ಬಂದ್​ಗೆ ಬಿಜೆಪಿ ಬೆಂಬಲಿಗರ ವಿರೋಧ; ಒಂದು ಗಂಟೆ ಹೆಚ್ಚು ಕೆಲಸ ಮಾಡಲು ನಿರ್ಧಾರ

news18
Updated:September 9, 2018, 7:07 PM IST
ಬಂದ್​ಗೆ ಬಿಜೆಪಿ ಬೆಂಬಲಿಗರ ವಿರೋಧ; ಒಂದು ಗಂಟೆ ಹೆಚ್ಚು ಕೆಲಸ ಮಾಡಲು ನಿರ್ಧಾರ
  • News18
  • Last Updated: September 9, 2018, 7:07 PM IST
  • Share this:
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.09): ರೂಪಾಯಿ ಮೌಲ್ಯ ಕುಸಿತ, ತೈಲ ದರ ಹೆಚ್ಚಳ ವಿರೋಧ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ನಾಳೆ ಕಾಂಗ್ರೆಸ್​ ಕರೆ ನೀಡಿರುವ ಬಂದ್​ ವಿಫಲಕ್ಕೆ  ಹಲವು ಸಂಘಟನೆಗಳು ಮುಂದಾಗಿದೆ.

ಅದರಲ್ಲಿಯೂ ಬಿಜೆಪಿ ಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಈ ಬಂದ್​ ಯಶಸ್ವಿಯಾಗಬಾರದು ಎಂದು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ಸೆ. 10ರಂದು ಎಂದಿಗಿಂತ ಹೆಚ್ಚಾಗಿ 1ಗಂಟೆ ಕೆಲಸ ಮಾಡುವ ಮೂಲಕ ಬಂದ್​ಗೆ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.

ಈಗಾಗಲೇ  ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕಾರ್ಯ ಕೂಡ ನಡೆಯುತ್ತಿದೆ. ಇನ್ನು ಅನೇಕ ಮಳಿಗೆಗಳು, ಖಾಸಗಿ ಕಚೇರಿಗಳಲ್ಲಿಯೂ ಕೂಡ ಈ ಕುರಿತು ಪೋಸ್ಟರ್​ಗಳನ್ನು ಅಳವಡಿಸುವ ಮೂಲಕ ಭಾರತ್​ ಬಂದ್​ ವಿಫಲ ಮಾಡುವ ಯತ್ನ ನಡೆಯುತ್ತಿದೆ.


ಭಾರತ್​ ಬಂದ್​ ಕುರಿತು ಮಾತನಾಡಿರುವ ಬಿಜೆಪಿ ಕಾಂಗ್ರೆಸ್​ ಹತಾಶೆಯಿಂದ ಜನರಿಗೆ  ಅಂಗಡಿಗಳನ್ನು ತೆರೆಯುವ ಅವಶ್ಯಕತೆ ಇಲ್ಲ ಎಂದು ಕೂಗಿ ಕೂಗಿ ಹೇಳುತ್ತಿದೆ. ಈ ಮೂಲಕ ಬಂದ್​ ಯಶಸ್ವಿ ಯಾಗುವಂತೆ ನೋಡಿಕೊಳ್ಳುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಕ್ಯಾಬ್, ಬಿಎಂಟಿಸಿ​ ಸೇರಿದಂತೆ ಸರ್ಕಾರಿ ಬಸ್​ ಸೇವೆ ಇಲ್ಲ; ಶಾಲೆಗಳು ಬಹುತೇಕ ಬಂದ್; ನಾಳೆ ಹೇಗಿರಲಿದೆ ಬೆಂಗಳೂರು​​

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ಮುಖಂಡ  ಜನಾರ್ದನ ಪೂಜಾರಿ,  ಭಾರತ್ ಬಂದ್​​​ಗೆ ಕರೆ ಕೊಟ್ಟವರು ದೇಶ ವಿರೋಧಿಗಳು. ಬಂದ್​ನಿಂದ ಆದ ನಷ್ಟವನ್ನು ಬಂದ್​ಗೆ  ಕರೆ ಕೊಟ್ಟವರೇ ಭರಿಸಬೇಕು. ದೇಶಾದ್ಯಂತ ಬಂದ್​​​ಗೆ ಕರೆ ಕೊಟ್ಟವರು ಎಚ್ಚರದಿಂದಿರಬೇಕು. ಕೇಂದ್ರ ಸರ್ಕಾರ ಈಗಲೇ ತೈಲಬೆಲೆ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದೆ. ಬಂದ್​​ಗೆ ಕರೆ ಕೊಡೋದು ಸುಲಭ, ಯಾರಾದರೂ ಕರೆ ಕೊಡಬಹುದು. ಬಂದ್​ನಿಂದ ಆಗುವ ನಷ್ಟಕ್ಕೆ ಕರೆ ಕೊಟ್ಟವರು ಜವಾಬ್ದಾರಿ ಆಗ್ತಾರಾ ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ಕರ್ನಾಟಕದಲ್ಲಿ ಬಂದ್​ಗೆ ಸರ್ಕಾರವೇ ಬೆಂಬಲ ನೀಡಿದ್ದು, ಸಾರಿಗೆ ಸೇರಿದಂತೆ ಅನೇಕ ಸೇವೆಗಳು ಲಭ್ಯತೆ ಇರುವುದಿಲ್ಲ ಎಂದು ಘೋಷಣೆಯಾಗಿದೆ. ಬಿಜೆಪಿ ಕಾರ್ಯಕರ್ತರ ವಿರೋಧ ಕಾಂಗ್ರೆಸ್​ ನಾಯಕರ ಬೆಂಬಲದಿಂದ ನಾಳೆ ಬಂದ್​ ನಡೆಯುತ್ತಿದ್ದು, ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂದು ನೋಡಬೇಕಿದೆ.

 
First published: September 9, 2018, 6:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading