ಬಿಜೆಪಿಯ10 ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ - ಸರ್ಕಾರ ಉಳಿಸಿಕೊಳ್ಳೋದು ಗೊತ್ತು ; ಪ್ರಿಯಾಂಕ್ ಖರ್ಗೆ

news18
Updated:September 11, 2018, 2:56 PM IST
ಬಿಜೆಪಿಯ10 ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ - ಸರ್ಕಾರ ಉಳಿಸಿಕೊಳ್ಳೋದು ಗೊತ್ತು ; ಪ್ರಿಯಾಂಕ್ ಖರ್ಗೆ
news18
Updated: September 11, 2018, 2:56 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ  ( ಸೆ.11) :  ಬಿಜೆಪಿಯ ಹತ್ತು ಶಾಸಕರೂ ನಮ್ಮ ಸಂಪರ್ಕದಲ್ಲಿದ್ದು, ಸರ್ಕಾರವನ್ನು ಉಳಿಸಿಕೊಳ್ಳೋದು ನಮಗೆ ಗೊತ್ತು. ನಮ್ಮ ಸರ್ಕಾರ ಪತನಗೊಳಿಸಲು ಮುಂದಾಗುವವರಿಗೆ ತಕ್ಕ ಪಾಠ ಕಲಿಸಲು ನಾವೂ ಸಿದ್ಧರಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಪರೇಷನ್ ಕಮಲ ಮಾಡುವ ಮೂಲಕ ಬಿಜೆಪಿಯವರು ಸರ್ಕಾರ ಪತನಕ್ಕೆ ಮುಂದಾದರೆ ನಾವು ಸುಮ್ಮನಿರೊಲ್ಲ ಎಂದು ಎಚ್ಚರಿಸಿದ್ದಾರೆ.

ಜಾರಕಿಹೊಳಿ ಸಹೋದರರು ಸೇರಿ ಹಲರನ್ನು ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನಮ್ಮ ಜೊತೆಗೂ ಬಿಜೆಪಿಯ ಹಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನಗೊಳ್ಳುವ ಸ್ಥಿತಿ ಬಂದಲ್ಲಿ ಬಿಜೆಪಿ ಶಾಸಕರು ಬೆಂಬಲ ನೀಡಲಿದ್ದಾರೆ. ರಾಜಕೀಯ ಮಾಡೋದು ಬಿಜೆಪಿಗೊಂದೇ ಅಲ್ಲ ನಮಗೂ ಗೊತ್ತಿಗೆ. ಐದು ವರ್ಷ ಸರ್ಕಾರ ನಡೆಸಬೇಕೆಂದೇ ಅಧಿಕಾರಕ್ಕೆ ಬಂದಿದ್ದೇವೆ. ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿಗೆ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಮಹಾರಾಷ್ಟ್ರ ಸಿಎಂ ದೇವೀಂದ್ರ ಫಡ್ನವಿಸ್ ಎಂಟ್ರಿ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯ ಬಿಜೆಪಿ ನಾಯಕರಲ್ಲಿ ಸಮರ್ಥರಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಹೀಗಾಗಿಯೇ ಹೊರ ರಾಜ್ಯದ ನಾಯಕರನ್ನು ಬಳಸಿಕೊಂಡು ಸರ್ಕಾರ ಪತನದ ಪ್ರಯತ್ನ ನಡೆಸಿದ್ದಾರೆ. ಮಹಾರಾಷ್ಟ್ರ ಸಿಎಂ ಫಡ್ನವಿಸ್ ಬರಲಿ, ಯಾರೇ ಎಂಟ್ರಿ ಕೊಡಲಿ, ನಾವು ಯಾವುದಕ್ಕೂ ಅಂಜುವುದಿಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಕುತಂತ್ರಕ್ಕೆ ರಾಜ್ಯ ಸಮ್ರಿಶ ಸರ್ಕಾರ ಬಗ್ಗೋದಿಲ್ಲ. ಬಿಜೆಪಿಯವರು ಹಗಲುಗನಸು ಕಾಣಲಿ ಬಿಡಲಿ ಎಂದು ಪ್ರಿಯಾಂಕ್ ತಿಳಿಸಿದ್ದಾರೆ.

 
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...