ಗ್ರಾಮ ಪಂಚಾಯತ್ ಚುನಾವಣೆ ಸಮೀಪ ಹಿನ್ನೆಲೆ; ಸಾವಿನ‌ ಮನೆಯಲ್ಲೂ ಬಿಜೆಪಿ-ಜೆಡಿಎಸ್​ ಸಾಂತ್ವನದ ರಾಜಕೀಯ

ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸರ್ಕಾರ ರೈತನ ಆತ್ಮಹತ್ಯೆ ತಡೆಗೆ ವಿವಿಧ ಯೋಜನೆಗಳನ್ನು ನೀಡಬೇಕು. ನಮ್ಮ ತಂದೆಯ ಸರ್ಕಾರ ಐದು ವರ್ಷ ಇದ್ದಿದ್ದರೆ ಆ ಯೋಜನೆಗಳು ಜಾರಿಯಾಗ್ತಿದ್ದವು ಎಂದರು. ಇನ್ನು ಸಚಿವ ನಾರಾಯಣಗೌಡ ತಮಗಿಂತ ಮುಂಚೆ ಇಲ್ಲಿಗೆ ಭೇಟಿ ನೀಡಿದ್ದರ ಕುರಿತು ಪ್ರತಿಕ್ರಿಯಿಸಿ, ನಾನು ಬರೋದ್ರಿಂದಾದ್ರು ಅವರು ಬಂದ್ರಲ್ಲ ಅದೇ ಖುಷಿ ಎಂದರು.

ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ

ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ

  • Share this:
ಮಂಡ್ಯ(ನ.09): ಸಕ್ಕರೆನಾಡು ಮಂಡ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ಪಕ್ಷಗಳು ಆಕ್ಟೀವ್ ಆಗಿದ್ದು ಪಕ್ಷ ಸಂಘಟನೆಗೆ ಮುಂದಾಗಿವೆ. ಅದ್ರಲ್ಲೂ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸಾವಿನ‌ ಮನೆಯಲ್ಲೂ ರಾಜಕೀಯಕ್ಕೆ ಮುಂದಾಗಿವೆ. ಕೆ‌.ಆರ್.ಪೇಟೆಯ ಚೌಡೇನಹಳ್ಳಿ ಆತ್ಮ ಹತ್ಯೆ ಮಾಡಿಕೊಂಡ ನಂಜೇಗೌಡನ ಮನೆಗೆ ಬಿಜೆಪಿಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಭೇಟಿ ಮಾಡಿ ಸಾಂತ್ವನ ಹೇಳಿದ್ರೆ, ಜೆಡಿಎಸ್ ಪಕ್ಷದ ಯೂತ್ ಐಕಾನ್ ನಿಖಿಲ್ ಕುಮಾರಸ್ವಾಮಿ ಕೂಡ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಹೌದು! ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಹತ್ತಿರ ಬರ್ತಿದ್ದಂತೆ  ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆಕ್ಟೀವ್ ಆಗಿವೆ‌. ಅದ್ರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಳ ಮಟ್ಟದ ಪಕ್ಷ ಸಂಘಟನೆಗೆ ಮುಂದಾಗಿದ್ದು, ಅದರಲ್ಲೂ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರ ಕಳೆದುಕೊಂಡ ಬಳಿಕ ಆ ಕ್ಷೇತ್ರದಿಂದಲೇ ತಳಮಟ್ಟದ ಸಂಘಟನೆಗೆ ಮುಂದಾಗಿದೆ.‌ ಕೆ.ಆರ್.ಪೇಟೆ ಉಪ ಚುನಾವಣೆ ಗೆದ್ದು ಸಚಿವರಾದ ಬಳಿಕ ನಾರಾಯಣಗೌಡ ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.

ಇತ್ತೀಚೆಗೆ ಕೆ.ಆರ್.ಪೇಟೆ ಕ್ಷೇತ್ರದ ಚೌಡೇನಹಳ್ಳಿಯಲ್ಲಿ ರೈತ ನಂಜೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ರೈತನ ಮನೆಗೆ ನಿಖಿಲ್ ಕುಮಾರ ಸ್ವಾಮಿ ಆಗಮಿಸಿ ಸಾಂತ್ವನ ಹೇಳಲು ಇಂದು ಬರುವ ಸುದ್ದಿ ತಿಳಿಯುತ್ತಿದ್ದಂತೆ, ಸಚಿವ ನಾರಾಯಣಗೌಡ  ನಿಖಿಲ್  ಭೇಟಿಗೂ ಮುನ್ನವೇ ಆ ಗ್ರಾಮದ ಮೃತ ರೈತನ ಮನೆಗೆ ತೆರಳಿ 25 ಸಾವಿರ ವೈಯಕ್ತಿಕ ಪರಿಹಾರ ನೀಡಿ ಸಾಂತ್ವನ ಹೇಳಿದರು. ಅಲ್ಲದೇ ಸರ್ಕಾರದ ಸವಲತ್ತು ಒದಗಿಸಿಕೊಡುವುದಾಗಿ ತಿಳಿಸಿದರು. ಇನ್ನು ನಿಖಿಲ್ ಬರುವ ಮುಂಚೆ ತಾವು ಬಂದಿರೋ ವಿಚಾರಕ್ಕೆ ನಾನು ನಿಖಿಲ್ ರಿಂದ ರಾಜಕೀಯ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.

ಸಚಿವ ನಾರಾಯಣಗೌಡ ಭೇಟಿ ನೀಡಿದ ದೃಶ್ಯ


Deepavali Festival: ದೀಪಾವಳಿ ಹಬ್ಬಕ್ಕೆ ಹುಬ್ಬಳ್ಳಿ ವಿಭಾಗದಿಂದ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ

ಇನ್ನು ಸಚಿವ ನಾರಾಯಣಗೌಡ ಭೇಟಿ ನೀಡಿ ತೆರಳುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರೊಂದಿಗೆ ಚೌಡೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತ ರೈತನ ಮನೆಯ ಕುಟುಂಬ ಸದಸ್ಯರಿಗೆ ವೈಯಕ್ತಿಕವಾಗಿ  ಪರಿಹಾರ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.  ಗ್ರಾಮಕ್ಕೆ ಬಂದ ನಿಖಿಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವಕರು ಮುಗಿಬಿದ್ದರೆ, ಜನರು ಸಾಮಾಜಿಕ ಅಂತರ ಮರೆತು ಕೊರೋನಾ ನಿಯಮ ಉಲ್ಲಂಘನೆ ಮಾಡಿದರು.

ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸರ್ಕಾರ ರೈತನ ಆತ್ಮಹತ್ಯೆ ತಡೆಗೆ ವಿವಿಧ ಯೋಜನೆಗಳನ್ನು ನೀಡಬೇಕು. ನಮ್ಮ ತಂದೆಯ ಸರ್ಕಾರ ಐದು ವರ್ಷ ಇದ್ದಿದ್ದರೆ ಆ ಯೋಜನೆಗಳು ಜಾರಿಯಾಗ್ತಿದ್ದವು ಎಂದರು. ಇನ್ನು ಸಚಿವ ನಾರಾಯಣಗೌಡ ತಮಗಿಂತ ಮುಂಚೆ ಇಲ್ಲಿಗೆ ಭೇಟಿ ನೀಡಿದ್ದರ ಕುರಿತು ಪ್ರತಿಕ್ರಿಯಿಸಿ, ನಾನು ಬರೋದ್ರಿಂದಾದ್ರು ಅವರು ಬಂದ್ರಲ್ಲ ಅದೇ ಖುಷಿ. ನಾನು ಇಲ್ಲಿಗೆ  ಬರುತ್ತಿರಲಿಲ್ಲವೆಂದು ವ್ಯಂಗ್ಯವಾಡಿ ಏನೇ ಆದ್ರು ನಮ್ಮ ರೈತರಿಗೆ ಒಳ್ಳೆಯದಾಗಬೇಕೆಂದ್ರು.

ಇನ್ನು ಮೃತ ರೈತ ನಂಜೇಗೌಡನ  ಮನೆಗೆ ಸಚಿವರು ಹಾಗೂ ಮಾಜಿ ಸಿಎಂ ಮಗ ನಿಖಿಲ್ ಕುಮಾರಸ್ವಾಮಿ ಬಂದು ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದ ಇಬ್ಬರಿಗೂ ಕುಟುಂಬ ಸದಸ್ಯರು ಧನ್ಯವಾದ ಹೇಳಿ ರೈತರಿಗೆ ಸರ್ಕಾರಗಳು ಸರಿಯಾದ ನ್ಯಾಯ ಒದಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಒಟ್ಟಾರೆ ಸಕ್ಕರೆನಾಡು ಮಂಡ್ಯದ ಕೆ.ಆರ್. ಪೇಟೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ‌. ಇದಕ್ಕಾಗಿ  ಜೆಡಿಎಸ್ ನ ನಿಖಿಲ್ ಜಿಲ್ಲೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಇತ್ತ ಸಚಿವರಾಗಿ ನಾರಾಯಣಗೌಡ  ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಎರಡು ಪಕ್ಷದವರು ಸತ್ತ ರೈತನ ಸೂತಕದ  ಮನೆಯಲ್ಲಿ ಕೂಡ ರಾಜಕೀಯ ಮಾಡಲು ಮುಂದಾಗಿರೋದು ಎಷ್ಟು ಸರಿ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
Published by:Latha CG
First published: