HOME » NEWS » State » BISIYUTA WORKERS PROTEST AT BANGALORE TODAY AND TOMORROW WILL BE MEGA PROTEST BY CITU LG

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಬೀದಿಗಿಳಿದ ಬಿಸಿಯೂಟ ಕಾರ್ಯಕರ್ತೆಯರು; ನಾಳೆ ಕಾರ್ಮಿಕ ಸಂಘಟನೆಯಿಂದ ಬೃಹತ್ ಪ್ರತಿಭಟನೆ

ನಾಳೆ ಟ್ರೇಡ್ ಯೂನಿಯನ್ ಗಳ ಬಹುದೊಡ್ಡ ಪ್ರತಿಭಟನೆ ಇರಲಿದೆ. ಕಾರ್ಮಿಕ ಸಂಘಟನೆ ಕರೆ ನೀಡಿರುವ ಈ ಪ್ರತಿಭಟನೆಗೆ ಬಿಸಿಯೂಟ ಕಾರ್ಯಕರ್ತೆಯರು ಸಾಥ್ ನೀಡಲಿದ್ದಾರೆ. ನಾಳೆ ಹಮಾಲಿಗಳು, ಕಟ್ಟಡ ಕಾರ್ಮಿಕರು, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಸಿಬ್ಬಂದಿಗಳು ಪ್ರತಿಭಟನೆ ನಡೆಸಲಿದ್ದಾರೆ.

news18-kannada
Updated:March 3, 2021, 10:36 AM IST
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಬೀದಿಗಿಳಿದ ಬಿಸಿಯೂಟ ಕಾರ್ಯಕರ್ತೆಯರು; ನಾಳೆ ಕಾರ್ಮಿಕ ಸಂಘಟನೆಯಿಂದ ಬೃಹತ್ ಪ್ರತಿಭಟನೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.03): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ಸಾಲು-ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ಸಾರಿಗೆ ಸಿಬ್ಬಂದಿ ಮುಷ್ಕರ, ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​ ಪ್ರತಿಭಟನೆ-ಇವು ನಿನ್ನೆ ನಡೆದ ಪ್ರತಿಭಟನೆಗಳು. ಇಂದೂ ಸಹ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆಯಲಿವೆ. ಬಿಸಿಯೂಟ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೀದಿಗೆ ಇಳಿಯಲಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಲಿರುವ ಬಿಸಿಯೂಟ ಕಾರ್ಯಕರ್ತೆಯರು, ಬಳಿಕ ಫ್ರೀಡಂ ಪಾರ್ಕ್​ವರೆಗೆ ರ್ಯಾಲಿ ಹೊರಡಲಿದ್ದಾರೆ.

ಪ್ರತಿಭಟನೆ ಹಿನ್ನೆಲೆ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರು ಮೆಜೆಸ್ಟಿಕ್​  ರೈಲ್ವೆ ನಿಲ್ದಾಣದಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ. ಬಿಜಾಪುರ, ಬಾಗಲಕೋಟೆ, ಗದಗನಿಂದ ನೂರಾರು ಅಕ್ಷರ ದಾಸೋಹದ ಕಾರ್ಯಕರ್ತೆಯರು ಆಗಮಿಸಿದ್ದಾರೆ.

ವೇತನ ಹೆಚ್ಚಳ, ಪಿಂಚಿಣಿ ಸೇರಿದಂತೆ‌ ವಿವಿಧ ಬೇಡಿಕೆಗೆ ಒತ್ತಾಯಿಸಿ ಸಿಐಟಿಯು ವರಲಕ್ಷ್ಮಿ  ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ನವೆಂಬರ್​ನಿಂದ ಸಂಬಳ ನೀಡದ ಕಾರಣ, ದಿಢೀರ್ ಕೆಲಸದಿಂದ ವಜಾ ಮಾಡುತ್ತಿರುವ ಬಗ್ಗೆ ಬಿಸಿಯೂಟ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರ ಜೊತೆ ಸಿಐಟಿಯು ಹಮಾಲಿ ಕೆಲಸಗಾರರು ಸಹ ಜಮಾವಣೆಯಾಗಲಿದ್ದಾರೆ.

ಆಸ್ತಿಗಳಿಗಾಗಿ ಮಾರ್ಚ್ 5 ರಂದು ಮೆಗಾ ಇ-ಹರಾಜು; ಈ ಬಗ್ಗೆ ಎಲ್ಲಾ ವಿವರಗಳು ಇಲ್ಲಿದೆ.

1,17,999 ಅಕ್ಷರ ದಾಸೋಹ ಕಾರ್ಯಕರ್ತರು ರಾಜ್ಯದಲ್ಲಿ ಇದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ವೇತನ ಹೆಚ್ಚಳ, ಕನಿಷ್ಠ ಕೂಲಿ ಮತ್ತು ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ.

ನಾಳೆಯೂ ಕಾರ್ಮಿಕ ಸಂಘಟನೆಯಿಂದ ಬೃಹತ್ ಪ್ರತಿಭಟನೆ

ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಇಂದಿಗೆ ಮಾತ್ರ ಸೀಮಿತವಾಗಿಲ್ಲ. ನಾಳೆಯೂ ಕೂಡ ಪ್ರತಿಭಟನೆಯ ಪರ್ವ ಮುಂದುವರೆಯಲಿದೆ. ಬಿಸಿಯೂಟ ಕಾರ್ಯಕರ್ತೆಯರು ಇಂದು ರಾಜಧಾನಿಯಲ್ಲಿಯೇ ಉಳಿಯಲಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ ನಡೆಯಲಿದೆ. ನಾಳೆ ರಾಜಧಾನಿಯಲ್ಲಿ ಅತೀ ದೊಡ್ಡ ಪ್ರತಿಭಟನೆ ನಡೆಯಲಿದೆ.

ನಾಳೆ ಟ್ರೇಡ್ ಯೂನಿಯನ್ ಗಳ ಬಹುದೊಡ್ಡ ಪ್ರತಿಭಟನೆ ಇರಲಿದೆ. ಕಾರ್ಮಿಕ ಸಂಘಟನೆ ಕರೆ ನೀಡಿರುವ ಈ ಪ್ರತಿಭಟನೆಗೆ ಬಿಸಿಯೂಟ ಕಾರ್ಯಕರ್ತೆಯರು ಸಾಥ್ ನೀಡಲಿದ್ದಾರೆ. ನಾಳೆ ಹಮಾಲಿಗಳು, ಕಟ್ಟಡ ಕಾರ್ಮಿಕರು, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಸಿಬ್ಬಂದಿಗಳು ಪ್ರತಿಭಟನೆ ನಡೆಸಲಿದ್ದಾರೆ. ಕಾರ್ಮಿಕ ಸಂಹಿತೆಗಳಿಗೆ ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಲಿದೆ. 30 ಸಾವಿರಕ್ಕೂ ಹೆಚ್ಚು ಜನರು ನಾಳಿನ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
Published by: Latha CG
First published: March 3, 2021, 10:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories