• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivamogga: ಗಣರಾಜ್ಯೋತ್ಸವ ವೇದಿಕೆಯಲ್ಲಿ ರೋಮ್ಯಾಂಟಿಕ್ ಹಾಡಿಗೆ ಡಾನ್ಸ್, ಬರ್ತ್​​​ಡೇ ಆಚರಣೆ; ಶಾಸಕ ಬಿಕೆ ಸಂಗಮೇಶ್ ವಿರುದ್ಧ ಆಕ್ರೋಶ

Shivamogga: ಗಣರಾಜ್ಯೋತ್ಸವ ವೇದಿಕೆಯಲ್ಲಿ ರೋಮ್ಯಾಂಟಿಕ್ ಹಾಡಿಗೆ ಡಾನ್ಸ್, ಬರ್ತ್​​​ಡೇ ಆಚರಣೆ; ಶಾಸಕ ಬಿಕೆ ಸಂಗಮೇಶ್ ವಿರುದ್ಧ ಆಕ್ರೋಶ

ಗಣರಾಜ್ಯೋತ್ಸವ ವೇದಿಕೆಯಲ್ಲಿ ಕೇಕ್​​ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ

ಗಣರಾಜ್ಯೋತ್ಸವ ವೇದಿಕೆಯಲ್ಲಿ ಕೇಕ್​​ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ

ಗಣರಾಜ್ಯೋತ್ಸವ ವೇದಿಕೆಯಲ್ಲಿ ರೋಮ್ಯಾಂಟಿಕ್ ಹಾಡಿಗೆ ಡಾನ್ಸ್ ಮಾಡಿದ್ದು ಮಾತ್ರವಲ್ಲದೆ, ಮತ್ತೊಂದು ವಿವಾದವನ್ನು ಶಾಸಕರು ಮೈ ಮೇಲೆ ಎಳೆದುಕೊಂಡಿದ್ದಾರೆ. ಗಣರಾಜ್ಯೋತ್ಸವ ವೇದಿಕೆಯಲ್ಲೇ ಕೇಕ್ ಕಟ್ ಮಾಡಿ ಬರ್ತ್​​ಡೇ ಆಚರಣೆ ಮಾಡಿದ್ದಾರೆ.

  • News18 Kannada
  • 2-MIN READ
  • Last Updated :
  • Shimoga, India
  • Share this:

ಶಿವಮೊಗ್ಗ: ಭದ್ರಾವತಿ (Bhadravathi Constituency) ಶಾಸಕ ಬಿ.ಕೆ ಸಂಗಮೇಶ್ (MLA B K Sangamesh)​ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಗಣರಾಜ್ಯೋತ್ಸವ ವೇದಿಕೆಯಲ್ಲಿ (Republic Day Program) ರೋಮ್ಯಾಂಟಿಕ್ ಹಾಡಿಗೆ ಡ್ಯಾನ್ಸ್ (Romantic Song) ಮಾಡಿದ್ದಾರೆ. ಶಾಸಕರ ರೋಮ್ಯಾಂಟಿಕ್ ಡ್ಯಾನ್ಸ್​ಗೆ ಅಧಿಕಾರಿಗಳೂ ಸಾಥ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಎರಡೂವರೆ ನಿಮಿಷದ ವಿಡಿಯೋ ವೈರಲ್ ಆಗಿದೆ. “ಯಾರೇ ನೀನು ರೋಜಾ ಹೂವೆ” (Yaare Neenu Roja Hoove ) ಹಾಡಿಗೆ ಶಾಸಕ ಮತ್ತು ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದರು. ಶಾಸಕರ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದರು.


ಇದರ ಬೆನ್ನಲ್ಲೇ, ಗಣರಾಜ್ಯೋತ್ಸವ ವೇದಿಕೆಯಲ್ಲಿ ರೋಮ್ಯಾಂಟಿಕ್ ಹಾಡಿಗೆ ಡಾನ್ಸ್ ಮಾಡಿದ್ದು ಮಾತ್ರವಲ್ಲದೆ, ಮತ್ತೊಂದು ವಿವಾದವನ್ನು ಶಾಸಕರು ಮೈ ಮೇಲೆ ಎಳೆದುಕೊಂಡಿದ್ದಾರೆ. ಗಣರಾಜ್ಯೋತ್ಸವ ವೇದಿಕೆಯಲ್ಲೇ ಕೇಕ್ ಕಟ್ ಮಾಡಿ ಬರ್ತ್​​ಡೇ ಆಚರಣೆ ಮಾಡಿದ್ದಾರೆ.




ಈ ಕುರಿತ ಫೋಟೋಗಳು ಕೂಡ ಸಾಮಾಜಿಲ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಧಿಕಾರಿಯೊಬ್ಬರ ಹುಟ್ಟುಹಬ್ಬ ಆಚರಿಸಿದ ಸಂಗಮೇಶ್ ಹಾಗೂ ಬೆಂಬಲಿಗರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಖಾಸಗಿ ಜನ್ಮದಿನ ಆಚರಣೆ ಮಾಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾವತಿಯ ಕನಕ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದ ಗಣರಾಜ್ಯೋತ್ಸವ ವೇದಿಕೆಯಲ್ಲಿ ಘಟನೆ ನಡೆದಿದೆ.


ಇದನ್ನೂ ಓದಿ: Tipu Sultan: ಶಿವಮೊಗ್ಗ ಪಾಲಿಕೆಯಲ್ಲಿ ಟಿಪ್ಪು ಫೋಟೋ ವಿವಾದ; ಹಿಂದೂ ಪರ ಸಂಘಟನೆ ಎಚ್ಚರಿಕೆ ಬೆನ್ನಲ್ಲೇ ಫೋಟೋ ತೆರವು!


ಚೈನ್‌ ಸ್ಕೀಮ್‌ ಬಂಧಿತ ಆರೋಪಿ


ಬೆಂಗಳೂರಿನಲ್ಲಿ ಮತ್ತೊಂದು ಪಿರಮಿಡ್​ ಬ್ಯುಸಿನೆಸ್​ ಜಾಲ ಬಯಲು


ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದ್ದ ಗ್ಯಾಂಗ್​ವೊಂದನ್ನು ಬೆಂಗಳೂರು ಪೊಲೀಸರು (Bengaluru Police) ಬಂಧನ ಮಾಡಿದ್ದು, ಆರೋಪಿಗಳ ವಿಚಾರಣೆ ಚೇಳೆ ಪಿರಮಿಡ್ ಬ್ಯುಸಿನೆಸ್ (ಚೈನ್‌ ಸ್ಕೀಮ್‌) ವಂಚನೆ ಜಾಲ ಬೆಳಕಿಗೆ ಬಂದಿದೆ. ಇ ಬಯೋಮೆಟ್ರಿಕ್ (Biometric) ಎವಾಲ್ಯೂಷನ್ ಎಂಬ ಕಂಪನಿ ಹೆಸರಿನಲ್ಲಿ ಆರೋಪಿಗಳು ಜನರಿಗೆ ವಂಚನೆ ಮಾಡುತ್ತಿದ್ದರು.


ಮನಿ‌ ಮಾರ್ಕೆಟಿಂಗ್ ಸ್ಕೀಮ್ (Money Marketing) ನಡೆಸಲು ಜಾಹೀರಾತು ನೀಡಿ ಆಮಿಷ ಒಡ್ಡುತ್ತಿದ್ದರು ಆರೋಪಿಗಳು, ಗ್ರಾಹಕರಿಂದ ಡೆಪಾಸಿಟ್ (Money Deposit) ಮಾಡಿಸಿಕೊಂಡು ಹೆಚ್ಚಿನ ಹಣದ ನೀಡುವ ಆಮಿಷ ಒಡುತ್ತಿದ್ದರು. ಸದ್ಯ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳನ್ನು ಶೇಕ್ ಸಾಧಿಕ್, ಯೋಗೇಶ್, ಪ್ರಮೋದ್, ಸುನೀಲ್ ಜೋಷಿ ಎಂದು ಗುರುತಿಸಲಾಗಿದೆ.


ಅಶೋಕ ನಗರ ಪೊಲೀಸ್


ಇದನ್ನೂ ಓದಿ: Crime News: ಸರಸಕ್ಕೆ ಅಡ್ಡಿಯಾದ ಮಗು; ಬಿಯರ್​ ಬಾಟಲಿಯಿಂದ ಹೊಡೆದು 3 ವರ್ಷದ ಕಂದಮ್ಮನನ್ನೇ ಕೊಲೆಗೈದ ಮಲತಂದೆ


ಸರಗಳ್ಳತನ ಮಾಡ್ತಿದ್ದ ಆರೋಪಿ ಅಂದರ್


ಇನ್ನೊಂದೆಡೆ, ಅಶೋಕ ನಗರ ಪೊಲೀಸರು (Ashok Nagar Police Station) ಕಾರ್ಯಾಚರಣೆ ನಡೆಸಿ ಸರಗಳ್ಳತನ ಮಾಡುತ್ತಿದ್ದ (Chain Snatching) ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಸೈಯದ್ ಖಾಸಿಫ್, ಫರೀದ್ ಅಹ್ಮದ್, ಸುಲ್ತಾನ್ ಪಾಷಾ ಬಂಧಿತ ಆರೋಪಿಗಳಾಗಿದ್ದಾರೆ.


70 ವರ್ಷದ ಹೇಮಾವತಿ ಎಂಬುವರ ಸರ ಕದ್ದು ಆರೋಪಿಗಳು ಎಸ್ಕೇಪ್​ ಆಗಿದ್ದರು, ಈ ಕುರಿತಂತೆ ದೂರು ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ ಅಶೋಕ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದು, ಆರೋಪಿಗಳಿಂದ 48.5 ಗ್ರಾಂ ಚಿನ್ನದ ಸರ (Gold Chain), 4,720 ರೂಪಾಯಿ ನಗದು (Money), ಎರಡು ಬೈಕ್ (Bike) ಮತ್ತು ಮೊಬೈಲ್ (Mobile) ಜಪ್ತಿ ಮಾಡಿದ್ದಾರೆ.

Published by:Sumanth SN
First published: