• Home
  • »
  • News
  • »
  • state
  • »
  • ಡ್ರಗ್​ ಪೆಡ್ಲರ್​​ ಜೊತೆ 78 ಸಲ ಫೋನ್​ ಕಾಲ್, 50 ಲಕ್ಷ ಹಣ ವರ್ಗಾವಣೆ; ಕೇರಳದ ಮಾಜಿ ಸಚಿವರ ಮಗನಿಗೆ ಇಡಿ ಡ್ರಿಲ್

ಡ್ರಗ್​ ಪೆಡ್ಲರ್​​ ಜೊತೆ 78 ಸಲ ಫೋನ್​ ಕಾಲ್, 50 ಲಕ್ಷ ಹಣ ವರ್ಗಾವಣೆ; ಕೇರಳದ ಮಾಜಿ ಸಚಿವರ ಮಗನಿಗೆ ಇಡಿ ಡ್ರಿಲ್

 ಬಿನೀಶ್ ಕೊಡಿಯೇರಿ

ಬಿನೀಶ್ ಕೊಡಿಯೇರಿ

ಅಕ್ರಮ ಹಣದ ವಹಿವಾಟು ಪ್ರಕರಣದ ಬಗ್ಗೆ ಇಡಿ ಅಧಿಕಾರಿಗಳು ಅನೂಪ್ ವಿಚಾರಣೆ‌ ನಡೆಸಿದಾಗ‌ ಅನೂಪ್​​ಗೆ 50 ಲಕ್ಷ ಹಣವನ್ನು ಸಾಲವಾಗಿ ಬಿನೀಶ್ ಕೊಟ್ಟಿರುವುದು ಬೆಳಕಿಗೆ ಬಂದಿದೆ.

  • Share this:

ಬೆಂಗಳೂರು(ಅ.06): ಕೇರಳದ‌ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನಿಗೆ ಸದ್ಯ ಇಡಿ ಸಂಕಷ್ಟ ಎದುರಾಗಿದ್ದು,  ಸದ್ಯ ಡ್ರಗ್ ಪೆಡ್ಲರ್ ಜೊತೆ ಸಂಪರ್ಕದಲ್ಲಿರುವ ಬಗ್ಗೆ  ಫೋನ್ ಕಾಲ್ ಲಿಸ್ಟ್‌ ಹಾಗೂ ಹಣದ ವ್ಯವಹಾರದ ದಾಖಲೆ ಇಡಿ ಕೈಗೆ ಸಿಕ್ಕಿದೆ. ಇದರಿಂದ ಬಿನೀಶ್ ಕೊಡಿಯೇರಿಗೆ ನೊಟೀಸ್ ನೀಡಲಾಗಿದ್ದು, ಇಂದು ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ. ಆಗಸ್ಟ್​​​ನಲ್ಲಿ ಎನ್ ಸಿ ಬಿ ಅಧಿಕಾರಿಗಳು ಅನೂಪ್ ಮಹಮದ್​​ನನ್ನು ಬಂಧಿಸಿದ್ದರು. ತದ ನಂತರ ಆತನ ಸಂಪರ್ಕ ಬಗ್ಗೆ ಮಾಹಿತಿ ಕಲೆಹಾಕಿದಾಗ ಇದೇ ಅನೂಪ್, ಬಿನೀಶ್ ಕೊಡಿಯೇರಿ ಜೊತೆ  ಮಾರ್ಚ್ 31 ರಿಂದ ಆಗಸ್ಟ್ 19ರ ವರೆಗೂ ಇಬ್ಬರು ಪರಸ್ಪರ 78 ಬಾರಿ ಕಾಲ್ ಮಾಡಿ ಮಾತನಾಡಿದ್ದಾರೆ. ಅನೂಪ್ ಮೊಬೈಲ್ ನಂಬರ್ *******944 ನಿಂದ ಬಿನೀಶ್ *******456 ನಂಬರ್ ಗೆ 78 ಬಾರಿ ಕಾಲ್ ಹೋಗಿರುವ ಮಾಹಿತಿ ಲಭಿಸಿದೆ.


ಉಪಚುನಾವಣಾ ಕಣದಂತೆ ರಂಗೇರಿದ ಶಿಕ್ಷಕರ ಕ್ಷೇತ್ರದ ಕದನ; ಕಾಂಗ್ರೆಸ್​​ನಿಂದ ಪ್ರವೀಣ್ ಪೀಟರ್ ನಾಮಪತ್ರ ಸಲ್ಲಿಕೆ


ಅನೂಪ್ ಬಂಧನ‌ ಆಗುವ ಮೊದಲು ಆಗಸ್ಟ್ ತಿಂಗಳಲ್ಲಿಯೂ 8 ಬಾರಿ ಕರೆ ಮಾಡಿದ್ದ ಬಿನೀಶ್, ಆಗಸ್ಟ್​​ 19 ರಂದು ಒಂದೇ ದಿನ 5 ಬಾರಿ ಪರಸ್ಪರ ದೂರವಾಣಿ ಸಂಪರ್ಕ  ಮಾಡಿ ಮಾತನಾಡಿದ್ದಾರೆ. ಅಕ್ರಮ ಹಣದ ವಹಿವಾಟು ಪ್ರಕರಣದ ಬಗ್ಗೆ ಇಡಿ ಅಧಿಕಾರಿಗಳು ಅನೂಪ್ ವಿಚಾರಣೆ‌ ನಡೆಸಿದಾಗ‌ ಅನೂಪ್​​ಗೆ 50 ಲಕ್ಷ ಹಣವನ್ನು ಸಾಲವಾಗಿ ಬಿನೀಶ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಅದೇ ಹಣದಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ಹಾಗೂ ಪಬ್ ತೆರೆಸಿದ್ದ ಎನ್ನಲಾಗಿದೆ.


ಆದರೆ ಲಾಕ್ ಡೌನ್ ಹಾಗೂ ಕೊರಓನಾದಿಂದ ರೆಸ್ಟೋರೆಂಟ್ ಹಾಗೂ ಪಬ್ ಲಾಸ್ ಗೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಿರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ. ಸದ್ಯ ಇದೆಲ್ಲದರ ಆಧಾರದ ಮೇರೆಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿರುವ ಇಡಿ, ಇಂದು ಬಿನೀಶ್ ಕೊಡಿಗೇರಿಯ ತೀವ್ರ ವಿಚಾರಣೆ‌ ಮಾಡಿ ಹಣದ ವ್ಯವಹಾರದ‌ ಮಾಹಿತಿ ಕಲೆ ಹಾಕಲಿದ್ದಾರೆ.


ಇದರ ಜೊತೆಗೆ ಕೇರಳ ಗೋಲ್ಡ್ ಸ್ಮಗ್ಲಿಂಗ್  ಕೇಸ್ ನಲ್ಲಿ ಸ್ವಪ್ನಾ ಸುರೇಶ್ ಎಂಬಾಕೆಯನ್ನು ಬಂಧಿಸಲಾಗಿತ್ತು. ಈ ವೇಳೆ ಕೊಚ್ಚಿ ಇಡಿಯಿಂದಲೂ ಬಿನೇಶ್ ಗೆ ನೊಟೀಸ್ ನೀಡಿ ವಿಚಾರಣೆ ಮಾಡಲಾಗಿತ್ತು. ಈಗ ಬೆಂಗಳೂರು ಇಡಿ ಅಧಿಕಾರಿಗಳು ಇದರ ಬಗ್ಗೆ ಕೂಡ ಬಿನೇಶ್ ವಿಚಾರಣೆಯ ವೇಳೆ ಮಾಹಿತಿ ಕಲೆ ಹಾಕಲಿದ್ದಾರೆ. ಬೀನೇಶ್ ಬಳಿ ಕೋಟಿ ಕೋಟಿ ಆಸ್ತಿ ಇರುವ ಮಾಹಿತಿ ಇದ್ದು ಹಣದ ಮೂಲದ ಬಗ್ಗೆ ತನಿಖೆ ನಡೆಸಲಿದ್ದಾರೆ.

Published by:Latha CG
First published: