Chitradurga: ಕಾನೂನು ಬಾಹಿರ ಜನನ-ಮರಣ ಪ್ರಮಾಣ ಪತ್ರ ನೀಡಿದ್ರೆ ನಿರ್ದಾಕ್ಷಿಣ್ಯ ಕ್ರಮ!

ಇದುವರೆಗೂ 15085 ಜನನ ನೋಂದಣಿ ಈ ಜನ್ಮ ತಂತ್ರಾಂಶದಲ್ಲಿ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಬಾಕಿಯಿವೆ. ಇದರಿಂದ ಜನನ ಪ್ರಮಾಣ ಪತ್ರ ಪಡೆಯುವರು ವಿನಾಕಾರಣ ನ್ಯಾಯಾಲಯಕ್ಕೆ ಅಲೆದು, ಹಣ ವ್ಯಯಿಸಿ ಜನ್ಮ ಪ್ರಮಾಣ ಪತ್ರ ಪಡೆಯುವಂತೆ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ(ಜು.16): ಜನನ-ಮರಣ ನೋಂದಣಿ (Registration) ಪ್ರಕ್ರಿಯೆ ನಿಯಮಾನುಸಾರ ಜರುಗಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಲೋಪದೋಷ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. ಕಾನೂನು ಬಾಹಿರವಾಗಿ ಜನನ ಹಾಗೂ ಮರಣ ಪ್ರಮಾಣ ಪತ್ರ (Birth Certificate) ನೀಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ (Chitradurga) ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ  ಪ್ರತಿ ತಿಂಗಳು ದಾಖಲಾಗುವ ಜನನ ಹಾಗೂ ಮರಣಗಳನ್ನು, ಅಧಿಕಾರಿಗಳು ತಪ್ಪದೇ ಅದೇ ತಿಂಗಳು ಜನನ ಮತ್ತು ಮರಣ ನೋಂದಣಾಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದಿದ್ದಾರೆ.

ಆದರೇ ಹೊರಗುತ್ತಿಗೆ ಸಿಬ್ಬಂದಿಗೆ ಜನನ ಮತ್ತು ಮರಣ ನೋಂದಣಿ ಮಾಡಲು ಅಧಿಕಾರವಿಲ್ಲ. ಸರ್ಕಾರಿ ನೌಕರರನ್ನೇ ಈ ಕೆಲಸಕ್ಕೆ ನೇಮಿಸಬೇಕು. ಪ್ರತಿ ದಿನ ಆರೋಗ್ಯಾಧಿಕಾರಿಗಳು ಪರಿಶೀಲಿಸಿ ಆಯಾ ದಿನದಂದೇ ಜನನ ಮತ್ತು ಮರಣ ನೋಂದಣಿಯನ್ನು ಪೂರ್ಣಗೊಳಿಸಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಕಂಡುಬರುವ ನ್ಯೂನತೆ ಸರಿಪಡಿಸಬೇಕು ಎಂದರು.

ಅಧಿಕಾರಿಗಳ ನಿರ್ಲಕ್ಷ್ಯ

ಇನ್ನೂ ಜಿಲ್ಲೆಯಲ್ಲಿ 2015 ರಿಂದ ಜನನ ನೊಂದಣಿಯನ್ನು ಈ ಜನ್ಮ ತಂತ್ರಾಂಶದಲ್ಲಿ ನಮೂದು ಮಾಡುವುದು ಕಡ್ಡಾಯವಾಗಿದೆ. ಇದುವರೆಗೂ 15085 ಜನನ ನೋಂದಣಿ ಈ ಜನ್ಮ ತಂತ್ರಾಂಶದಲ್ಲಿ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಬಾಕಿಯಿವೆ. ಇದರಿಂದ ಜನನ ಪ್ರಮಾಣ ಪತ್ರ ಪಡೆಯುವರು ವಿನಾಕಾರಣ ನ್ಯಾಯಾಲಯಕ್ಕೆ ಅಲೆದು, ಹಣ ವ್ಯಯಿಸಿ ಜನ್ಮ ಪ್ರಮಾಣ ಪತ್ರ ಪಡೆಯುವಂತೆ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಒಂದು ವರ್ಷದ ಅವಧಿಯೊಳಗೆ ನೋಂದಣಿಗೆ ಅವಕಾಶ

ಈ ಜನ್ಮ ತಂತ್ರಾಂಶದಲ್ಲಿ ಒಂದು ವರ್ಷದ ಅವಧಿಯೊಳಗೆ ನೋಂದಣಿಗೆ ಅವಕಾಶವಿದೆ. ಅವಧಿ ಮೀರಿದ ನೋಂದಣಿಗಳನ್ನು ಈಗ ಸರಿಪಡಿಸಿ ನೋಂದಣಿ ಮಾಡಲು ಕಾನೂನು ತೊಡಕು ಎದುರಾಗಿದೆ. ಈ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಬೇಕು. ಈ ಎಲ್ಲಾ ಪ್ರಕರಣಗಳಿಗೆ ತಗಲುವ ವೆಚ್ಚವನ್ನು ನೋಂದಣಿ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಸಂಬಂಧ ಪಟ್ಟ ವೈದ್ಯಾಧಿಕಾರಿಗಳಿಂದಲೇ ಭರಿಸಲು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಜರುಗಿದ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಇದನ್ನೂ ಓದಿ: Karnataka Government: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ಹಿಂಪಡೆದ ಬೊಮ್ಮಾಯಿ ಸರ್ಕಾರ

ಇ-ಜನ್ಮ ತಂತ್ರಾಂಶದಲ್ಲಿ ಜಿಲ್ಲೆಯಲ್ಲಿ 1533 ಮರಣ ನೋಂದಣಿ ಬಾಕಿ ಇದೆ. ಬಳಿಕ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮನಾಯ್ಕ್ ಮಾತನಾಡಿ, ಜನನ ಮರಣ ನೋಂದಣಿ ನಮೂನೆ-1 ಮತ್ತು ನಮೂನೆ-2ರಲ್ಲಿ ಗ್ರಾಮಮಟ್ಟದಲ್ಲಿ ಗ್ರಾಮಲೆಕ್ಕಿಗರು ಜನನ-ಮರಣ ನೋಂದಣಿ ಅಧಿಕಾರಿಗಳು ಮನೆಯಲ್ಲಾದ ಜನನ ಮರಣ ನೋಂದಣಿ ಮಾಡುವಾಗ ತಪ್ಪದೇ ತಂದೆ ತಾಯಿಯ ಇಬ್ಬರ ಆಧಾರ್ ಕಾರ್ಡ್, ಪಡಿತರ ಚೀಟಿ, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಚಾಲನಾ ಪರವಾನಗಿ, ಪಾಸ್ ಪೋರ್ಟ್  ದಾಖಲೆಗಳನ್ನು ಕಡ್ಡಾಯವಾಗಿ ತಪ್ಪದೇ ಸಂಗ್ರಹಿಸಿ, ಜನನ-ಮರಣ ನೋಂದಣಿಯನ್ನು ಮಾಡಬಹುದಾಗಿದೆ ಎಂದು ಹೇಳಿದರು.

ಇ-ಜನ್ಮ ತಂತ್ರಾಂಶ

ಎಲ್ಲ ಜನ-ಮರಣ ನೋಂದಣಾಧಿಕಾರಿಗಳು ಮಾಸಿಕ ವರದಿ ಸಲ್ಲಿಸುವಾಗ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಘಟನೆಗಳ ಚೆಕ್‍ಲಿಸ್ಟ್‍ನೊಂದಿಗೆ ತಮ್ಮ ನೊಂದಣಿ ಘಟನೆಗಳ ಸಂಖ್ಯೆಯನ್ನು ತಾಳಿ ಮಾಡಿ ಪರಿಶೀಲಿಸಿ ವರದಿ ಸಲ್ಲಿಸುವುದು. ಎಲ್ಲ ಘಟನೆಗಳಿಗೆ ಕಡ್ಡಾಯವಾಗಿ ಉಚಿತ ಪ್ರಮಾಣ ಪತ್ರಗಳು ವಿತರಣೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: Karnataka Weather Report: ನಿರಂತರ ಮಳೆಗೆ ತುಂಬಿ ಹರಿಯುತ್ತಿರೋ ನದಿಗಳು; ಇಂದು ಸಹ ಈ ಭಾಗದಲ್ಲಿ ವರುಣನ ಅಬ್ಬರ

2022ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ನಗರದ ಪ್ರದೇಶದಲ್ಲಿ ಒಟ್ಟು 1175 ನೋಂದಣಿ ಘಟಕಗಳಿವೆ. ಗ್ರಾಮೀಣ ಪ್ರದೇಶದಲ್ಲಿ 1163 ನೋಂದಣಿ ಘಟಕಗಳು ಹಾಗೂ ನಗರ ಪ್ರದೇಶದಲ್ಲಿ 12 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 102 ಸರ್ಕಾರಿ ಆಸ್ಪತ್ರೆಗಳು ಹಾಗೂ 34 ಖಾಸಗಿ ಆಸ್ಪತ್ರೆ ಸೇರಿದಂತೆ ಒಟ್ಟು 136 ನೋಂದಣಿ ಘಟಕಗಳು ಆಸ್ಪತ್ರೆಗಳಲ್ಲಿ ಇವೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ  ಸಭೆಗೆ ಮಾಹಿತಿ ನೀಡಿದರು.
Published by:Divya D
First published: