ಮೊಬೈಲ್​ ಕಳ್ಳನ ಬಳಿ 2 ಲಕ್ಷ ಡೀಲ್​ ಕುದುರಿಸಿದ್ದ ಬಯ್ಯಪ್ಪನ ಹಳ್ಳಿ ಠಾಣೆ ಪಿಎಸ್​ಐ; ಹಣದೊಂದಿಗೆ ಎಸಿಬಿ ಬಲೆಗೆ!

ಸಬ್​ ಇನ್ಸ್​ಪೆಕ್ಟರ್​ ಸೌಮ್ಯ ಮೊಬೈಲ್​ ಕಳ್ಳನಿಂದ ಹಣ ಪಡೆದು ಅದನ್ನು ಕುಮಾರ್​ ಎಂಬ ಪೇದೆಯ ಕೈಗೆ ನೀಡಿದ್ದರು. ಆದರೆ, ಈ ವೇಳೆ ಎಸಿಬಿ ಎಸಿಪಿ ಪ್ರತಾಪ್ ರೆಡ್ಡಿ ತಂಡದಿಂದ ಪೊಲೀಸ್​ ಠಾಣೆ ಮೇಲೆ ದಾಳಿ ನಡೆಸಲಾಗಿತ್ತು.

ಬಂಧಿತ ಪಿಎಸ್​ಐ ಸೌಮ್ಯ.

ಬಂಧಿತ ಪಿಎಸ್​ಐ ಸೌಮ್ಯ.

 • Share this:
  ಬೆಂಗಳೂರು (ಜನವರಿ 12); ಭ್ರಷ್ಟಾಚಾರ ವಿರೋಧಿ ಪಡೆ (Anti Corruption Bureau) ಅಧಿಕಾರಿಗಳು ಇಂದು ಬಯ್ಯಪ್ಪನ ಹಳ್ಳಿ ಪೊಲೀಸ್​ ಠಾಣೆಯ ಮೇಲೆ ದಿಢೀರ್​ ದಾಳಿ ನಡೆಸಿದ್ದು, ಲಂಚ ಸ್ವೀಕರಿಸುವಾಗ ಪೊಲೀಸ್​ ಸಬ್ ಇನ್ಸ್​ಪೆಕ್ಟರ್​ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿ ಎಂಬವರು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ದಾಳಿ ವೇಳೆ ಹಣದ ಸಮೇತ ತಪ್ಪಿಸಿಕೊಳ್ಳಲು ಯತ್ನಿಸಿದ ಪೇದೆ ಕುಮಾರ್​ ಎಂಬಾತ ಕಾಲು‌ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಯೂ ನಡೆದಿದೆ. ಮೊಬೈಲ್ ಕಳ್ಳತನ ಕೇಸ್ ನಲ್ಲಿ ಆರೋಪಿಗೆ ಪಿಎಸ್​ಐ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿ 2 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು.  ಕೊನೆಗೆ ಒಂದು‌ ಲಕ್ಷಕ್ಕೆ ಡೀಲ್ ಕುದುರಿತ್ತು. ಆದರೆ, ಮೊಬೈಲ್​ ಕಳ್ಳ ಲಂಚದ ಹಣ ನೀಡುವಾಗಲೇ ನಿಖರ ಮಾಹಿತಿ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

  ಸಬ್​ ಇನ್ಸ್​ಪೆಕ್ಟರ್​ ಸೌಮ್ಯ ಮೊಬೈಲ್​ ಕಳ್ಳನಿಂದ ಹಣ ಪಡೆದು ಅದನ್ನು ಕುಮಾರ್​ ಎಂಬ ಪೇದೆಯ ಕೈಗೆ ನೀಡಿದ್ದರು. ಆದರೆ, ಈ ವೇಳೆ ಎಸಿಬಿ ಎಸಿಪಿ ಪ್ರತಾಪ್ ರೆಡ್ಡಿ ತಂಡದಿಂದ ಪೊಲೀಸ್​ ಠಾಣೆ ಮೇಲೆ ದಾಳಿ ನಡೆಸಲಾಗಿತ್ತು. ಎಸಿಬಿ ದಾಳಿ ಅಂತ ಗೊತ್ತಾಗಿದ್ದೇ ಪೇದೆ ಕುಮಾರ್ ಹಣದ ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದರು.ಠಾಣೆಯ ಕಟ್ಟಡದ ಮೊದಲ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು.

  ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಎರಡನೇ ಬಾರಿ ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾದ ಡಿ.ಕೆ. ಶಿವಕುಮಾರ್​

  ಆದರೆ, ಮೇಲಿನಿಂದ ಕೆಳಗೆ ಬಿದ್ದಿದ್ದ ಅವರ ಕಾಲು ಮುರಿತವಾಗಿದ್ದು, ಅವರನ್ನು ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಸಬ್​ ಇನ್ಸ್​ಪೆಕ್ಟರ್​ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿಯವರನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
  Published by:MAshok Kumar
  First published: