗೌಡ
ಹುಣಸೂರು- ಸಚಿವ ಶ್ರೀರಾಮುಲು, ಮಾಜಿ ಸಚಿವ ವಿಜಯಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್.

(ವರದಿ: ರಮೇಶ್ ಹಿರೇಜಂಬೂರು)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 13, 2019, 6:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading