ಬೈಕ್​​ಗೆ ಕನ್ನಡದ ನಾಮಫಲಕ ಹಾಕಿದ್ದ ಕನ್ನಡಿಗನಿಗೆ 500 ರೂ. ದಂಡ ಹಾಕಿದ ಬೆಂಗಳೂರು ಪೊಲೀಸರು

ಇನ್ನು, ಹೀಗೆ ಕನ್ನಡ ನೇಮ್​​ ಪ್ಲೇಟ್​​ ಹಾಕಿದ್ದ ಕನ್ನಡಿಗನಿಗೆ ದಂಡ ವಿಧಿಸಿದ ಬೆಂಗಳೂರು ಪೊಲೀಸರ ಮೇಲೆ ಕನ್ನಡಿಗರು ಕೆಂಡಕಾರುತ್ತಿದ್ದಾರೆ.  ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಸಾಮಾನ್ಯವಾಗಿ ಕನ್ನಡದ ಮೇಲೆ ಕನ್ನಡಿಗರಿಗೆ ಪ್ರೀತಿ ಇರುತ್ತದೆ. ಆಗಿದ್ದಾಗ ವಾಹನಗಳ ಮೇಲೆ ಕನ್ನಡ ನೋಂದಣಿ ಫಲಕ ಬರೆಸಿದರೆ ತಪ್ಪೇನು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Updated:March 14, 2020, 3:55 PM IST

  • Share this:
ಬೆಂಗಳೂರು(ಮಾ.14): ಕನ್ನಡದ ಬಗ್ಗೆ ಕನ್ನಡಿಗರಿಗೆ ಅಭಿಮಾನ ಇದ್ದೇ ಇರುತ್ತದೆ. ನಾಡಭಾಷೆ ಮೇಲಿನ ನಮ್ಮ ಕಳವಳಿ ಹಾಗೂ ಪ್ರೀತಿ ಇರುವ ಕುರಿತು ಎರಡು ಮಾತಿಲ್ಲ. ಕನ್ನಡ ಭಾಷೆಯ ಮೇಲೆ ಪ್ರೀತಿಯಿಂದ ಹೆಚ್ಚಿನವರು ವಾಹನಗಳಿಗೆ ಕನ್ನಡ ನಂಬರ್ ಪ್ಲೇಟ್ ಹಾಕುವ ಮೂಲಕ ತೋರುತ್ತಾರೆ. ಬರೀ ಕನ್ನಡಿಗರು ಮಾತ್ರವಲ್ಲ. ತಮಿಳು, ಮಲಯಾಲಂ ಭಾಷೆಯಲ್ಲೂ ಇಂತಹ ನಂಬರ್ ಪ್ಲೇಟುಗಳು ಇವೆ. ಆದರೆ, ಹೀಗೆ ಕನ್ನಡದಲ್ಲಿ ನಂಬರ್ ಪ್ಲೇಟ್ ಹಾಕಿ ಕನ್ನಡ ಪ್ರೇಮವನ್ನು ತೋರಿದ ಬೈಕ್​​ ಸವಾರನೋರ್ವನಿಗೆ ಪೀಣ್ಯ ಸಂಚಾರಿ ಠಾಣೆ ಪೊಲೀಸರು 500 ರೂ. ದಂಡ ವಿಧಿಸಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಶುಕ್ರವಾರ(ನಿನ್ನೆ) ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಕನ್ನಡಿಗ ಮಹೇಶ್​​​ ಎಂಬಾತ ಬೈಕಿನಲ್ಲಿ ಪೀಣ್ಯದಲ್ಲಿ ಸಂಚರಿಸುತ್ತಿದ್ದ. ಈ ವೇಳೆ ಹೀರೋ ವೊಂಡಾ ಬೈಕ್​​​​​​ ಓಡಿಸುತ್ತಿದ್ದ ಈತನನ್ನು ತಡೆದ ಸಂಚಾರಿ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ ಸಂಪೂರ್ಣವಾಗಿ ಕನ್ನಡದಲ್ಲಿ ಬರೆಯಲಾಗಿದೆ. ಇದು ಕಾನೂನು ಬಾಹೀರ. ಆದ್ದರಿಂದಲೇ ದಂಡ ವಿಧಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ದಂಡ ತೆತ್ತ ಕನ್ನಡಿಗ ಮಹೇಶ್​ ತನ್ನ ಫೇಸ್ಬುಕ್​​ ಮೂಲಕ ಪೋಸ್ಟ್​ ಮಾಡಿದ್ದಾರೆ. ಜತೆಗೆ ಒಂದೆಡೆ ಕನ್ನಡ ಉಳಿಸಿ ಎನ್ನುವ ಪೊಲೀಸರು ಇನ್ನೊಂದೆಡೆ ದಂಡ ಹಾಕುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ಧಾರೆ.

ಇನ್ನು, ಹೀಗೆ ಕನ್ನಡ ನೇಮ್​​ ಪ್ಲೇಟ್​​ ಹಾಕಿದ್ದ ಕನ್ನಡಿಗನಿಗೆ ದಂಡ ವಿಧಿಸಿದ ಬೆಂಗಳೂರು ಪೊಲೀಸರ ಮೇಲೆ ಕನ್ನಡಿಗರು ಕೆಂಡಕಾರುತ್ತಿದ್ದಾರೆ.  ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಸಾಮಾನ್ಯವಾಗಿ ಕನ್ನಡದ ಮೇಲೆ ಕನ್ನಡಿಗರಿಗೆ ಪ್ರೀತಿ ಇರುತ್ತದೆ. ಆಗಿದ್ದಾಗ ವಾಹನಗಳ ಮೇಲೆ ಕನ್ನಡ ನೋಂದಣಿ ಫಲಕ ಬರೆಸಿದರೆ ತಪ್ಪೇನು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ತಡೆಗೆ ಕೇಂದ್ರ ಸರ್ಕಾರ ತುರ್ತಾಗಿ ಪ್ರತ್ಯೇಕ ಬಜೆಟ್​ ಮಂಡಿಸಬೇಕು; ಸಿದ್ದರಾಮಯ್ಯ ಒತ್ತಾಯ

ಕನ್ನಡದಲ್ಲಿ ನಂಬರ್ ಪ್ಲೇಟ್ ಇದ್ದರೆ ತಪ್ಪು, ಕನ್ನಡ ಬಾವುಟದ ಅಸ್ತಿತ್ವವೇ ತಪ್ಪು, ಕರ್ನಾಟಕದ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಕನ್ನಡ ಒಂದು ಭಾಷೆಯಾಗಿಯಾದರೂ ಕಲಿಸಬೇಕು ಅನ್ನುವುದು ತಪ್ಪು, ನೆಲ, ನೀರು, ತೆರಿಗೆ, ವಿದ್ಯುತ್ ಎಲ್ಲ ಕೊಟ್ಟ ಮೇಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ (ಮೀಸಲಾತಿಯಲ್ಲ) ಕೇಳುವುದೂ ತಪ್ಪು, ಮತ್ತು ಇವಲ್ಲವೂ ಭಾರತದ ಸಂವಿಧಾನದ ಪ್ರಕಾರ ತಪ್ಪು. ಹೀಗೆ ಕರ್ನಾಟಕದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಲೇ ಇದೆ. ಇದಕ್ಕೆ ಕಾರಣ ಯಾರು? ಎಂದು ಕನ್ನಡಿಗರು ಸೋಷಿಯಲ್​​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:March 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading