Vijayanagara: ಚುನಾವಣಾ ರಣಕಹಳೆ ಮೊಳಗಿಸಿದ ಬೊಮ್ಮಾಯಿ; ನಿಮ್ಮ ಪಾಪದ ಕೊಡ ತುಂಬಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಲೋಕಸಭೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವು ಆಗಿಲ್ಲ. ದೇಶದಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ. ; ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಕೆಟ್ಡದಾಗಿ ಸೋತಿದೆ. ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಭ್ರಷ್ಟಾಚಾರವೇ ಕಾರಣ‌ ಎಂದು ಕಾಂಗ್ರೆಸ್​ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ರು.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • Share this:
ವಿಜಯನಗರ (ಏ.17): ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ (Activists Convention) ನಡೆಯಿತು. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ‌ ನಡ್ಡಾ, ಸಿಎಂ ಬಸವರಾಜ್ (CM Basavaraj Bommai) ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ ರವಿ (C.T Ravi) ಹಾಗೂ ಅರುಣ್ ಸಿಂಗ್, ಸಚಿವ ಭೈರತಿ ಬಸವರಾಜ್, ಸಚಿವೆ ಶಶಿಕಲಾ ಜೊಲ್ಲೆ ಭಾಗಿಯಾಗಿದ್ರು. ಈ ವೇಳೆ ಮಾತಾಡಿದ ಕಾಂಗ್ರೆಸ್​ ನಾಯಕರ (Congress Leaders) ವಿರುದ್ಧ ವಾಗ್ದಾಳಿ ನಡೆಸಿದ್ರು ಜೊತೆಗೆ ಬಿಜೆಪಿ ಕಾರ್ಯಕರ್ತರನ್ನು (BJP activists)  ಹುರಿದುಂಬಿಸುವಂತೆ ಭಾಷಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬರೋದು ಖಚಿತ  

ಈ ಕಾರ್ಯಕಾರಿಣಿಯಿಂದ ಹೊಸ ದಿಕ್ಸೂಚಿ ಸಿಕ್ತದೆ. ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟೋ ಸತ್ಯವೋ, ಕರ್ನಾಟಕದಲ್ಲಿ2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ. ನಮ್ಮ ಪಕ್ಷದ ಶಕ್ತಿ -ನೀತಿ, ನಾಯಕತ್ವ, ಸಂಘಟನೆಗಳ ಭವ್ಯ ಭವಿಷ್ಯ ನಿರ್ಮಾಣದ ಮಾಡಲು ನಾವು ಹೊರಟಿದ್ದೇವೆ. ನಮ್ಮ ದಾರಿ ಸುಲಭವಾಗಿಲ್ಲ. ಕರ್ನಾಟಕ ರಾಜ್ಯವನ್ನು ಸುಭಿಕ್ಷಾ, ಸಂಪದ್ಭರಿತ ಮಾದರಿ ರಾಜ್ಯವನ್ನಾಗಿ ಮಾಡಬೇಕು ಇದು ನಮ್ಮೆಲ್ಲರ ಜವಾಬ್ದಾರಿ ಎಂದ್ರು.

ದೇಶದಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ

ಪಕ್ಷ ಸಂಘಟಿಸಿ ಮತ್ತೆ 2023ಕ್ಕೆ ವಿಜಯ ಯಾತ್ರೆ ಆರಂಭಿಸಿ, ಪಕ್ಷ ಅಧಿಕಾರಕ್ಕೆ ಬರಬೇಕು. ಲೋಕಸಭೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವು ಆಗಿಲ್ಲ. ದೇಶದಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ. ; ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಕೆಟ್ಡದಾಗಿ ಸೋತಿದೆ. ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಭ್ರಷ್ಟಾಚಾರವೇ ಕಾರಣ‌. 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಆದರೆ ಅವ್ರು ಸ್ವಂತ ಬಲದಿಂದ ಬಂದಿರಲಿಲ್ಲ ಇನ್ಮುಂದೆಯೂ ಅವರು ಗೆಲ್ಲಲು ಸಾಧ್ಯವಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ:  Hubballi: ಪ್ರಚೋದನಾಕಾರಿ ಪೋಸ್ಟ್: ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ: ಪೊಲೀಸರಿಂದ ಗಾಳಿಯಲ್ಲಿ ಗುಂಡು

ನಿಮ್ಮ ಪಾಪದ ಕೊಡ ತುಂಬಿದೆ

ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್, ದೇಶದಲ್ಲಿ ಮೊದಲ ಭ್ರಷ್ಟಾಚಾರ ನಡೆದಿದ್ದೆ ನೆಹರೂ ಅವರ ಕಾಲದಲ್ಲಿ. ಕಾಂಗ್ರೆಸ್​ಗೆ ಭ್ರಷ್ಟಾಚಾರವೇ ಕಾರ್ಯಕ್ರಮ, ಭ್ರಷ್ಟಾಚಾರವೇ ಅವರ ನೀತಿ. ಇವರ ಆಡಳಿತದಲ್ಲಿ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಅಕ್ಕಿ ಕೊಡೋದ್ರಲ್ಲಿ ಭ್ರಷ್ಟಾಚಾರ ಮಾಡಿದ್ರು, ಬಡವರಿಗೆ ಕೊಡುವ  ದಿಂಬು ಹಾಸಿಗೆಯಲ್ಲೂ ಭ್ರಷ್ಟಾಚಾರ ಮಾಡಿ ಹಣ ಕೊಳ್ಳೆಹೊಡೆದ್ರು. ನಿಮಗೆ ನಾಚಿಕೆ ಆಗೋದೇ ಇಲ್ವ, ನಿಮ್ಮ ಪಾಪದ ಕೊಡ ತುಂಬಿದೆ ಎಂದು  ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದ ಕಾಂಗ್ರೆಸ್ ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸಿದ್ದರಾಗಿ, ಸಿದ್ಧರಾಗಿ, ಸಿದ್ಧರಾಗಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಜಯನಗರದಿಂದಲೇ ಅಧಿಕೃತವಾಗಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಈ ಪುಣ್ಯ ಭೂಮಿಯಾದ ವಿಜಯನಗರ ಜಿಲ್ಲೆಯಿಂದಲೇ ಶುರು ಮಾಡೋಣ. ನಿಮ್ಮೆಲ್ಲರ ಬೆಂಬಲ ನಮಗೆ ಬೇಕು. ನಿಮ್ಮೆಲ್ಲರ ಬೆಂಬಲ ನರೇಂದ್ರ ಮೋದಿ ಅವರಿಗೆ ಬೇಕು. ನೀವೆಲ್ಲರೂ ಸಿದ್ಧರಾಗಿ, ಸಿದ್ದರಾಗಿ, ಸಿದ್ದರಾಗಿ ಎಂದು ಜೋರಾಗಿ ಎರಡು ಕೈ ಮೇಲೆ ಎತ್ತಿ ಕಾರ್ಯಕರ್ತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

ಇದನ್ನೂ ಓದಿ: Hubballi: ಸೋಶಿಯಲ್ ಮೀಡಿಯಾ ಹಿಂಸೆ ಹರಡುವ ಟೂಲ್‌ ಕಿಟ್‌ ಆಗಿದೆ, ಪೊಲೀಸರು ಅಂಥವರ ಬುಡಕ್ಕೆ ಬೆಂಕಿ ಇಡಬೇಕಿದೆ: HDK ಆಗ್ರಹ

ಬೊಮ್ಮಾಯಿ ಭಾಷಣಕ್ಕೆ ನಡ್ಡಾ ಮೆಚ್ಚುಗೆ

ವಿಜಯ ಪತಾಕೆ ಇಲ್ಲಿಂದಲೇ ಹಾರಿಸೋಣ ಎಂದು ಕರೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಭಾಷಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಮಾತುಗಳ‌ ಮೂಲಕ ನಿಮ್ಮಲ್ಲಿ ಉತ್ಸಾಹ ತುಂಬಿದ್ದಾರೆ. ಅಷ್ಟು ಜೋಷ್ ನಿಂದ ನಾನು ಮಾತಾಡ್ತೀನೋ‌ ಇಲ್ಲವೋ ಎಂದು ನಡ್ಡಾ ಹೇಳಿದ್ರು.
Published by:Pavana HS
First published: