• Home
 • »
 • News
 • »
 • state
 • »
 • Bird Flu: ಮಹಾರಾಷ್ಟ್ರ ಬಿಹಾರದಲ್ಲಿ ಹೆಚ್ಚಿದ ಹಕ್ಕಿಜ್ವರ: ರಾಜ್ಯದಲ್ಲಿ ಶುರುವಾಯ್ತು ಹಕ್ಕಿಜ್ವರದ ಆತಂಕ

Bird Flu: ಮಹಾರಾಷ್ಟ್ರ ಬಿಹಾರದಲ್ಲಿ ಹೆಚ್ಚಿದ ಹಕ್ಕಿಜ್ವರ: ರಾಜ್ಯದಲ್ಲಿ ಶುರುವಾಯ್ತು ಹಕ್ಕಿಜ್ವರದ ಆತಂಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bird flu symptoms: ಹಕ್ಕಿಗಳ ಸಾಕಣೆ ಮಾಡುವವರು, ಕೋಳಿ ಫಾರಂಗಳಲ್ಲಿ 'ಎಚ್‌5ಎನ್‌1' ವೈರಾಣುವು ನೇರವಾಗಿ ಮನುಷ್ಯರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಕೋಳಿಗಳು ಸತ್ತಕೂಡಲೇ ಮಣ್ಣಿನಲ್ಲಿ ಸೂಕ್ತ ರೀತಿಯಲ್ಲಿ ಹೂಳಬೇಕು. ಕೆಲಸಗಾರರು ಕೈಗಳ ಸ್ವಚ್ಛತೆ ಕಡೆಗೆ ಹೆಚ್ಚೆಚ್ಚು ಗಮನ ಕೊಡಬೇಕು

ಮುಂದೆ ಓದಿ ...
 • Share this:

  ಪ್ರಸ್ತುತ ದೇಶದಲ್ಲಿ ಕೋರೋನಾ(Corona) ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಈಗ ದೇಶದಲ್ಲಿ(Country) ಮತ್ತೊಂದು ಭೀತಿ ಎದುರಾಗಿದ್ದು ಬಿಹಾರ(Bihar) ಮಹಾರಾಷ್ಟ್ರ(Maharashtra) ಸೇರಿ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರದ(Bird Flu) ಆತಂಕ ಕಾಣಿಸಿಕೊಂಡಿದೆ. ಮೊದಲು ನೆರೆಯ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರದ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಕರ್ನಾಟಕದಲ್ಲಿಯೂ(Karnataka) ಆತಂಕ ಶುರುವಾಗಿದೆ.ಥಾಣೆ(Thane) ಮತ್ತು ಪಾಲ್ಘರ್ ಸೇರಿ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಹಕ್ಕಿಜ್ವರದ ಆತಂಕ ಕಾಣಿಸಿಕೊಂಡಿರುವುದರಿಂದ ಸೋಂಕಿನ ಹಾಟ್‌ಸ್ಪಾಟ್‌ಗಳ ಕಿಲೋಮೀಟರ್ ವ್ಯಾಪ್ತಿಯೊಳಗೆ 25,000 ಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲು ನಿರ್ಧರಿಸಿದೆ. ಜೊತೆಗೆ ಸೋಂಕಿತ ಜಮೀನಿನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಪ್ರತ್ಯೇಕಿಸಲಾಗಿದೆ. ಇನ್ನು ಬಿಹಾರದ ಜಮೀನೊಂದರಲ್ಲಿರುವ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಅದರಲ್ಲಿದ್ದ 3,859 ಕೋಳಿಗಳ ಪೈಕಿ 787 ಕೋಳಿಗಳು ಮೃತಪಟ್ಟಿವೆ.


  ರಾಜ್ಯದಲ್ಲಿಯೂ ಹೆಚ್ಚಿದ ಹಕ್ಕಿ ಜ್ವರದ ಭೀತಿ


  ಇನ್ನು ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ರಾಜ್ಯದಲ್ಲಿಯೂ ಹಕ್ಕಿಜ್ವರ ಕಾಣಿಸಿಕೊಳ್ಳುವ ಆತಂಕ ಶುರುವಾಗಿದೆ.. ಪ್ರತಿನಿತ್ಯ ಮಹಾರಾಷ್ಟ್ರದ ಮೂಲಕ ಸಾವಿರಾರು ಸಂಖ್ಯೆಯ ಪ್ರಯಾಣಿಕರು ರಾಜ್ಯ ಪ್ರವೇಶಿಸುತ್ತಾರೆ. ಹೀಗಾಗಿ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಹಲವು ಜಿಲ್ಲೆಗಳ ರೈತರಲ್ಲಿ ಆತಂಕ ಶುರುವಾಗಿದೆ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.


  ಇದನ್ನೂ ಓದಿ: ದಿನವೂ ಗೊರಕೆ ಹೊಡೆಯುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!


  ಏನಿದು ಏವಿಯನ್ ಇನ್ಫ್ಲುಯೆನ್ಸ..?


  ಕೋಳಿ ಸೇರಿ ಹಲವು ರೀತಿಯ ಪಕ್ಷಗಳಿಗೆ ಬರುವ ಜ್ವರವೇ ಹಕ್ಕಿ ಜ್ವರವಾಗಿದೆ. ಇವುಗಳಲ್ಲಿಯೇ ಎಚ್5ಎನ್1, ಎಚ್7ಎನ್9, ಎಚ್5ಎನ್6 ಸೇರಿ ಹಲವು ರೀತಿಯ ವೈರಾಣುಗಳಿದ್ದು, ಮಾನವನಿಗೆ ಹರಡುವ ಸಾಧ್ಯತೆ ಇರುವುದರಿಂದ ಹಾಗೂ ಈಗಾಗಲೇ ಹಕ್ಕಿ ಜ್ವರದಿಂದ ಜಗತ್ತಿನಾದ್ಯಂತ ಸಾವಿರಾರು ಜನ ಮೃತಪಟ್ಟಿರುವುದರಿಂದ ಇವುಗಳ ಕುರಿತು ಆತಂಕ ಜಾಸ್ತಿ ಇದೆ.


  ಇನ್ನು ಮನಷ್ಯರು ಆ ವೈರಸ್ ಸಂಪರ್ಕಕ್ಕೆ ಬಂದರೆ ಇದು ಮನುಷ್ಯರು ಮತ್ತು ಇತರ ಪ್ರಾಣಿಗಳಿಗೆ ಸುಲಭವಾಗಿ ಹರಡುತ್ತದೆ. ಆದಾಗ್ಯೂ, ಈ ವೈರಸ್‌ಗಳು ಮನುಷ್ಯರಿಂದ ಮನುಷ್ಯನಿಗೆ ಹರಡುವ ಸಾಮರ್ಥ್ಯವನ್ನು ಹೊಂದಿಲ್ಲ.


  ರೋಗದ ಲಕ್ಷಣಗಳು ಏನು..?


  ಎವಿಯನ್‌ ಇನ್‌ಫ್ಲುಯೆಂಜಾ ' ವೈರಾಣುವು ಸೋಂಕು ಶುರು ಮಾಡಿದ 2 ರಿಂದ 5 ದಿನಗಳವರೆಗೆ ರೋಗಲಕ್ಷಣವನ್ನು ಪ್ರದರ್ಶಿಸಲ್ಲ. ಆದರೆ ಬಳಿಕ 17 ದಿನಗಳವರೆಗೆ ಜ್ವರದಲ್ಲಿ ಬಹುವಾಗಿ ಎಚ್5ಎನ್1 ಮಾದರಿಯ ಜ್ವರ ಜಾಸ್ತಿಯಾಗಿ ಕಂಡುಬರುತ್ತದೆ.


  ಈ ವೈರಾಣು ಮನುಷ್ಯನಿಗೆ ಹರಡಿದರೆ ವಾಕರಿಕೆ, ಅತಿಸಾರ, ಕೆಮ್ಮು, ಜ್ವರ, ತಲೆನೋವು, ಉಸಿರಾಟದ ಸಮಸ್ಯೆ, ಮೂಗು ಸೋರುವಿಕೆ, ಗಂಟಲು, ಸ್ನಾಯುನೋವು ಹಾಗೂ ಅಸ್ವಸ್ಥತೆ ಲಕ್ಷಣಗಳು ಕಂಡು ಬರುತ್ತವೆ. ಇನ್ನು ರೋಗಿಗಳಿಗೆ ಮತ್ತು ವೃದ್ಧರಲ್ಲಿ ಈ ಸೋಂಕು ಮಾರಣಾಂತಿಕ ಕೂಡ ಎನಿಸಬಲ್ಲದು ಎಂದು ತಜ್ಞವೈದ್ಯರು ಎಚ್ಚರಿಸಿದ್ದಾರೆ.


  ಮುಂಜಾಗೃತ ಕ್ರಮಗಳೇನು..?


  ವೈಯಕ್ತಿಕವಾಗಿ ನೈರ್ಮಲ್ಯ ಕಾಪಾಡಿಕೊಳ್ಳುವುದು


  ಮುಕ್ತ ಮಾರುಕಟ್ಟೆಯಲ್ಲಿ ಮಾಂಸ ಖರೀದಿಸದಿರುವುದು


  ಕೋಳಿ ಮಾಂಸವನ್ನು ಸ್ವಚ್ಛಗೊಳಿಸುವಾಗ ಮತ್ತು ಸಿದ್ಧಪಡಿಸುವಾಗ ಕೈಗವಸುಗಳನ್ನು ಧರಿಸಿ


  ಕೋಳಿ ಫಾರಂಗಳಿಗೆ ತೆರಳಿ ಖರೀದಿ, ಅವುಗಳನ್ನು ಮುಟ್ಟದಿರುವುದು


  ಲಕ್ಷಣ ಕಾಣಿಸಿಕೊಳ್ಳುತ್ತಲೇ ವೈದ್ಯರ ಬಳಿ ತೆರಳುವುದು


  ಅರೆ ಬೆಂದ ಕೋಳಿ ಮಾಂಸ, ಮೊಟ್ಟೆ ಸೇವಿಸದಿರುವುದು


  ರೆಸ್ಟೋರೆಂಟ್ ನಿಂದ ತಾತ್ಕಾಲಿಕವಾಗಿ ಚಿಕನ್ ಖಾದ್ಯ ಆರ್ಡರ್ ಮಾಡುವುದನ್ನು ತಪ್ಪಿಸಿ


  ಇನ್ನು ಹಕ್ಕಿಗಳ ಸಾಕಣೆ ಮಾಡುವವರು, ಕೋಳಿ ಫಾರಂಗಳಲ್ಲಿ 'ಎಚ್‌5ಎನ್‌1' ವೈರಾಣುವು ನೇರವಾಗಿ ಮನುಷ್ಯರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಕೋಳಿಗಳು ಸತ್ತಕೂಡಲೇ ಮಣ್ಣಿನಲ್ಲಿ ಸೂಕ್ತ ರೀತಿಯಲ್ಲಿ ಹೂಳಬೇಕು. ಕೆಲಸಗಾರರು ಕೈಗಳ ಸ್ವಚ್ಛತೆ ಕಡೆಗೆ ಹೆಚ್ಚೆಚ್ಚು ಗಮನ ಕೊಡಬೇಕು.


  ಇದನ್ನೂ ಓದಿ: ಏಡ್ಸ್​​ನಿಂದ ಗುಣಮುಖಳಾದ ವಿಶ್ವದ ಮೊದಲ ಮಹಿಳೆ.. ಇದು ಸಾಧ್ಯವಾಗಿದ್ದು ಹೇಗೆ?


  ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2003 ಮತ್ತು 2014ರ ನಡುವೆ ಜಾಗತಿಕವಾಗಿ 407 ಮಾನವ ಜೀವಗಳನ್ನ ವೈರಸ್ ಬಲಿ ತೆಗೆದುಕೊಂಡಿದೆ. ಭಾರತದಲ್ಲಿ ಈ ರೋಗದ ಮೊದಲ ಉಲ್ಬಣವು 2006ರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿತ್ತು. ನಂತ್ರದ ವರ್ಷಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಪ್ರಕರಣಗಳು ಕಂಡುಬಂದವು.


  2006 ಮತ್ತು 2015ರ ನಡುವೆ 15 ರಾಜ್ಯಗಳಲ್ಲಿ ಪಕ್ಷಿಗಳಲ್ಲಿ ಭಾರತದಲ್ಲಿ ಜ್ವರದ ಸೋಂಕು ಕಾಣಿಸಿಕೊಂಡಿತ್ತು, ಮತ್ತು ಇಲ್ಲಿಯವರೆಗೆ ದೇಶದಲ್ಲಿ ಯಾವುದೇ ಮಾನವರು ಸೋಂಕಿಗೆ ಒಳಗಾಗಿಲ್ಲ.

  Published by:ranjumbkgowda1 ranjumbkgowda1
  First published: