ಬಾಣಸವಾಡಿಯಲ್ಲಿ ನಡೆದುಹೋಗುತ್ತಿದ್ದ ಹುಡುಗಿಯರ ಎದೆಗೆ ಒದ್ದ ಪುಂಡರು..!

ಆ ರಸ್ತೆ ಪುಂಡರ ಹಾಟ್ ಫೇವರಿಟ್ ಮೀಟಿಂಗ್ ಪ್ಲೇಸ್....ಮಹಿಳೆಯರಲ್ಲ ಪುರಷರೇ ಓಡಾಡೋಕೆ ಭಯ ಪಡ್ತಾರೆ..... ಯಾರತ್ರ ಕದಿಯೋದು ,ದೋಚೋದು ಅನ್ನೋಕೆ ಪ್ಲ್ಯಾನ್ ರೂಪಿಸೋ ಈ ಪೋಕರಿಗಳು ಏನ್ ಮಾಡಿದ್ದಾರೆ ಗೊತ್ತ? ನೋಡಿದ್ರೆ ನೀವು ಒಮ್ಮೆ ದಂಗಾಗಿ ಹೋಗ್ತೀರಾ.


Updated:April 25, 2018, 5:55 PM IST
ಬಾಣಸವಾಡಿಯಲ್ಲಿ ನಡೆದುಹೋಗುತ್ತಿದ್ದ ಹುಡುಗಿಯರ ಎದೆಗೆ ಒದ್ದ ಪುಂಡರು..!
ಸಿಸಿಟಿವಿ ದೃಶ್ಯ
  • Share this:
- ಕಿರಣ್ ಕೆ., ನ್ಯೂಸ್18 ಕನ್ನಡ

ಬೆಂಗಳೂರು(ಏ. 25): ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿರುವ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗುತ್ತಿದ್ದು, ಬಾಣಸವಾಡಿಯಲ್ಲಿ ಹುಡುಗಿಯರ ಮೇಲೆ ಕಿರಾತಕರು ಎರಗಿಬಿದ್ದ ಘಟನೆ ಬೆಳಕಿಗೆ ಬಂದಿದೆ. ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದ ಹುಡುಗಿಯರಿಗೆ ಪುಂಡರು ಎದೆಗೆ ಒದ್ದು ಗಾಯಗೊಳಿಸಿರುವ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಬಾಣಸವಾಡಿಯ ಲಿಂಗರಾಜಪುರ ಬಳಿಯಿರುವ ಕರಿಯಣ್ಣನಪಾಳ್ಯದ ಕಿರಿದಾದ ರಸ್ತೆಯಲ್ಲಿ ಮೊನ್ನೆ ಸಂಜೆ 6:45ಕ್ಕೆ ಈ ಘಟನೆ ನಡೆದಿದೆ. ಅಂದು, ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದಾಗ ಬೈಕ್​ನಲ್ಲಿ ಇಬ್ಬರು ಪುಂಡರು ಸ್ಪೀಡಾಗಿ ಬರುತ್ತಾರೆ. ಕಾಲು ಚಾಚಿಕೊಂಡೇ ಇದ್ದ ಹಿಂಬದಿ ಸವಾರ ಆ ಹುಡುಗಿಯರಿಗೆ ಒದೆಯುತ್ತಾನೆ. ಒಬ್ಬ ಹುಡುಯ ಎದೆ ಮತ್ತು ಬೆನ್ನಿಗೆ ತೀವ್ರ ಪೆಟ್ಟು ಬಿದ್ದಿದೆ.

ಹುಡುಗಿಯರು ಕೆಳಗೆ ಬಿದ್ದ ಕೂಡಲೇ ಅಲ್ಲೇ ಇದ್ದ ಸ್ಥಳೀಯರು ರಕ್ಷಿಸಿದ್ದಾರೆ. ಘಟನೆ ಬಗ್ಗೆ ಭಯ ಪಟ್ಟ ಹುಡುಗಿಯರು ಪೊಲೀಸ್ ಠಾಣೆಗೆ ಹೋಗಲೂ ಹಿಂದೇಟು ಹಾಕಿದ್ದಾರೆ. ಸ್ಥಳೀಯರು ನಾವು ಬರ್ತೀವಿ ಬಾಮ್ಮ ಅಂದ್ರೂ ಭಯದಲ್ಲೇ ಮನೆಗೆ ಹೋಗಿದ್ದಾರೆ.

ಇನ್ನು, ಈ ರಸ್ತೆಯಲ್ಲಿ ಸಾಕಷ್ಟು ಪುಡಾರಿಗಳು ಬೀಡುಬಿಟ್ಟಿದ್ದಾರೆ ಈ ಹಿಂದೆಯೂ ಕೂಡ ಇದೇ ರಸ್ತೆಯಲ್ಲಿ ಸರಗಳ್ಳತನ ಆಗಿತ್ತು. ಆದ್ರೆ ಆಗೊಮ್ಮೆ ಈಗೊಮ್ಮೆ ಬರೋ ಪೊಲೀಸರು ಇತ್ತ ಗಮನ ಹರಿಸೋದಿಲ್ಲ ಅನ್ನೋದು ಸ್ಥಳೀಯರ ದೂರು. ರಸ್ತೆಯಲ್ಲಿ ಬೇಕಾದ ಹಾಗೆ ವಾಹನ ಚಲಿಸುತ್ತವೆ. ಇದರ ಬಗ್ಗೆ ಎಷ್ಟೇ ದೂರು ನೀಡಿದ್ರು ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಸಂಕಟ ತೋಡಿಕೊಳ್ಳುತ್ತಾರೆ.

ಸದ್ಯ ಸ್ಥಳೀಯರೇ ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಇವತ್ತು ಆ ಹುಡುಗಿಯರಿಗೇ ಆದ ಹಾಗೆ ನಮಗೂ ಆಗಬಾರದು ಎಂಬ ‌ದೃಷ್ಟಿಯಿಂದ ಸ್ಥಳೀಯರೇ ಈ ಬಗ್ಗೆ ದೂರು ದಾಖಲಿಸಲು‌ ಮುಂದಾಗಿದ್ದಾರೆ.
First published:April 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...