• Home
  • »
  • News
  • »
  • state
  • »
  • Bengaluru: ಬಿಷಪ್ ಕಾಟನ್, ಸೇಂಟ್ ಜಾನ್ಸ್ ಶಾಲೆಗಳ ಪ್ರಾಂಶುಪಾಲರು ಸಸ್ಪೆಂಡ್

Bengaluru: ಬಿಷಪ್ ಕಾಟನ್, ಸೇಂಟ್ ಜಾನ್ಸ್ ಶಾಲೆಗಳ ಪ್ರಾಂಶುಪಾಲರು ಸಸ್ಪೆಂಡ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಬ್ಬರು ಪ್ರಾಂಶುಪಾಲರ ವಿರುದ್ಧದ ವಿಚಾರಣೆ ಪೂರ್ಣಗೊಂಡ ನಂತರವೇ ಆರೋಪಗಳ ವಿವರಗಳನ್ನು  ಬಹಿರಂಗಪಡಿಸಲಾಗುವುದು ಎಂದು ರೆವ್ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್ ತಿಳಿಸಿದ್ದಾರೆ.

  • Share this:

ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯವು (Karnataka Central Diocese) ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಬಿಷಪ್ ಕಾಟನ್ ಬಾಲಕರ ಶಾಲೆ (Bishop Cotton Boys School) ಹಾಗೂ ಸೇಂಟ್ ಜಾನ್ಸ್ ಹೈಸ್ಕೂಲ್​ನ ಪ್ರಿನ್ಸಿಪಾಲ​ರನ್ನು(Principals)  ಸಸ್ಪೆಂಡ್​ ಮಾಡಿದೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ. ಧರ್ಮಪ್ರಾಂತ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಕ್ರಮಗಳನ್ನು ಸರಿಯಾಗಿ ಅನುಸರಿಸಿಲ್ಲ ಎಂಬ ವಿಚಾರಕ್ಕೆ ಅಮಾನತು ಮಾಡಲಾಗಿದೆ ಎನ್ನುವ ವಿಷಯ ಮೇಲ್ನೋಟಕ್ಕೆ ತಿಳಿದುಬಂದಿದ್ದು, ಎಲ್ಲೂ ನಿಖರ ಕಾರಣವನ್ನು ಬಹಿರಂಗ ಪಡಿಸಿಲ್ಲ. 


ಇಬ್ಬರು ಪ್ರಾಂಶುಪಾಲರು ಅಮಾನತು


ಸಮಿತಿಯು ಸೋಮವಾರ, ಬಿಷಪ್ ಕಾಟನ್ ಬಾಲಕರ ಶಾಲೆಯ (ಬಿಸಿಬಿಎಸ್) ಎಸ್ ಎಡ್ವಿನ್ ಕ್ರಿಸ್ಟೋಫರ್ (S Edwin Christopher) ಮತ್ತು ಸೇಂಟ್ ಜಾನ್ಸ್ ಪ್ರೌಢಶಾಲೆಯ ಶಾಂತಾ ಸುಶೀಲ (Shanta Susheela ) ಅವರನ್ನು ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.


ಆರೋಪಗಳ ಮಾಹಿತಿ ಬಹಿರಂಗ ಮಾಡಿಲ್ಲ


ಈ ಬಗ್ಗೆ ಮಾತಾಡಿದ ರೆವ್ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್, ಇದು 'ಆಂತರಿಕ ವಿಷಯ' ಎಂದು ಹೇಳಿದ್ದಾರೆ ಇಬ್ಬರು ಪ್ರಾಂಶುಪಾಲರ ವಿರುದ್ಧದ ವಿಚಾರಣೆ ಪೂರ್ಣಗೊಂಡ ನಂತರವೇ ಆರೋಪಗಳ ವಿವರಗಳನ್ನು  ಬಹಿರಂಗಪಡಿಸಲಾಗುವುದು ಎಂದು ರೆವ್ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್ ತಿಳಿಸಿದ್ದಾರೆ.


ವಿಚಾಣೆಗೆ ತ್ರಿಸದಸ್ಯ ಸಮಿತಿ


ಈಗಾಗಲೇ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.  ಒಂದು ತಿಂಗಳೊಳಗೆ  ಸಂಪೂರ್ಣ ಮಾಹಿತಿ ನೀಡುವುದಾಗಿ ರೆವ್ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್ ತಿಳಿಸಿದ್ದಾರೆ.


ಸರ್ಕಾರಿ ಲೈಸೆನ್ಸ್ ಇಲ್ಲದ ಶಾಲೆಗಳ ವಿರುದ್ಧ FIR


ಮೊದಲೆಲ್ಲಾ ಒಂದು ಪಟ್ಟಣದಲ್ಲಿ ಒಂದೋ ಎರಡೋ ಶಾಲೆಗಳಿರುವುದು (School), ಎಲ್ಲಾ ಮಕ್ಕಳು ಬಹುತೇಕವಾಗಿ ಅದೇ ಎರಡು ಶಾಲೆಗಳಿಗೆ ಹೋಗುತ್ತಿದ್ದರು. ಅಲ್ಲದೆ ಅನೇಕರು ತಮ್ಮ ಹಳ್ಳಿಯಲ್ಲಿ (Village)  ಒಳ್ಳೆಯ ಶಾಲೆ ಇಲ್ಲ ಅಂತ ಹತ್ತಿರದ ನಗರದಲ್ಲಿರುವ ಶಾಲೆಗೆ ಹೋಗಿ ಬರುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಒಂದು ಚಿಕ್ಕ ಪಟ್ಟಣವೇ ಆಗಿರಲಿ ಅದರ ಪ್ರತಿ ಏರಿಯಾದಲ್ಲಿ ಒಂದೊಂದು ಶಾಲೆಗಳಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಬಹುದು. ಇದರಲ್ಲಿ ಸರ್ಕಾರದ ಪರವಾನಗಿಯನ್ನು (Government License) ಪಡೆದುಕೊಂಡು ಅಗತ್ಯವಾದ ಎಲ್ಲಾ ನಿಯಮಗಳನ್ನು ಪಾಲಿಸಿ ನಡೆಸುತ್ತಿರುವ ಶಾಲೆಗಳ ಸಂಖ್ಯೆ ಎಷ್ಟಿರುತ್ತದೆಯೋ ಗೊತ್ತಿಲ್ಲ.


ಕೆಲವು ಪೋಷಕರು ಶಾಲೆ ಹೇಗಿದೆ? ಸರ್ಕಾರಿ ಪರವಾನಿಗಿಯನ್ನು ಪಡೆದುಕೊಂಡಿದ್ದಾರೆಯೇ ಅಂತೆಲ್ಲಾ ವಿಷಯಗಳ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲ ಪೋಷಕರು ಅದರ ಬಗ್ಗೆ ಸ್ವಲ್ಪವೂ ತಲೆನೇ ಕೆಡೆಸಿಕೊಳ್ಳುವುದಿಲ್ಲ. ಆದರೆ ಇಂತಹ ಪರವಾನಿಗಿಯನ್ನು ಪಡೆಯದೆ ನಡೆಸುತ್ತಿರುವ ಶಾಲೆಗಳ ಮೇಲೆ ಶಿಕ್ಷಣ ಇಲಾಖೆಯವರ ಗಮನ ಮಾತ್ರ ಇದ್ದೇ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಇದನ್ನೂ ಓದಿ: Single Use Plastic Ban: ಬೆಂಗಳೂರಿಗರೇ ಅಲರ್ಟ್, ಪ್ಲಾಸ್ಟಿಕ್ ಕವರ್ ನಿಮ್ಮ ಕೈಯಲ್ಲಿದ್ದರೆ ಹಾಕ್ತಾರೆ ದಂಡ!


ಆರ್ಕಿಡ್ಸ್- ದಿ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಪ್ರಕರಣ


ಇಲ್ನೋಡಿ.. ಬೆಂಗಳೂರಿನಲ್ಲಿ ಹೀಗೆ ಒಂದು ಶಾಲೆ ಸರ್ಕಾರದ ಪರವಾನಗಿ ಇಲ್ಲದೆ ತರಗತಿಗಳನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ ಆ ಶಾಲೆಯ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಬೆಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಮೇಶ್ ವಿ ಅವರ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸರು ಮಾಗಡಿ ರಸ್ತೆಯಲ್ಲಿರುವ ಆರ್ಕಿಡ್ಸ್- ದಿ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯು ಶಾಲೆಯನ್ನು ನಡೆಸಲು ಶಿಕ್ಷಣ ಇಲಾಖೆಯಿಂದ ಪರವಾನಗಿ ಪಡೆದಿಲ್ಲ ಎಂದು ರಮೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ:  Bengaluru: ಬಂದಿದ್ದು ಮನೆಕೆಲಸಕ್ಕೆ, ಮಾಡಿದ್ದು ದರೋಡೆ! ಈ ಕಳ್ಳಿಯರು ಸಿಕ್ಕಿಬಿದ್ದಿದು ಹೇಗೆ ನೋಡಿ


ಸರ್ಕಾರದ ಪರವಾನಿಗಿ ಇಲ್ಲದೆ ಪೋಷಕರು ಮತ್ತು ಸಾರ್ವಜನಿಕರಿಗೆ ಮೋಸ


ಅನುಮತಿಯಿಲ್ಲದೆ, ಶಾಲೆಯು ಶಿಶುವಿಹಾರದಿಂದ ಹಿಡಿದು 7ನೇ ತರಗತಿಯವರೆಗೆ ಶೈಕ್ಷಣಿಕ ವರ್ಷದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳನ್ನು ಸೇರಿಸಿ ಕೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತರಗತಿಗಳನ್ನು ಈಗಾಗಲೇ ನಡೆಸಲಾಗುತ್ತಿದೆ. ಸರ್ಕಾರದ ಪರವಾನಿಗಿ ಇಲ್ಲದೆ ಶಾಲೆಯು ಮಕ್ಕಳು, ಪೋಷಕರು ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದೆ ಎಂದು ಆರೋಪಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಶಾಲೆಯ ಕಾರ್ಯದರ್ಶಿ ಮತ್ತು ಪ್ರಾಂಶುಪಾಲರಿಗೆ ನೋಟಿಸ್ ಸಹ ನೀಡಲಾಗಿದೆ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದ್ದಾರೆ.

Published by:Pavana HS
First published: