• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Dharwad: ದಂಪತಿಗೆ ಅಂಗವಿಕಲ ಶಿಶು ಜನನ; ಚಿಕಿತ್ಸೆ ವೇಳೆ ನಿರ್ಲಕ್ಷ್ಯ ತೋರಿದ್ದಕ್ಕಾಗಿ ವೈದ್ಯರಿಗೆ ₹11.10 ಲಕ್ಷ ದಂಡ

Dharwad: ದಂಪತಿಗೆ ಅಂಗವಿಕಲ ಶಿಶು ಜನನ; ಚಿಕಿತ್ಸೆ ವೇಳೆ ನಿರ್ಲಕ್ಷ್ಯ ತೋರಿದ್ದಕ್ಕಾಗಿ ವೈದ್ಯರಿಗೆ ₹11.10 ಲಕ್ಷ ದಂಡ

ಧಾರವಾಡ ಪ್ರಶಾಂತ ಆಸ್ಪತ್ರೆ

ಧಾರವಾಡ ಪ್ರಶಾಂತ ಆಸ್ಪತ್ರೆ

ಸ್ಕ್ಯಾನಿಂಗ್ ವೇಳೆ ಮಗುವಿನ ಅಂಗಾಂಗಳು ಸರಿಯಾಗಿ ಇದೆಯಾ? ಮಗು ಆರೋಗ್ಯವಾಗಿ ಇದೆಯಾ? ಎಂಬುವುದು ಗರ್ಭಿಣಿಯಾಗಿದ್ದ ವೇಳೆ ಪರೀಕ್ಷೆ ನಡೆಸಿದ ವೈದ್ಯರಿಗೆ ತಿಳಿಯುತ್ತದೆ.

 • News18 Kannada
 • 2-MIN READ
 • Last Updated :
 • Dharwad, India
 • Share this:

ಧಾರವಾಡ: ಮಗುವಿಗೆ ಜನ್ಮ ನೀಡುವುದು ಪ್ರತಿ ಮಹಿಳೆಯ (Women) ಸುಂದರ ಕನಸಾಗಿರುತ್ತದೆ. ಇದಕ್ಕಾಗಿ ಮಹಿಳೆ ತಾನು ತಾಯಿ (Mother) ಆಗಬೇಕು ಎಂದು ನಿರ್ಧರಿಸಿದ ಕ್ಷಣದಿಂದಲೇ ತನ್ನ ಆರೋಗ್ಯದ (Health) ಬಗ್ಗೆ ಹೆಚ್ಚು ಜಾಗೃತಿವಹಿಸುತ್ತಾಳೆ. ಏಕೆಂದರೆ ತಾನು ಆರೋಗ್ಯವಿದ್ದರೆ ಹುಟ್ಟುವ ಮಗುವಿಗೆ ಯಾವುದೇ ತೊಂದರೆ ಇರಬಾರದು ಎಂಬುವುದು ಎಲ್ಲಾ ಮಹಿಳೆಯರ ಉದ್ದೇಶವಾಗಿರುತ್ತದೆ. ಇದಕ್ಕಾಗಿ ವೈದ್ಯರ ಸಲಹೆಯನ್ನು ಪಡೆದುಕೊಂಡು, ಕಾಲ ಕಾಲಕ್ಕೆ ಆಸ್ಪತ್ರೆ ಭೇಟಿ ನೀಡಿ ಸಲಹೆ, ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ವೈದ್ಯರೇ (Doctor) ನಿರ್ಲಕ್ಷ್ಯ ವಹಿಸಿದರೆ ಆರೋಗ್ಯವಂತ ಮಗುವನ್ನು ಪಡೆದುಬೇಕೆಂದು ಕನಸು ಕಂಡಿದ್ದ ಮಹಿಳೆ ಹಾಗೂ ಆಕೆಯ ಕುಟುಂಬ (Family) ಸ್ಥಿತಿ ಏನಾಗಬೇಡ ನೀವೇ ಯೋಚಿಸಿ. ಇಂತದ್ದೆ ಘಟನೆಯೊಂದು ಧಾರವಾಡದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ದಂಪತಿಗೆ ಅಂಗವಿಕಲ ಮಗು ಜನಿಸಿದೆ. ಆದರೆ ಇದರಿಂದ ಮಾನಸಿಕವಾಗಿ ನೊಂದಿದ್ದ ದಂಪತಿ (Couple) ವೈದ್ಯರ ವಿರುದ್ಧ ಗ್ರಾಹಕರ ಆಯೋಗದ (Consumer Disputes Redressal Commission) ಮೆಟ್ಟಿಲೇರಿದ್ದರು. ದಂಪತಿಗಳ ಅರ್ಜಿಯನ್ನು ವಿಚಾರಣೆ ನಡೆಸಿದ ಗ್ರಾಹಕರ ಆಯೋಗ, ಚಿಕಿತ್ಸೆ ವೇಳೆ ನಿರ್ಲಕ್ಷ್ಯ ತೋರಿದ ವೈದ್ಯರಿಗೆ 11 ಲಕ್ಷ 10 ಸಾವಿರ ರೂಪಾಯಿಯನ್ನು ದಂಡವಾಗಿ ವಿಧಿಸಿ ಆದೇಶ ನೀಡಿದೆ.


ಏನಿದು ಪ್ರಕರಣ?


ಧಾರವಾಡದ ಪರಶುರಾಮ ಘಾಟ ಮತ್ತು ಪ್ರೀತಿ ದಂಪತಿ ತಮಗೆ ಆದ ಅನ್ಯಾಯದ ವಿರುದ್ಧ ಗ್ರಾಹಕರ ಆಯೋಗ ಮೊರೆ ಹೋಗಿದ್ದರು. ಧಾರವಾಡದ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಅವರು ತಮಗೆ ಮೋಸ ಮಾಡಿದ್ದಾರೆ ಎಂದು ದಂಪತಿ ದೂರು ದಾಖಲಿಸಿದ್ದರು.


ಪ್ರೀತಿ ಅವರು ಗರ್ಭಿಣಿಯಾಗಿದ ಬಳಿಕ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿರುವ ಪ್ರಶಾಂತ ನರ್ಸಿಂಗ್​ ಹೋಮ್​ನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಗರ್ಭಿಣಿಗೆ ಮೂರು ತಿಂಗಳಿನಿಂದ 9ನೇ ತಿಂಗಳಿನ ವರೆಗೂ ಡಾ.ಸೌಭಾಗ್ಯ ಕುಲಕರ್ಣಿ ಅವರೇ ಚಿಕಿತ್ಸೆ ನೀಡಿದ್ದರು. ಈ ಅವಧಿಯಲ್ಲಿ 5 ಬಾರಿ ಸ್ಕ್ಯಾನ್ ಮಾಡಿ ಮಗುವಿನ ಆರೋಗ್ಯ ಪರಿಶೀಲನೆ ನಡೆಸಿದ್ದರು.


ಸಾಂದರ್ಭಿಕ ಚಿತ್ರ


ದಂಪತಿಗೆ ಹೆಣ್ಣು ಮಗು ಜನನ


ಆ ವೇಳೆ ಗರ್ಭದಲ್ಲಿ ಮಗುವಿನ ಆರೋಗ್ಯ ಚೆನ್ನಾಗಿದೆ, ಮಗು ಆರೋಗ್ಯವಿದೆ ಎಂದು ತಿಳಿಸಿದ್ದರಂತೆ. ಆದರೆ ಪ್ರೀತಿ ಅವರಿಗೆ ಹೆರಿಗೆ ನೋವು ಕಂಡು ಬಂದ ಸಮಯದಲ್ಲಿ ವೈದ್ಯೆ ಸಿಸೇರಿಯನ್​ ಮೂಲಕ ಹೆರಿಗೆ ಮಾಡಿಸಲು ಸಲಹೆ ನೀಡಿದ್ದರಂತೆ. ಆದರೆ ಆರ್ಥಿಕ ಸಮಸ್ಯೆಯಿಂದ ಪ್ರೀತಿ ಅವರ ಪತಿ ಪರಶುರಾಮ ಅವರು ಪತ್ನಿಯನ್ನು ಧಾರವಾಡದ ಎಸ್​​ಡಿಎಂ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅವರಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಹೆರಿಗೆ ಬಳಿಕ ಮಗು ನೋಡಿದ ತಂದೆ-ತಾಯಿಗೆ ಶಾಕ್​ ಆಗಿತ್ತು. ಮಗುವಿನ ಎರಡು ಕಾಲುಗಳು ಅಂಗವಿಕಲತೆಯಿಂದ ಮಗು ಜನಿಸಿತ್ತು.


ಮಗುವಿನ ಸ್ಕ್ಯಾನಿಂಗ್ ವೇಳೆ ಮಗುವಿನ ಅಂಗಾಂಗಳು ಸರಿಯಾಗಿ ಇದೆಯಾ? ಮಗು ಆರೋಗ್ಯವಾಗಿ ಇದೆಯಾ? ಎಂಬುವುದು ಗರ್ಭಿಣಿಯಾಗಿದ್ದ ವೇಳೆ ಪರೀಕ್ಷೆ ನಡೆಸಿದ ವೈದ್ಯರಿಗೆ ತಿಳಿಯುತ್ತದೆ. ಆದರೆ ಈ ವಿಚಾರವನ್ನು ವೈದ್ಯೆ ಸೌಭಾಗ್ಯ ಅವರು ಪೋಷಕರಿಗೆ ತಿಳಿಸಿರಲಿಲ್ಲವಂತೆ. ಈ ಕುರಿತಂತೆ ಮಗುವಿನ ಪೋಷಕರು ಆರೋಪ ಮಾಡಿ ಗ್ರಾಹಕರ ಆಯೋಗ ಮೊರೆ ಹೋಗಿದ್ದರು.
ದಂಪತಿಗೆ 11.10 ಲಕ್ಷ ರೂಪಾಯಿ ನೀಡುವಂತೆ ಆದೇಶ


ಅರ್ಜಿಯನ್ನು ವಿಚಾರಣೆ ನಡೆಸಿದ ಗ್ರಾಹಕರ ಆಯೋಗ ಸರ್ವೋಚ್ಛ ನ್ಯಾಯಾಲಯದ ನಿಯಮ ಉಲ್ಲಂಘನೆಯಾಗಿರುವುದನ್ನು ದೃಢಪಡಿಸಿ ವೈದ್ಯರಿಗೆ ದಂಡ ವಿಧಿಸಿದೆ. ಮಗುವಿನ ಆರೋಗ್ಯ ಸ್ಥಿತಿ ಗೊತ್ತಿದ್ದರೂ ತಿಳಿಸಬೇಕಿದ್ದ ಪ್ರಶಾಂತ ನರ್ಸಿಂಗ್ ಹೋಮ್ ನಿರ್ಲಕ್ಷ್ಯ ತೋರಿದೆ ಎಂದು ದಂಡ ವಿಧಿಸಿದೆ.


ಪೋಷಕರ ವೈದ್ಯಕೀಯ ವೆಚ್ಚ 50 ಸಾವಿರ ರೂಪಾಯಿ, ಓಡಾಟದ ಖರ್ಚು 50 ಸಾವಿರ ರೂಪಾಯಿ, ಮಾನಸಿಕ ನೋವಿಗೆ 2 ಲಕ್ಷ ರೂಪಾಯಿ, ಮಗುವಿನ ವೈದ್ಯಕೀಯ ವೆಚ್ಚ 3 ಲಕ್ಷ ರೂಪಾಯಿ, ಮಗುವಿನ ಭವಿಷ್ಯದ ನಿರ್ವಹಣೆಗೆ 5 ಲಕ್ಷ ರೂಪಾಯಿ, ಪ್ರಕರಣ ವೆಚ್ಚ 10 ಸಾವಿರ ರೂಪಾಯಿ ಸೇರಿ ಒಟ್ಟು 11.10 ಲಕ್ಷ ರೂಪಾಯಿ ದಂಡದ ಮೊತ್ತವನ್ನು ಮಗುವಿನ ಪೋಷಕರಿಗೆ ನೀಡಲು ಗ್ರಾಹಕರ ಆಯೋಗ ತೀರ್ಪು ನೀಡಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು