ಯಲ್ಲಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ಘೋಷಣೆ - ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗದ್ದಲ

ಇಬ್ಬರು ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗಿದ ಕಾರಣ ಗದ್ದಲ ಪ್ರಾರಂಭವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕು ನುಗ್ಗಾಟ ನಡೆಯಿತು. ಈ ಸಂದರ್ಭದಲ್ಲಿ ಪೋಲಿಸರು ಮಧ್ಯ ಪ್ರವೇಶಿಸಿ ಗದ್ದಲವನ್ನು ಹತೋಟಿಗೆ ತಂದರು.

G Hareeshkumar | news18-kannada
Updated:November 27, 2019, 4:40 PM IST
ಯಲ್ಲಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ಘೋಷಣೆ - ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗದ್ದಲ
ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು
  • Share this:
ಕಾರವಾರ (ನ.27): ಮಾಜಿ ಸಚಿವ ಆರ್ ವಿ ದೇಶಪಾಂಡೆ ಕಾರಿನಲ್ಲಿ ಸಾಗುವಾಗ ಶಿವರಾಮ್ ಹೆಬ್ಬಾರ್ ಪರ ಘೋಷಣೆ ಕೂಗಲು ಬಂದು ಬಿಜೆಪಿ ಕಾರ್ಯಕರ್ತರು ಮುಖಭಂಗಕ್ಕೆ ಒಳಗಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಾಮಾಪುರ ಗ್ರಾಮದಲ್ಲಿ ನಡೆದಿದೆ

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮಾಜಿ ಸಚಿವ ಆರ್​ ವಿ ದೇಶಪಾಂಡೆ ಪ್ರಚಾರ ನಡೆಸಿ ಕಾರಿನಲ್ಲಿ ವಾಪಾಸ್ ತೆರಳುವಾಗ ಹೆಬ್ಬಾರ್ ಪರ ಘೋಷಣೆ ಕೂಗಲು ಬಿಜೆಪಿಯ ಕಾರ್ಯಕರ್ತರು ಮುಂದಾಗಿದ್ದರು. ಇದನ್ನ ಗಮನಿಸಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹಾಗೂ ದೇಶಪಾಂಡೆ ಪರ ಘೋಷಣೆ ಹಾಕಲು ಮುಂದಾದರು.

ಇಬ್ಬರು ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗಿದ ಕಾರಣ ಗದ್ದಲ ಪ್ರಾರಂಭವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕು ನುಗ್ಗಾಟ ನಡೆಯಿತು. ಈ ಸಂದರ್ಭದಲ್ಲಿ ಪೋಲಿಸರು ಮಧ್ಯ ಪ್ರವೇಶಿಸಿ ಗದ್ದಲವನ್ನು ಹತೋಟಿಗೆ ತಂದರು.

 ಸ್ವಪಕ್ಷದವರಿಂದ ಬಿಜೆಪಿ ಅಭ್ಯರ್ಥಿಗೆ ನಿಂದನೆ

ಸ್ವ ಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್​​ ಅವರಿಗೆ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ಧದಿಂದ ಬೈದು ಗ್ರಾಮದಿಂದ ಹೊರಕ್ಕೆ ಕಳುಹಿಸಿದ ಘಟನೆ ನಿನ್ನೆ ಬನವಾಸಿಯ ಅಜ್ಜರಣಿ ಗ್ರಾಮದಲ್ಲಿ ನಡೆದಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನೀವೆ ಕಾರಣರಾದವರು, ಹಿಂದೆ ಬಿಜೆಪಿ ತೆಗಳಿ ಈಗ ಆಡಿದ ಮಾತು ಉಳಿಸಿಕೊಳ್ಳಿ. ನಿಮ್ಮಿಂದಾಗಿ ಆಗಿನ ನಮ್ಮ ಅಭ್ಯರ್ಥಿ ಸೋಲುವಂತಾಯಿತು ಎಂದು ಬಿಜೆಪಿ ಕಾರ್ಯಕರ್ತರು ಜರಿದರೆ ಬಿಜೆಪಿ ಕಾರ್ಯಕರ್ತರೊಂದಿಗೆ ಕೈಜೋಡಿಸಿದ ಕಾಂಗ್ರೆಸ್ ಕಾರ್ಯಕರ್ತರು ನೀವು ಕಾಂಗ್ರೆಸ್ ನಲ್ಲೇ ಇದ್ದಿದ್ದರೆ ಮತ ನೀಡುತ್ತಿದ್ದೇವೆ. ಆದರೆ, ಬಿಜೆಪಿ ಗೆ ಹೋಗಿದ್ದೀರಿ ಹೇಗೆ ಓಟು ಕೊಡಲಿ ಎಂದು ಕಾರ್ಯಕರ್ತರು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ : ಯಲ್ಲಾಪುರ -ಮುಂಡಗೋಡ ಕ್ಷೇತ್ರದ ಪ್ರತ್ಯಕ್ಷ ವರದಿ : ಬಿಜೆಪಿ-ಕಾಂಗ್ರೆಸ್ ನೇರ ಜಿದ್ದಾಜಿದ್ದಿ; ಲೆಕ್ಕಕ್ಕಿಲ್ಲದ ಜೆಡಿಎಸ್ಇನ್ನೂ ಸ್ವಪಕ್ಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಈ  ಮಾತಿನಿಂದ ವಿಚಲಿತರಾದ ಬಿಜೆಪಿ ಅಭ್ಯರ್ಥಿ ಶಿವರಾಮ್​​​ ಹೆಬ್ಬಾರ್ ಸಮಾಧಾನ ಪಡಿಸಲು ಮುಂದಾದರೂ ಹೇಳದೇ ಹೆಬ್ಬಾರ್ ಅವರು ಅಲ್ಲಿಂದ ಹೊರ ನಡೆದರು.
First published: November 27, 2019, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading