ಬಿಂಡಿಗ ದೇವಿರಮ್ಮನ ಜಾತ್ರೆಗೆ ಕ್ಷಣಗಣನೆ; ಮಳೆಯ ಕಾರಣದಿಂದ ಇಂದು ಬೆಟ್ಟ ಏರದಂತೆ ಜಿಲ್ಲಾಡಳಿತ ನಿಷೇಧ

ಕಾಫಿನಾಡಿನ ಐತಿಹಾಸ ಪ್ರಸಿದ್ಧ ದೇವಿರಮ್ಮನಿಗೂ ಕ್ಯಾರ್ ಚಂಡಮಾರುತದ ಎಫೆಕ್ಟ್ ಬೀರಿದ್ದು, ದೇವರ ದರ್ಶನಕ್ಕೆ ಮಧ್ಯರಾತ್ರಿ ಬೆಟ್ಟ ಹತ್ತುವ ಭಕ್ತರಿಗೆ ಜಿಲ್ಲಾಡಳಿತ ನಿರ್ಭಂದ ಹೇರಿದೆ. ಶನಿವಾರ ಮಧ್ಯರಾತ್ರಿ ಬೆಟ್ಟ ಹತ್ತುವ ಬದಲು, ಭಾನುವಾರ ಬೆಳಗ್ಗಿನ ಜಾವ ಬೆಟ್ಟ ಹತ್ತುವಂತೆ ಸೂಚಿಸಿದೆ

G Hareeshkumar | news18-kannada
Updated:October 26, 2019, 7:41 AM IST
ಬಿಂಡಿಗ ದೇವಿರಮ್ಮನ ಜಾತ್ರೆಗೆ ಕ್ಷಣಗಣನೆ; ಮಳೆಯ ಕಾರಣದಿಂದ ಇಂದು ಬೆಟ್ಟ ಏರದಂತೆ ಜಿಲ್ಲಾಡಳಿತ ನಿಷೇಧ
ಬಿಂಡಿಗ ದೇವಿರಮ್ಮ
  • Share this:
ಚಿಕ್ಕಮಗಳೂರು (ಅ.26) : ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುಮಾರು 3000 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿ ಪೂಜಿಸಲ್ಪಡುವ ದೇವಿರಮ್ಮನ ದರ್ಶನಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಭಾನುವಾರ ಬೆಳಿಗ್ಗೆ 3000 ಅಡಿ ಎತ್ತರದ ಹಸಿರು ಸಿರಿಯಲ್ಲಿ ದೇವಿರಮ್ಮ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ಅಕ್ಟೋಬರ್ 27 ಅಂದ್ರೆ ನರಕ ಚತುರ್ದಶಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನ ದೇವಿಗೆ ಸಲ್ಲಿಸಿ ಭಾನುವಾರ ಬೆಳಗಿನ ಜಾವ 4 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತೆ. ನರಕ ಚತುದರ್ಶಿಯಂದು ಕಾಲಿಗೆ ಚಪ್ಪಲಿಯನ್ನು ಹಾಕದೆ ಕಾಡು, ಬೆಟ್ಟ-ಗುಡ್ಡದ ಕಲ್ಲಿನ ಹಾದಿ, ಕಲ್ಲು-ಮುಳ್ಳುಗಳ ನಡುವೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗ್ತಾರೆ. ಈ ಜಾತ್ರೆಯಲ್ಲಿ ಪಾಲ್ಗೊಂಡು, ಬೆಟ್ಟವನ್ನೇರಿ ಪೂಜೆ ಮಾಡಿಸಿದ್ರೆ ಭಕ್ತರ ಇಷ್ಟಾರ್ಥ ಸಿದ್ಧಿಸುವುದರಿಂದ ಭಕ್ತರು ಜಾತ್ರೆಯಂದು ದೇಹವನ್ನ ದಂಡಿಸೋದ್ರ ಮೂಲಕ ತಮ್ಮ ಕಾರ್ಯ, ಬಯಕೆಯನ್ನ ಸಿದ್ಧಿಸಿಕೊಳ್ಳುತ್ತಾರೆ.

ಸಮುದ್ರಮಟ್ಟದಿಂದ ಸುಮಾರು 3000 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರ ಪೂಜೆ ನಡೆಯೋದು. ಈ ಬೆಟ್ಟಕ್ಕೆ ಯಾವುದೇ ರಸ್ತೆ ಸಂಪರ್ಕವೂ ಇಲ್ಲ. ಇದರಿಂದಾಗಿ ಬೆಟ್ಟಗುಡ್ಡಗಳನ್ನು ಅಲೆದಾಡಿಕೊಂಡೆ ಬರಬೇಕು. ಜೊತೆಗೆ ಬೆಟ್ಟ ಏರುವಾಗ ಯಾವುದೇ ಆಹಾರವನ್ನು ಸ್ವೀಕರಿಸುವಂತಿಲ್ಲ. ಕಾಲಿಗೆ ಚಪ್ಪಲಿಯನ್ನು ಹಾಕುವಂತಿಲ್ಲ. ದೇವರಿಗೆ ಪೂಜೆ ಸಲ್ಲಿಸಿದ ನಂತರ ಈ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ. ರಾಜ್ಯ ಹೊರರಾಜ್ಯಗಳಿಂದ ಆಗಮಿಸೋ ಭಕ್ತಾಧಿಗಳಿಗೆ ಸಕಲ ಸಿದ್ದತೆಯನ್ನ ಜಿಲ್ಲಾಡಳಿತ ಹಾಗೂ ದೇವಾಲಯ ಸಮಿತಿ ವ್ಯವಸ್ಥೆಯನ್ನ ಕಲ್ಪಿಸಿಕೊಂಡಿದ್ದಾರೆ. ಈ ಬಾರಿ 50 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಬೆಟ್ಟವನ್ನೆರುವ  ನಿರೀಕ್ಷೆಯಿದೆ.

ಇದನ್ನೂ ಓದಿ : ದೀಪಾವಳಿ ಹಬ್ಬಕ್ಕೆ ಕೆಎಸ್ ಆರ್ ಟಿಸಿ ನೌಕರರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

ಇಂದು ಬೆಟ್ಟ ಹತ್ತುವಂತಿಲ್ಲ

ಕಾಫಿನಾಡಿನ ಐತಿಹಾಸ ಪ್ರಸಿದ್ಧ ದೇವಿರಮ್ಮನಿಗೂ ಕ್ಯಾರ್ ಚಂಡಮಾರುತದ ಎಫೆಕ್ಟ್ ಬೀರಿದ್ದು, ದೇವರ ದರ್ಶನಕ್ಕೆ ಮಧ್ಯರಾತ್ರಿ ಬೆಟ್ಟ ಹತ್ತುವ ಭಕ್ತರಿಗೆ ಜಿಲ್ಲಾಡಳಿತ ನಿರ್ಭಂದ ಹೇರಿದೆ. ಶನಿವಾರ ಮಧ್ಯರಾತ್ರಿ ಬೆಟ್ಟ ಹತ್ತುವ ಬದಲು, ಭಾನುವಾರ ಬೆಳಗ್ಗಿನ ಜಾವ ಬೆಟ್ಟ ಹತ್ತುವಂತೆ ಸೂಚಿಸಿದೆ. ಸಾಲದಕ್ಕೆ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬೆಟ್ಟಗಡ್ಡಗಳ ಪರಿಶೀಲನೆ ನಡೆಸಿದ್ದು, ಕುಸಿಯುವ ಆತಂಕವನ್ನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ದೀಪಾವಳಿ ದಿನದಂದು ಆರಂಭಗೊಳ್ಳುವ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮನ ದರ್ಶನಕ್ಕೆ ಜನರು ಕಾತುರದಿಂದ ಕಾದು ಕೂತಿದ್ದಾರೆ. ದೇವಸ್ಥಾನದ ಸುತ್ತ ಮುತ್ತ ದೇವಸ್ಥಾನ ಆಡಳಿತ ಮಂಡಳಿ ಸಕಲ ಸೌಲಭ್ಯಗಳನ್ನು ಮಾಡಿದೆ. ದೇವಿರಮ್ಮನ ಬೆಟ್ಟದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ವಿಸಲಾಗಿದೆ.(ವರದಿ: ವಿರೇಶ್  ಜಿ ಹೊಸೂರು)

First published: October 26, 2019, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading