ಬೆಂಗಳೂರು: ಸೋತು ಸುಣ್ಣವಾಗಿ, ಸೈಡಿಗೆ ಸರಿದು ಸುಮ್ಮನಾಗಿದ್ದ ಬಿಜೆಪಿ-ಜೆಡಿಎಸ್ (BJP-JDS) ನಾಯಕರು ಮೈಕೊಡವಿ ನಿಂತಿದ್ದಾರೆ. ಉಭಯ ಪಕ್ಷಗಳ ಹೀನಾಯ ಸೋಲಿಗೆ ಕಾರಣವಾದ ಕಾಂಗ್ರೆಸ್ ಗ್ಯಾರಂಟಿಗಾಗಿ (Congress Guarantee) ಸಮರ ಸಾರಿದ್ದಾರೆ. ಫ್ರೀ ಫ್ರೀ ಅಂದ್ರಿ ಈಗೆಲ್ಲಿದೆ ಫ್ರೀ? (Free) ಜನ್ರೇ ಜೂನ್ 2ರಿಂದ ಬಿಲ್ ಕಟ್ಟಬೇಡಿ. ಬಸ್ ಟಿಕೆಟ್ ತಗೋಬೇಡಿ ಅಂತ ಮಾಜಿ ಡಿಸಿಎಂ ಆರ್.ಅಶೋಕ್ (R Ashok) ಹೇಳಿದ್ದಾರೆ. ಬಿಜೆಪಿಗರು ಮಾತ್ರವಲ್ಲ, ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕೂಡಾ ಸಿಡಿದೆದ್ದಿದ್ದಾರೆ. 200 ಯೂನಿಟ್‌ಗೆ 24 ಸಾವಿರ ಕೋಟಿ ಬೇಕು. ಅದನ್ನ ಎಲ್ಲಿಂದ ತರ್ತೀರಿ ಅಂತ ಪ್ರಶ್ನಿಸ್ತಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಕಿಡಿ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಕಿಡಿಕಾರಿದ್ದಾರೆ. ಅಲ್ಲದೇ ರಾಜ್ಯದ ಜನತೆ ಕರೆಂಟ್ ಬಿಲ್ ಕಟ್ಟಬೇಡಿ, 200 ಯೂನಿಟ್‌ಗೆ ವಿದ್ಯುತ್ ಬಿಲ್ ಕಟ್ಟಬೇಡಿ ಅಂತ ಕರೆ ನೀಡಿದ್ದಾರೆ. ಅಲ್ಲದೇ, ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಟಿಕೆಟ್ ಪಡೆಯಬೇಡಿ, ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳನ್ನು ಕೂಡಲೇ ಜಾರಿಗೆ ತರಬೇಕು ಅಂತ ಒತ್ತಾಯಿಸಿದರು.
ಇದನ್ನೂ ಓದಿ: Karnataka Cabinet Expanstion: 24 ಶಾಸಕರಿಗೆ ಒಲಿದು ಬಂದ 'ಮಂತ್ರಿ ಭಾಗ್ಯ'! 'ಕೈ' ಲಿಸ್ಟ್‌ನಲ್ಲಿ ಯಾರ ಯಾರ ಹೆಸರಿದೆ?
ನನಗೂ ಕೃಷಿ ಸಚಿವನಾಗುವ ಆಸೆಯಿದೆ
ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗದಿದ್ರೆ ರಾಜಕೀಯ ಸನ್ಯಾಸ ಸ್ವೀಕರಿಸ್ತೇನೆ ಎಂದು ನವಲಗುಂದ ಕಾಂಗ್ರೆಸ್ ಶಾಸಕ ಎನ್.ಎಚ್ ಕೋನರೆಡ್ಡಿ ಸವಾಲ್ ಹಾಕಿದ್ದಾರೆ. ನನಗೂ ಸಹ ಮುಖ್ಯ ಮಂತ್ರಿ, ಉಪಮುಖ್ಯ ಮಂತ್ರಿ, ಮಂತ್ರಿ ಯಾಗಬೇಕು ಅನ್ನೋ ಆಸೆಯಿದೆ. ಅವಕಾಶ ಸಿಗುತ್ತೆ ಅಂತ ಎಲ್ಲರಿಗೂ ಆಸೆ ಇರುತ್ತೆ. ನನಗೂ ಕೃಷಿ ಸಚಿವನಾಗುವ ಆಸೆಯಿದೆ. ಯುವಕರಿಗೆ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಬೇಕು ಅಂದರೆ ನನ್ನನ್ನು ಸಹ ಪರಿಗಣಿಸಿ, ನಮ್ಮ ಪಕ್ಷದ ವರಿಷ್ಠರಿಗೆ ಇದು ನನ್ನ ಮನವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ