• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮುಖಕ್ಕೆ ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಕೇಳೋದೆ ಬೇಡ; ಕೊರೋನಾ ಮಧ್ಯಯೇ ಚಿಕ್ಕಮಗಳೂರಿನಲ್ಲಿ ಬೈಕ್ ರ‍್ಯಾಲಿ

ಮುಖಕ್ಕೆ ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಕೇಳೋದೆ ಬೇಡ; ಕೊರೋನಾ ಮಧ್ಯಯೇ ಚಿಕ್ಕಮಗಳೂರಿನಲ್ಲಿ ಬೈಕ್ ರ‍್ಯಾಲಿ

ಬೈಕ್ ರ್ಯಾಲಿ

ಬೈಕ್ ರ್ಯಾಲಿ

ಅಖಾಡದಲ್ಲಿ ಕೇರಳ, ಚೆನ್ನೈ, ತಮಿಳುನಾಡಿನ ಡ್ರೈವರ್‍ಗಳಿಗೆ ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ಹಾಸನ, ಮಂಗಳೂರು, ತುಮಕೂರಿನ ರೈಡರ್‍ಗಳು ಸವಾಲೆಸಿದ್ರು. ರ್ಯಾಲಿಯಲ್ಲಿ ಒಟ್ಟು 90ಕ್ಕೂ ಹೆಚ್ಚು ರೈಡರ್​ಗಳು ಗೆಲುವಿನ ಜಿದ್ದಾಜಿದ್ದಿಗೆ ಬಿದ್ದಿದ್ರು

  • Share this:

ಚಿಕ್ಕಮಗಳೂರು(ಏ.12): ಮುಖಕ್ಕೆ ಮಾಸ್ಕ್ ಇಲ್ಲ. ಸಾಮಾಜಿಕ ಅಂತರ ಕೇಳೋದೆ ಬೇಡ. ಮುಖದ ಮೇಲೆ ಮಾಸ್ಕ್ ಇದ್ದವರಿಗಿಂತ ಇಲ್ಲದವರೇ ಹೆಚ್ಚು, ಕೊರೋನಾ ಮಧ್ಯೆಯೇ ಚಿಕ್ಕಮಗಳೂರು ಟೀಮ್ 65 ಯುವಕರ ತಂಡ ನಗರದ ಬೈಪಾಸ್ ರಸ್ತೆಯ ಪಟಾಕಿ ಗ್ರೌಂಡ್‍ನಲ್ಲಿ ಬೈಕ್ ರ್ಯಾಲಿ ಆಯೋಜಿಸಿತ್ತು. ಈ ಕೊರೋನಾ ಕಾಲದಲ್ಲಿ ಇದೆಲ್ಲಾ ಬೇಕಿತ್ತಾ ಅನ್ನೋ ಜಿಜ್ಞಾಸೆ ಕೂಡ ಕಾಡ್ತಿದೆ.


ಯಾಕೆಂದರೆ ಒಬ್ಬರ ಮುಖದಲ್ಲೂ ಮಾಸ್ಕ್ ಇರಲಿಲ್ಲ. ಸಾಮಾಜಿಕ ಅಂತರವಂತೂ ದೂರದ ಮಾತು. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಜೋರಾಗ್ತಿದೆ. ಈ ಮಧ್ಯೆ ಆಯೋಜಕರು ನಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಆಯೋಜನೆ ಮಾಡಿದ್ದೇವೆ ಅಂತಿದ್ದಾರೆ.


ಇನ್ನು ಸುಜ್ಹಕಿ, ಹೀರೋ, ಯಮಹಾ ಕಂಪನಿಯ ಬೈಕ್‍ಗಳು ಕಿರಿದಾದ ಅಖಾಡದಲ್ಲಿ ನಾ ಮುಂದು ತಾ ಮುಂದು ಅಂತಾ ಧೂಳೆಬ್ಬಿಸ್ತಾ ಸಾಗುತ್ತಿದ್ದರೆ, ನೋಡಿದವರಿಗೆ ತಾವೇ ಬೈಕ್ ರೈಡ್ ಮಾಡಿದಷ್ಟು  ಖುಷಿ ಆಗ್ತಿತ್ತು. ನೋಡೋಕೆ ಬೈಕ್ ರ್ಯಾಲಿಯೇನೋ ಚೆನ್ನಾಗಿತ್ತು. ಆದರೆ ಕೊರೊನಾ ಟೈಮ್ ನಲ್ಲಿ ರ್ಯಾಲಿ ಬೇಕಿತ್ತಾ ಅನ್ನೋದು ಸಾರ್ವಜನಿಕರ ಮಾತಾಗಿದೆ.


ಕೊರೋನಾ ಎಫೆಕ್ಟ್​: ಬನ್ನೇರುಘಟ್ಟ ಪಾರ್ಕ್​​ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ


ಪ್ರೇಕ್ಷಕರ ಮನೋರಂಜನೆಗೆಂದೇ ಸಿದ್ಧಪಡಿಸಿದ್ದ ಟ್ರ್ಯಾಕ್‍ನಲ್ಲಿ ಸ್ಪರ್ಧಾಳುಗಳು ಮೈನವಿರೇಳಿಸೋ ಪ್ರದರ್ಶನ ತೋರ್ಸಿದ್ರು. ಒಂದರಿಂದ ಒಂದೂವರೆ ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಚಾಕಚಕ್ಯತೆ ನೋಡ್ತಿದ್ದೋರ ಎದೆ ಮೇಲೆ ಬೈಕ್ ಹೋದಂತಿತ್ತು. ಅಖಾಡದಲ್ಲಿ ಕೇರಳ, ಚೆನ್ನೈ, ತಮಿಳುನಾಡಿನ ಡ್ರೈವರ್‍ಗಳಿಗೆ ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ಹಾಸನ, ಮಂಗಳೂರು, ತುಮಕೂರಿನ ರೈಡರ್‍ಗಳು ಸವಾಲೆಸಿದ್ರು. ರ್ಯಾಲಿಯಲ್ಲಿ ಒಟ್ಟು 90ಕ್ಕೂ ಹೆಚ್ಚು ರೈಡರ್​ಗಳು ಗೆಲುವಿನ ಜಿದ್ದಾಜಿದ್ದಿಗೆ ಬಿದ್ದಿದ್ರು. ರ್ಯಾಲಿಯ ಚಾಂಪಿಯನ್ ಆಗೋಕೆ ರೈಡರ್‍ಗಳು ಮನಸ್ಸೋ ಇಚ್ಛೆ ನುಗ್ತಿರೋದ್ನ ಕಂಡ ಪ್ರೇಕ್ಷಕರು ಫುಲ್ ಎಂಜಾಯ್ ಮಾಡಿದ್ರು. ರೈಡರ್ ಕೂಡ ಕೊರೊನಾ ನಾನು ಬರೋದಿಲ್ಲ ಎಂದಿದ್ದೆ. ಆದರೆ, ಆಯೋಜಕರು ನಮ್ಮಲ್ಲಿ ಕಡಿಮೆ ಇದೆ. ನಾವು ಎಲ್ಲಾ ಮುಂಜಾಗೃತ ಕ್ರಮಕೈಗೊಂಡಿದ್ದೇವೆ ಎಂದಿದ್ದಕ್ಕೆ ಬಂದೆ. ಆಯೋಜನೆ ಚೆನ್ನಾಗಿದೆ ಅಂತಿದ್ದಾರೆ ಸ್ಪರ್ಧಾಳು.


ಒಟ್ಟಾರೆ, ಪ್ರೇಕ್ಷಕರ ಮನೋರಂಜನೆಗೆಂದೇ ಆಯೋಜಿಸಿದ್ದ ಟ್ರ್ಯಾಕ್ ಹಾಗೂ ರೇಸ್‍ನಲ್ಲಿ ಹೊರರಾಜ್ಯದ ರೈಡರ್​​ಗಳ ಜೊತೆ ರಾಜ್ಯದ ಸ್ಪರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. ಇನ್ನು ಕಿರಿದಾದ ಟ್ರ್ಯಾಕ್‍ನಲ್ಲಿ ರೈಡರ್​ಗಳು ಧೂಳೆಬ್ಬಿಸ್ತಾ ಬೈಕ್‍ಗಳನ್ನ ಓಡಿಸ್ತಿದ್ರೆ, ಕಾಫಿನಾಡಿಗರು ಸಖತ್ ಎಂಜಾಯ್ ಮಾಡಿದ್ರು. ಆದ್ರೆ, ದಿನಕಳೆದಂತೆ ಕೊರೋನಾದ ರಣಕೇಕೆ ಮಧ್ಯೆ ಆಯೋಜಕರು ರ್ಯಾಲಿ ಪ್ರಿಯರ ಮೇಲೆ ಅಷ್ಟಾಗಿ ಗಮನ ಹರಿಸಿರಲಿಲ್ಲ. ಒಂದು ವೇಳೆ, ಇಲ್ಲಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದ್ರೆ ಹೊಣೆ ಯಾರು ಅನ್ನೋ ಪ್ರಶ್ನೆ ಕೂಡ ಮೂಡಿದೆ.

Published by:Latha CG
First published: