ಬಿಜೆಪಿ ಕಚೇರಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ; ಹೈಕಮಾಂಡ್​ ಆದೇಶಕ್ಕಾಗಿ ಕಾದಿರುವ ಬಿಎಸ್​ವೈ

BJP Celebration :ಬಿಎಸ್​​ವೈ ನಿವಾಸಕ್ಕೆ ಮಾಳವಿಕಾ, ಕೆ.ಜಿ.ಬೋಪಯ್ಯ,, ಮಾಧುಸ್ವಾಮಿ, ಭಾರತಿ ಶೆಟ್ಟಿ, ಜೀವರಾಜ್, ಸುರೇಶ್ ಗೌಡ, ಅಮರ್ ಕುಮಾರ್ ಪಾಂಡೆ ಆಗಮಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು.

Seema.R | news18
Updated:July 24, 2019, 12:35 PM IST
ಬಿಜೆಪಿ ಕಚೇರಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ; ಹೈಕಮಾಂಡ್​ ಆದೇಶಕ್ಕಾಗಿ ಕಾದಿರುವ ಬಿಎಸ್​ವೈ
ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು
  • News18
  • Last Updated: July 24, 2019, 12:35 PM IST
  • Share this:
ಬೆಂಗಳೂರು (ಜು. 24): ಅವಿಶ್ವಾಸ ಮಂಡನಾ ನಿರ್ಣಯದಲ್ಲಿ ಗೆದ್ದ ಬಿಜೆಪಿ ಪಾಳೆಯದಲ್ಲಿ ಈಗ ಸಂಭ್ರಮ ಮುಗಿಲು ಮುಟ್ಟಿದೆ. ಸಿಎಂ ಆಗಲಿರುವ ಯಡಿಯೂರಪ್ಪಗೆ ಮುಂಜಾನೆಯಿಂದ ಶುಭಾಶಯಗಳ ಮಹಾಪೂರ ಹರಿದಿದ್ದು, ಕೇಶವಕೃಪಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

 

ಬಿಎಸ್​​ವೈ ನಿವಾಸಕ್ಕೆ ಮಾಳವಿಕಾ, ಕೆ.ಜಿ.ಬೋಪಯ್ಯ,, ಮಾಧುಸ್ವಾಮಿ, ಭಾರತಿ ಶೆಟ್ಟಿ, ಜೀವರಾಜ್, ಸುರೇಶ್ ಗೌಡ, ಅಮರ್ ಕುಮಾರ್ ಪಾಂಡೆ ಆಗಮಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮಲ್ಲೇಶ್ವರಂನ ಕೇಶವಾಕೃಪ ಸೇರಿದಂತೆ ರಾಜ್ಯದ ಜಿಲ್ಲಾ ಬಿಜೆಪಿ ಕಚೇರಿಗಳಲ್ಲಿಯೂ ಕಾರ್ಯಕರ್ತರು ಸಂತಸದಲ್ಲಿ ತೇಲಿದ್ದು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇನ್ನು ಸರ್ಕಾರ ರಚನೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮಾಧು ಸ್ವಾಮಿ, ಬಿಜೆಪಿ ಶಾಸಕಾಂಗ ಸಭೆ ನಡೆಸಲು ಅಮಿತ್​ ಷಾ ಸೂಚನೆಗಾಗಿ ಕಾದಿದ್ದೇವೆ. ಅವರು ಆದೇಶಿಸಿದ ಬಳಿಕ ಸಭೆ ನಡೆಸಿ, ಅವರು ಸೂಚಿಸಿದವರನ್ನು ನಮ್ಮ ಶಾಸಕಾಂಗ ಪಕ್ಷದ  ನಾಯಕರಾಗಿ ಆಯ್ಕೆ ಮಾಡಲಾಗುವು. ಬಳಿಕ ಅವರು ರಾಜ್ಯಪಾಲರ ಬಳಿ ಹೋಗಿ ಸರ್ಕಾರ ರಚನೆ ಕುರಿತು ಪ್ರಸ್ತಾವನೆ ಸಲ್ಲಿಸಲಿದ್ದಾರೆ.

 

ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಬಳಿಕ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದು, ಕೇಂದ್ರ ನಾಯಕರಿಗೆ ಶುಭಹಾರೈಸಿ, ಪ್ರಮಾಣ ವಚನಕ್ಕೆ ಆಹ್ವಾನ ನೀಡಲಿದ್ದಾರೆ.  ಅಮಿತ್ ಷಾ, ಪಿಯೂಷ್ ಗೋಯೆಲ್, ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್​ಗೆ ಆಹ್ವಾನ ನೀಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.ಇದನ್ನು ಓದಿ: ಬಿಎಸ್​ವೈ ಪ್ರಮಾಣ ವಚನಕ್ಕೂ ಮುನ್ನವೇ ಶುರುವಾಯಿತು ಡಿಸಿಎಂ, ಮಂತ್ರಿ ಸ್ಥಾನಗಳಿಗೆ ಪೈಪೋಟಿ

ಚಾಮರಾಜನಗರದ ಆರ್​ಎಸ್​ಎಸ್​ ಕಚೇರಿಯಲ್ಲಿ ನಾಯಕರನ್ನು ಭೇಟಿಯಾದ ಬಳಿಕ ಮಾತನಾಡಿದ ಯಡಿಯೂರಪ್ಪ, ಮುಂದಿನ ನಡೆ ಕುರಿತು ಆರೆಸ್ಸೆಸ್​ ನಾಯಕರ ಜೊತೆ ಸಲಹೆ ಪಡೆದಿದ್ದೇನೆ. ಆರೆಸ್ಸೆಸ್​ನಿಂದಲೇ ಬೆಳೆದು ಬಂದವನು ನಾನು. ಮುಂದಿನ ಹೆಜ್ಜೆ ಇಡಲು ಕೂಡ ಅವರ ಸಲಹೆ ಅಗತ್ಯವಾಗಿದೆ. ಅವರ ಆಶೀರ್ವಾದದಿಂದಲೇ ನಾನು ಸಿಎಂ ಆಗಿರುವುದು ಎಂದರು.

ದೆಹಲಿಯಿಂದ ಆದೇಶ ಬಂದ ಬಳಿಕ ರಾಜಭವನಕ್ಕೆ ಭೇಟಿ ನೀಡಲಿದ್ದು, ಸರ್ಕಾರ ರಚನೆ ಕುರಿತು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದರು.

First published:July 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ