ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ (Karnataka Assembly Session) ಬರುತ್ತಿದ್ದಂತೆ ರಾಜಕಾರಣಿಗಳಿಂದ ಹಬ್ಬ ಹರಿದಿನಗಳ ಆಚರಣೆಗಳೂ ಜೋರಾಗಿ ನಡೆಯುತ್ತಿದೆ. ಜನರ ಜೊತೆ ಬೆರೆಯಲು, ಜನರೊಂದಿಗೆ ನಾವಿದ್ದೀವಿ ಅನ್ನೋದನ್ನು ತೋರಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಇದಕ್ಕಾಗಿ ಸದ್ಯ ಹೋಳಿ ಹಬ್ಬದ (Holi Celebration) ಮೂಲಕ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಮುಂದಾಗಿದ್ದಾರೆ.
ಬೆಳಗಾವಿಯಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಯೋಜಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಬಣ್ಣದಾಟ ಆಯೋಜನೆ ಮಾಡಲಾಗಿದ್ದು, ಅಲ್ಲಲ್ಲಿ ಡಿಜೆ ಮ್ಯೂಸಿಕ್‌ಗಳನ್ನು ಆಯೋಜನೆ ಮಾಡಿ ಜನರನ್ನು ಸಂತುಷ್ಟಗೊಳಿಸಲು ಪ್ಲಾನ್ ರೂಪಿಸಿದ್ದಾರೆ. ಹೋಳಿ ಹಬ್ಬದ ಆಚರಣೆಗಾಗಿ ಬೆಳಗಾವಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಸಿದ್ಧತೆ ನಡೆಸಲಾಗಿದ್ದು, ರಂಗೀನಾಟ ಆಯೋಜನೆಯ ಮೂಲಕ ಜನರನ್ನು ಓಲೈಸಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೆಟ್ ಗಿಟ್ಟಿಸಿಕೊಳ್ಳಲು ಕಸರತ್ತು ಮಾಡ್ತಿದ್ದಾರೆ.
ಇದನ್ನೂ ಓದಿ: Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ
ಮತದಾರರ ಓಲೈಕೆಗೆ ಬಣ್ಣದ ಹಬ್ಬಕ್ಕೆ ರಂಗು
ಕಾಂಗ್ರೆಸ್ ಬಿಜೆಪಿ ಎನ್ನದೇ ಎಲ್ಲಾ ರಾಜಕೀಯ ಮುಖಂಡರು ಹೋಳಿ ಹಬ್ಬ ಆಯೋಜನೆ ಮಾಡಿದ್ದು, ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲ್ ಹೋಳಿ ಮಿಲನ್ ಕಾರ್ಯಕ್ರಮ ಆಯೋಜನೆ ಮಾಡಿದರೆ, ಅತ್ತ ಬೆಳಗಾವಿ ಉತ್ತರದಲ್ಲಿ ಬಿಜೆಪಿ ಮುಖಂಡ ಮುರಗೇಂದ್ರ ಗೌಡ ಪಾಟೀಲ್ ರಂಗೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಇತ್ತ ಬೈಲಹೊಂಗಲದಲ್ಲಿ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೋಳಿ ಹಬ್ಬ ಆಯೋಜನೆ ಮಾಡಿದರೆ, ಯರಗಟ್ಟಿಯಲ್ಲಿ ಸೌರಭ ಚೋಪ್ರಾರಿಂದ ರೆನಿ ಡ್ಯಾನ್ಸ್ ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Holi Festival: ಭಾರತದ ಈ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಹೋಳಿ ಆಚರಿಸೋದಿಲ್ವಂತೆ!
ಬಾಲಕೋಟೆಯಲ್ಲಿ ಅದ್ಧೂರಿಯಾಗಿ ಹೋಳಿ ಆಯೋಜನೆ
ಬಾಗಲಕೋಟೆ: ಕಾಮದಾಹನ ಮೂಲಕ ಹೋಳಿ ಹಬ್ಬಕ್ಕೆ ಬಾಗಲಕೋಟೆಯಲ್ಲಿ ಅದ್ದೂರಿ ಚಾಲನೆ ನೀಡಲಾಗಿದೆ. ಊರಿನ ಬಾಬುದಾರ ಮನೆತನದಿಂದ ಹಲಿಗೆ ನೀಡುವ ಮೂಲಕ ಬಾಗಲಕೋಟೆ ಹೋಳಿಗೆ ಚಾಲನೆ ನೀಡಲಾಗಿದ್ದು, ನಗರದ ಕಿಲ್ಲಾ ಗಲ್ಲಿಯಲ್ಲಿ ಬೆಳಗಿನ ಜಾವ ಹಲಗೆ ಶಹನಾಯಿ ಸೇರಿ ವಾದ್ಯಗಳ ಮೂಲಕ ಮೆರವಣಿಗೆ ನಡೆಸಿ ನಂತರ ಸಾಂಪ್ರದಾಯಿಕವಾಗಿ ಕಾಮದಹನ ನಡೆಸಲಾಯಿತು.
ಮಹಿಳೆಯರಿಂದ ಪೂಜೆ
ಕಾಮದಹನಕ್ಕೂ ಮುನ್ನ ಮಹಿಳೆಯರು ಕಾಮನಿಗೆ ವಿಶೇಷ ಪೂಜೆ, ಕಾಯಿ ಕರ್ಪೂರ ಬೆಳಗಿ ಆರತಿ ಮಾಡಿದರು. ನಂತರ ಕಾಮನ ಮಾದರಿ ಪ್ರತಿಕೃತಿ ದಹಿಸೋ ಮೂಲಕ ಕಾಮದಹನ ನಡೆಸಲಾಯಿತು. ಈ ವೇಳೆ ಹಲಗೆ ಬಾರಿಸುತ್ತಾ ಬಾಯಿ ಬಾಯಿ ಬಡಿದುಕೊಂಡು ಮುಳುಗಡೆ ನಗರಿ ಯುವಕರು ಕಾಮದಹನದಲ್ಲಿ ಪಾಲ್ಗೊಂಡರು. ಬೆಳ್ಳಂಬೆಳಿಗ್ಗೆ ಕಾಮದಹನ ವೀಕ್ಷಿಸಲು ಮಹಿಳೆಯರು, ಮಕ್ಕಳು , ಯುವಕರು ಸೇರಿ ಸಾವಿರಾರು ಜನರು ಆಗಮಿಸಿದ್ದರು.
ನಾಳೆಯಿಂದ ಮೂರು ದಿನ ಹಬ್ಬ
ಕಾಮದಹನದ ನಂತರ ಓಣಿ ಓಣಿಗಳಲ್ಲಿ ಸಂಜೆಯತನಕ ಹೋಳಿ ಬಣ್ಣದಾಟ ನಡೆಯಲಿದ್ದು, ನಾಳೆಯಿಂದ ನಿರಂತರ ಮೂರು ದಿನಗಳ ಕಾಲ ಬಣ್ಣದಾಟ ನಡೆಸಲಾಗುತ್ತೆ. ದೇಶದಲ್ಲಿ ಕೊಲ್ಕತ್ತಾ ಬಿಟ್ಟರೆ ಅತಿ ಹೆಚ್ಚು ಹೋಳಿಯಾಡುವ ನಗರ ಎಂಬ ಖ್ಯಾತಿಯನ್ನು ಕೂಡ ಬಾಗಲಕೋಟೆ ಪಡೆದುಕೊಂಡಿದೆ.
ಮಕ್ಕಳು ದೊಡ್ಡೋರು ಎನ್ನದೆ ಹೋಳಿ ಹಬ್ಬದ ಆಚರಣೆಗೆ ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಮಂದಿ ಕಾಯುತ್ತಿದ್ದು, ಇನ್ನು ಮೂರು ದಿನಗಳ ಕಾಲ ದೇಶದ ಮೂಲೆ ಮೂಲೆಗಳ್ಳಿ ಹೋಳಿ ಹಬ್ಬ ಅದ್ಧೂರಿಯಾಗಿ ನಡೆಯಲಿದೆ. ಜನರು ಹಾಡು, ಕುಣಿತ, ಕುಡಿತದ ಮೂಲಕ ಎಂಜಾಯ್ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ