ಪಕ್ಷಿಗಣತಿ: ಬಂಡೀಪುರದಲ್ಲಿ ಮೊದಲ ಬಾರಿಗೆ ಗ್ರೇಟ್ ಹಾರ್ನ್​​​ಬಿಲ್ ಪಕ್ಷಿ ಇರುವಿಕೆ ಪತ್ತೆ

1977 ರಲ್ಲಿ ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ, ಸೇನಾನಿ 225 ಪ್ರಭೇದದ ಪಕ್ಷಿಗಳನ್ನು ಗುರುತಿಸಿದ್ದರು. 1998 ರಲ್ಲಿ ಡಾ.ಅಮೀನ್ ಅಹಮದ್ ಹಾಗೂ ಐಎಎಸ್ ಅಧಿಕಾರಿ ಕೆ.ಏಕಾಂತಪ್ಪ ಅವರು 123 ಪ್ರಭೇದದ ಪಕ್ಷಿಗಳನ್ನು ಗುರುತಿಸಿ ದಾಖಲಿಸಿದ್ದು,  ಇದೀಗ 289  ಪ್ರಭೇದದ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿದೆ.

ಗ್ರೇಟ್ ಹಾರ್ನ್​​ಬಿಲ್​ ಪಕ್ಷಿ

ಗ್ರೇಟ್ ಹಾರ್ನ್​​ಬಿಲ್​ ಪಕ್ಷಿ

  • Share this:
ಚಾಮರಾಜನಗರ ( ಫೆ.10): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳ ಕಾಲ ನಡೆದ ಪಕ್ಷಿ ಗಣತಿ ಮುಕ್ತಾಯವಾಗಿದ್ದು, ಎರಡು ಬಗೆಯ ಅಪರೂಪದ ಪಕ್ಷಿಗಳು ಪತ್ತೆಯಾಗಿವೆ. ಅಲ್ಲದೆ ಇದೇ ಮೊದಲ ಬಾರಿಗೆ ಈ ಅರಣ್ಯದಲ್ಲಿ ಗ್ರೇಟ್​ ಹಾರ್ನ್​​ಬಿಲ್​ (Great Hornbill) ಪಕ್ಷಿ ಸಹ ಕಾಣಿಸಿಕೊಂಡಿದೆ

1998 ರಲ್ಲಿ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ  123 ಪ್ರಭೇದದ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿತ್ತು. ಆದರೆ 22 ವರ್ಷಗಳ ನಂತರ ನಡೆದ ಪಕ್ಷಿ ಗಣತಿಯಲ್ಲಿ 289 ಪ್ರಭೇದದ ಪಕ್ಷಿಗಳು ಕಂಡು ಬಂದಿವೆ. ಕಳೆದ ಮೂರು ದಿನಗಳಿಂದ   ಪಕ್ಷಿ ತಜ್ಞರು, ಪಕ್ಷಿ ಪ್ರಿಯರು, ಸ್ವಯಂ ಸೇವಕರು ಹಾಗೂ ಅರಣ್ಯ ಸಿಬ್ಬಂದಿ  ನಡೆಸಿದ ಪಕ್ಷಿ ಗಣತಿಯಲ್ಲಿ, ಕೆಲವು ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ  ಪ್ರಭೇದದ ಪಕ್ಷಿಗಳು ಕಂಡುಬಂದಿವೆ.

Bar headed geese,  Crested tree swift,  Northern pintail,  Temminck's stint,  Bonelli's eagle,  Stork billed kingfisher,  Black napped monarch,  Verditer flycatcher ಹಾಗು Lesser yellow napped wood pecker ನಂತಹ ಅಪರೂಪ ಹಾಗೂ ಅಳಿವಿನಂಚಿನಲ್ಲಿರುವ ಪಕ್ಷಿಗಳು ಕಂಡು ಬಂದಿವೆ.

ಕರ್ನಾಟಕ ಪಕ್ಷಿ ಗಣತಿಯಡಿ ಸೇರಿಲ್ಲದ  ಲೆಸ್ಸರ್ ಫಿಶ್ ಈಗಲ್ ( Lesser fish eagle),  ಹಾಗೂ ಟಾನಿ ಬೆಲ್ಲೀಡ್ ಬ್ಯಾಬ್ಲರ್ ( Tawny bellied babbler)  ಎಂಬ ಪಕ್ಷಿಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.

ಕೋಲಾರದಲ್ಲಿ ಗ್ರಾ.ಪಂ.ಅಧ್ಯಕ್ಷ್ಯ-ಉಪಾಧ್ಯಕ್ಷ ಚುನಾವಣೆ; ಕೆಜಿಎಫ್​​ನಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರ ಹೈಡ್ರಾಮ; ಚುನಾವಣೆ ಮುಂದೂಡಿಕೆ

ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ವ್ಯಾಪಿಸಿಕೊಂಡಿರುವ ಬಂಡೀಪುರ  ಹುಲಿ ಸಂರಕ್ಷಿತ ಪ್ರದೇಶ 1020 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. 13 ವಲಯಗಳನ್ನು ಹೊಂದಿರುವ ಈ ಅರಣ್ಯಪ್ರದೇಶದಲ್ಲಿ ಹುಲಿ,ಚಿರತೆ ಆನೆ, ಕರಡಿ, ಕಾಡೆಮ್ಮೆ, ಜಿಂಕೆ, ಕಡವೆ ಮೊದಲಾದ ಪ್ರಾಣಿ ಸಂಕುಲವಿದ್ದು, ವನ್ಯ ಪ್ರಾಣಿಗಳ  ಗಣತಿ ಕಾರ್ಯ ಪ್ರತಿವರ್ಷ ಕ್ಯಾಮೆರಾ ಟ್ರ್ಯಾಪ್ ಸರ್ವೇ ಮೂಲಕ ನಡೆಸಲಾಗುತ್ತದೆ.

ಆದರೆ 1998 ರಿಂದ  ಪಕ್ಷಿ ಗಣತಿ  ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ  ಪಕ್ಷಿ ಸಂಕುಲವನ್ನು ಗುರುತಿಸಿ ದಾಖಲಿಸುವ ಸಲುವಾಗಿ  ವನ್ಯಜೀವಿ ತಜ್ಞರು, ಛಾಯಾಚಿತ್ರಗ್ರಾರರು, ಹವ್ಯಾಸಿಗಳು ಹಾಗು ಸ್ವಯಂ ಸೇವಕರನ್ನು ಒಳಗೊಂಡಂತೆ ಪಕ್ಷಿ ಗಣತಿ ನಡೆಸಲಾಗಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ, ಹುಲಿ ಯೋಜನೆ ನಿರ್ದೇಶಕ ನಟೇಶ್ ತಿಳಿಸಿದ್ದಾರೆ.

ಈ ಹಿಂದೆ ಬಂಡೀಪುರ ಹುಲಿ ಯೋಜನೆ ವಿಭಾಗವು ಮೈಸೂರು ಪ್ರಾಂತ್ಯಕ್ಕೆ ಒಳಪಟ್ಟಿದ್ದಾಗ 113 ಪ್ರಭೇದದ ಪಕ್ಷಿಗಳು ಮಾತ್ರ ದಾಖಲಾಗಿದ್ದವು. 1939 ರಲ್ಲಿ ನವೆಂಬರ್ 15 ರಿಂದ 26 ರವರೆಗೆ ಪಕ್ಷಿ ತಜ್ಞ ಡಾ.ಸಲೀಂ ಆಲಿ ಅವರು 134 ಪ್ರಭೇದದ ಪಕ್ಷಿಗಳನ್ನು ಗುರುತಿಸಿ ದಾಖಲಿಸಿದ್ದರು. 1974 ರಲ್ಲಿ  ಬಂಡೀಪುರ ಅರಣ್ಯದ ನಿರ್ವಹಣೆ ಯೋಜನೆಯನ್ನು ಸಿದ್ದಪಡಿಸುವಾಗ 179 ಪ್ರಭೇದ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿದೆ.

1977 ರಲ್ಲಿ ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ, ಸೇನಾನಿ 225 ಪ್ರಭೇದದ ಪಕ್ಷಿಗಳನ್ನು ಗುರುತಿಸಿದ್ದರು. 1998 ರಲ್ಲಿ ಡಾ.ಅಮೀನ್ ಅಹಮದ್ ಹಾಗೂ ಐಎಎಸ್ ಅಧಿಕಾರಿ ಕೆ.ಏಕಾಂತಪ್ಪ ಅವರು 123 ಪ್ರಭೇದದ ಪಕ್ಷಿಗಳನ್ನು ಗುರುತಿಸಿ ದಾಖಲಿಸಿದ್ದು,  ಇದೀಗ 289  ಪ್ರಭೇದದ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Published by:Latha CG
First published: