Bitcoin Scam: ಬಿಟ್ ಕಾಯಿನ್ ಅಲ್ಲ, ಬೆಟ್ ಕಾಯಿನ್ ಪ್ರಕರಣ: ಸಚಿವ ಬಿ.ಸಿ.ಪಾಟೀಲ್

ಇಬ್ಬರು ಪ್ರಭಾವಿಗಳಿದ್ದರೆ ಹೇಳಲಿ ಇದಕ್ಕೆ ಅರ್ಬಿ ಹಾವು ಅಂತಾರೆ. ಹಾವು ಬಿಟ್ಟು ಬಿಡ್ತೀನಿ ಹಾವು ಬಿಟ್ಟು ಬಿಡ್ತೀನಿ ಇದ್ದರೆ ಬಿಡಲಿ ಎಂದು ಸವಾಲು ಹಾಕಿದರು. ಹೆಸರು ಹೇಳಲು ಕಾಂಗ್ರೆಸ್ ನಾಯಕರನ್ನು ಯಾರು ತಡೆದಿಲ್ಲ. ಒಂದು ವೇಳೆ ಯಾರಾದ್ರೂ ತಡೆದಿದ್ರೆ ಅಂತಹವರ ಹೆಸರನ್ನು ಬಹಿರಂಗಗೊಳಸಲಿ ಎಂದು ಆಗ್ರಹಿಸಿದರು.

ಬಿ.ಸಿ.ಪಾಟೀಲ್

ಬಿ.ಸಿ.ಪಾಟೀಲ್

  • Share this:
ಬೆಂಗಳೂರು: ಬಿಟ್ ಕಾಯಿನ್ (Bitcoin Scam) ಅನ್ನುವ ಬದಲು ಬೆಟ್ ಕಾಯಿನ್‌ ಪ್ರಕರಣವಾಗಿದೆ. ಕಾಂಗ್ರೆಸ್ (Congress) ನವರು ಅದರ ಮೇಲೆ ಬೆಟ್ ಮಾಡೋಕೆ ಹೊರಟಿದ್ದಾರೆ. ಅದನ್ನ ಉಪಯೋಗಿಸಿಕೊಂಡು ಬಿಜೆಪಿ ಸರ್ಕಾರಕ್ಕೆ (BJP Government) ಕೆಟ್ಟ ಹೆಸರು ತರೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್(Minister B.C.Patil) ಆರೋಪಿಸಿದರು. 2018 ರಲ್ಲಿ ಬಿಟ್ ಕಾಯಿನ್ ಹಗರಣ ಆಗಿತ್ತು ಅಂತ ಹೇಳ್ತಿದ್ದಾರೆ. ಹಾಗಿದ್ರೆ ಯಾಕೆ ಆಗ ಕಾಂಗ್ರೆಸ್ ನವರು ಸುಮ್ಮನೆ ಕುಳಿತಿದ್ದರು ಎಂದು ಸಚಿವರು ಪ್ರಶ್ನೆ ಮಾಡಿದರು. ಚುನಾವಣೆ ಬರುತ್ತಿದೆ ಎಂದು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇಬ್ಬರು ಪ್ರಭಾವಿಗಳಿದ್ದರೆ ಹೇಳಲಿ ಇದಕ್ಕೆ ಅರ್ಬಿ ಹಾವು ಅಂತಾರೆ. ಹಾವು ಬಿಟ್ಟು ಬಿಡ್ತೀನಿ ಹಾವು ಬಿಟ್ಟು ಬಿಡ್ತೀನಿ ಇದ್ದರೆ ಬಿಡಲಿ ಎಂದು ಸವಾಲು ಹಾಕಿದರು. ಹೆಸರು ಹೇಳಲು ಕಾಂಗ್ರೆಸ್ ನಾಯಕರನ್ನು ಯಾರು ತಡೆದಿಲ್ಲ. ಒಂದು ವೇಳೆ ಯಾರಾದ್ರೂ ತಡೆದಿದ್ರೆ ಅಂತಹವರ ಹೆಸರನ್ನು ಬಹಿರಂಗಗೊಳಸಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ನವರ ಮಾತುಗಳು ನಾಳೆ ಬಾ ಅನ್ನೋ ಒಂದು ಕಥೆ ಇದೆ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಇದು ಒಂಥಾರ ಬ್ಲಾಕ್ ಮೇಲಿಂಗ್ , ಇಬ್ಬರ ಹೆಸರಿದೆ ಅಂತ ಬ್ಲಾಕ್ ಮೇಲಿಂಗ್ ಮಾಡ್ತಿದ್ದಾರೆ..? ಏನ್  ರೋಲ್ ಕಾಲ್ ಮಾಡ್ತಿದ್ದಾರಾ ಅಥಾವ ಬ್ಲ್ಯಾಕ್ ಮೇಲಿಂಗ್ ಮಾಡ್ತಿದ್ದಾರಾ ಗೊತ್ತಿಲ್ಲ ಏನು ಇದರ ಉದ್ದೇಶ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  Bitcoin Scandal: ಹ್ಯಾಕರ್ ಶ್ರೀಕಿಯ ಎನ್ ಕೌಂಟರ್ ಮಾಡುವ ಸಾಧ್ಯತೆ: Congress ಗಂಭೀರ ಆರೋಪ

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ

ರಾಜ್ಯ  ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೌನವಾಗಿರೋದ್ಯಾಕೆ ಎಂದು ಪ್ರಿಯಾಂಕಾ ಖರ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ಎಲ್ಲರ ಹೇಳಿಕೆಗಳಿಗೆ ರಾಜ್ಯಾಧ್ಯಕ್ಷರು ಉತ್ತರ ಕೊಡಲು ಆಗಲ್ಲ. ಇನ್ನೂ ದೊಡ್ಡ ಖರ್ಗೆಯವರು ಹೇಳಿದ್ರೆ ಹೇಳಬಹುದು. ಒಂದು ಲೆವಲ್ ಅಂತ ಇರುತ್ತೆ. ಈಗಿನ್ನು ಎರಡನೇ ಬಾರಿ ಎಂಎಲ್ಎ ಆಗಿರುವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.

ಎಲ್ಲಾ ಸ್ಟೇಟ್ ಲೇವಲ್ ಲೀಡರ್ಸ್ ಗಳು ಪ್ರಿಯಾಂಕ ಖರ್ಗೆಯವರ ಪ್ರಶ್ನಗೆ ಬಿಜೆಯ ರಾಜ್ಯಧ್ಯಕ್ಷರು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಕೇಳುವವರು ಕೇಳಿದ್ರೆ ಹೇಳ್ತಾರೆ. ಮೌನವಾಗಿದ್ರೆ ಮೌನ ಅಂತೀರಾ ಮಾತನಾಡಿದ್ರೆ ಜಾಸ್ತಿ ಮಾತನಾಡಿದ್ದೀರಾ ಅಂತೀರಿ. ಆರೋಪ ಮಾಡೋದು ಕಾಂಗ್ರೆಸ್ ನ ಅಜ್ಮನ್ಮ ಸಿದ್ದ ಹಕ್ಕು ಎಂದು ಕಿಡಿ ಕಾರಿದರು.

ಆ ಗೂಬೆ ಅವರ ತಲೆ ಮೇಲೆ ಹೋಗಿ ಕೂರುತ್ತೆ

ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಪಕ್ಷದವರ ಹೆಸರನ್ನೂ ಬಹಿರಂಗ ಪಡಿಸಿದ್ದಾರೆ.  ಅವರನ್ನ ರಕ್ಷಣೆ ಮಾಡೋಕೆ ತಮ್ಮ  ಕೆಟ್ಟ ಹೆಸರು ಬರಬಾರದು..ಅನ್ನೋ ಉದ್ದೇಶಕ್ಕೆ ಬಿಜೆಪಿ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಆ ಗೂಬೆ ಅವರ ತಲೆ ಮೇಲೆ ಹೋಗಿ ಕೂರುತ್ತೆ ಎಂದು ವ್ಯಂಗ್ಯ ಮಾಡಿದರು.

ಇದನ್ನೂ ಓದಿ: Mangaluru: ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ; ಆರು ಜನರ ಬಂಧನ

ಏನೋ ಒಂದು ವ್ಯವಹಾರ ಮಾಡಿಕೊಂಡಿರಬೇಕಲ್ವಾ..?

2018 ರಲ್ಲಿ ಚನ್ನಾಗಿ ತೆನಿಖೆ ಮಾಡಬೇಕಿತ್ತು. ಆದ್ರೆ ಈ ಗಲಾಟೆ ಪ್ರಕರಣದಲ್ಲಿ ಇದನ್ನ ಮುಚ್ಚಿ ಹಾಕಿ, ಅವನು ಎಸ್ಕೇಪ್ ಮಾಡಿ ಅವನನ್ನ ಪ್ರೋಟೆಕ್ಟ್ ಮಾಡಿ ಈಗ ಹೇಳುವಂತೆ ಅವಶ್ಯಕತೆ ಏನ್ ಇದೆ. ಅವತ್ತು ನೀವು ಅವನ ಜೊತೆ ಏನೋ ಒಂದು ವ್ಯವಹಾರ ಮಾಡಿಕೊಂಡಿರಬೇಕಲ್ವಾ..? ಹಾಗಾಗಿ ನೀವು ಅವತ್ತು ಸುಮ್ಮನೆ ಆಗಿರಬೇಕು ಎಂದು ಬಿ.ಸಿ.ಪಾಟೀಲ್ ಅನುಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರ ಸುಳ್ಳು ಆರೋಪಗಳಿಂದ ಸರ್ಕಾರಕ್ಕೆ ಯಾವುದೇ ಮುಜಗರವಿಲ್ಲ ಜನರಿಗೆ ಸತ್ಯ ಗೊತ್ತಿದೆ. ಜನರು ಯಾರು ದಡ್ಡರಿಲ್ಲ ಜನರಿಗೆ ಮುಜಗರವಾಗುವಂತದ್ದೇನು ಮಾಡಿಲ್ಲ. ಇನ್ನೂ ಅವರಿಗೆ ಮುಜುಗರವಾಗಲಿದೆ..ಯಾವ ವೇದಿಕೆಯಲ್ಲಿ ಏನ್ ಹೇಳ್ಬೇಕು ಅಲ್ಲಿ ಗೃಹ ಸಚಿವರು ಮಾತನಾಡ್ತಾರೆ ಎಂದು ಎಲ್ಲ ಆರೋಪಗಳಿಗೆ ತಿರುಗೇಟು ನೀಡಿದರು.
Published by:Mahmadrafik K
First published: