ಮೈಸೂರಿನಲ್ಲಿ ಹಕ್ಕಿಜ್ವರ; ಕಲ್ಲಿಂಗ್ ಆಪರೇಷನ್ ಮೂಲಕ 4100 ಪಕ್ಷಿಗಳ ಮಾರಣಹೋಮ, ಗಗನಕ್ಕೇರಿದ ಮಟನ್ ಬೆಲೆ

ದಾವಣಗೆರೆ ಜಿಲ್ಲೆಯಲ್ಲೂ ಹಕ್ಕಿಜ್ವರ ಇರುವುದು ಖಚಿತವಾಗಿದ್ದು ಇಂದಿನಿಂದ ಅಲ್ಲೂ ಸಹ ಕಲ್ಲಿಂಗ್ ಆಪರೇಷ್‌ಗೆ ಜಿಲ್ಲಾಡಳಿತ ಚಾಲ್ತಿ ನೀಡಲಿದೆ ಎಂದು ತಿಳಿದುಬಂದಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಮೈಸೂರು (ಮಾರ್ಚ್ 17); ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ನಿನೆ ಜಿಲ್ಲಾಡಳಿತ ಕಲ್ಲಿಂಗ್ ಆಪರೇಷ್‌ಗೆ ಕರೆ ನೀಡಿತ್ತು. ಈ ಕಾರ್ಯಾಚರಣೆಯಲ್ಲಿ ಮಂಗಳವಾರ ಒಟ್ಟು 4100 ಪಕ್ಷಿಗಳ ಮಾರಣಹೋಮ ನಡೆಸಲಾಗಿದ್ದು, ಉಳಿದ ಪಕ್ಷಿಗಳನ್ನು ಇಂದು ವಧೆ ಮಾಡಲಾಗುವುದು ಎಂದು ತಿಳಿದುಬಂದಿದೆ.

5 ಜನರಿರುವ 5 ತಂಡದಿಂದ ಕಲ್ಲಿಂಗ್ ಆಪರೇಷನ್ ನಡೆದಿದ್ದು, ಎರಡನೆ ದಿನವು ಸಹ 13 ಆರ್‌ಆರ್‌ಟಿ ತಂಡದಿಂದ ಈ ಕಾರ್ಯಾಚರಣೆ ನಡೆಯಲಿದೆ. ಜಿಲ್ಲೆಯಲ್ಲಿ ಇನ್ನೂ 2,500 ಸಾಕು ಪಕ್ಷಿಗಳ ಇದ್ದು ಈ ಎಲ್ಲಾ ಪಕ್ಷಗಳನ್ನು ಪಶು ಸಂಗೋಪನಾ ಇಲಾಖೆ ಸಿಬ್ಬಂದಿಗಳು ಇಂದು ವಧೆ ಮಾಡಲಿದ್ದಾರೆ.

ಇನ್ನೂ ದಾವಣಗೆರೆ ಜಿಲ್ಲೆಯಲ್ಲೂ ಹಕ್ಕಿಜ್ವರ ಇರುವುದು ಖಚಿತವಾಗಿದ್ದು ಇಂದಿನಿಂದ ಅಲ್ಲೂ ಸಹ ಕಲ್ಲಿಂಗ್ ಆಪರೇಷ್‌ಗೆ ಜಿಲ್ಲಾಡಳಿತ ಚಾಲ್ತಿ ನೀಡಲಿದೆ ಎಂದು ತಿಳಿದುಬಂದಿದೆ.

ಹಕ್ಕಿಜ್ವರದ ಹಿನ್ನೆಲೆ ಮೈಸೂರಿನಲ್ಲಿ ಕೋಳಿ ಮಾಂಸದ ಮಾರಾಟ ಬಂದ್ ಮಾಡಲಾಗಿದೆ. ಹೀಗಾಗಿ ಮೀನು, ಕುರಿ ಮತ್ತು ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮ ಮಾಂಸದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ನಿನ್ನೆ ಒಂದು ಕೆ.ಜಿ ಗೆ 550 ರೂಪಾಯಿ ಇದ್ದ ಕುರಿ ಮತ್ತು ಮೇಕೆ ಮಾಂಸದ ದರ ಇಂದು 600 ರೂಪಾಯಿಗೆ ಏರಿಕೆಯಾದರೆ, ಕೆಲವು ಕಡೆ ಕೆಜಿಗೆ 800ರೂ ಗಡಿ ದಾಟಿದೆ. ಮೀನಿನ ದರ ಮಾತ್ರ ಸ್ಥಿರವಾಗಿದೆ.

ಇದನ್ನೂ ಓದಿ : ಇಂದು ದೆಹಲಿಗೆ ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆಶಿ: ಸೋನಿಯಾ ಗಾಂಧಿ ಭೇಟಿ, ಮಹತ್ವದ ಚರ್ಚೆ
First published: