• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Viral Video: ಕನ್ನಡ ಗೊತ್ತಿಲ್ಲ ಎಂದ ಬಿಹಾರಿ ಯುವಕನಿಗೆ ನಿಂದಿಸಿದ ಬೆಂಗಳೂರಿನ ವ್ಯಕ್ತಿ, ಇಷ್ಟಕ್ಕೂ ಏನಿದು ಅಸಲಿ ಕಥೆ?

Viral Video: ಕನ್ನಡ ಗೊತ್ತಿಲ್ಲ ಎಂದ ಬಿಹಾರಿ ಯುವಕನಿಗೆ ನಿಂದಿಸಿದ ಬೆಂಗಳೂರಿನ ವ್ಯಕ್ತಿ, ಇಷ್ಟಕ್ಕೂ ಏನಿದು ಅಸಲಿ ಕಥೆ?

ವೈರಲ್​ ವಿಡಿಯೋ

ವೈರಲ್​ ವಿಡಿಯೋ

ಬೆಂಗಳೂರಿನಲ್ಲಿ ಯಾವುದೋ ಕಾರಣಕ್ಕೆ ಗ್ರಾಹಕರ ಮತ್ತು ಬಿಹಾರ್ ಮೂಲದ ವ್ಯಕ್ತಿಯ ನಡುವೆ ಶುರುವಾದ ಜಗಳ ಯಾವ ಬಣ್ಣಕ್ಕೆ ತಿರುಗಿದೆ ನೋಡಿ.

 • Trending Desk
 • 3-MIN READ
 • Last Updated :
 • Bangalore, India
 • Share this:

ಬೆಂಗಳೂರು: ಈಗಂತೂ ಬೇರೆ ರಾಜ್ಯದ (State) ಜನರು ಇನ್ನೊಂದು ರಾಜ್ಯಕ್ಕೆ ಬಂದು ಕೆಲಸ ಮಾಡುವಾಗ ಅನೇಕ ರೀತಿಯ ಭಾಷೆಯ ಸಮಸ್ಯೆಗಳು ಆಗುವುದನ್ನು ನಾವು ನೋಡಿರುತ್ತೇವೆ. ಸ್ಥಳೀಯ ಭಾಷೆಯಲ್ಲಿ ಹೇಳಿದ ಮಾತುಗಳು ಭಾಷೆ ಬಾರದೇ ಇದ್ದವರಿಗೆ ತಪ್ಪು ಅರ್ಥ ತಲುಪಿಸಬಹುದು. ಕೆಲವೊಮ್ಮೆ ಜನರು ಸಹ ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳನ್ನು ಮಾತಾಡುತ್ತಾರೆ. ಈ ರೀತಿಯಾಗಿ ಚಿಕ್ಕದಾಗಿ ಶುರುವಾದ ವಾದ ವಿವಾದಗಳು ದೊಡ್ಡ ಜಗಳಕ್ಕೆ ತಿರುಗಿಬಿಡುತ್ತವೆ. ಹೀಗೆ ಬೆಂಗಳೂರಿನಲ್ಲಿ (Bengaluru) ಯಾವುದೋ ಕಾರಣಕ್ಕೆ ಗ್ರಾಹಕರ ಮತ್ತು ಬಿಹಾರ್ ಮೂಲದ ವ್ಯಕ್ತಿಯ ನಡುವೆ ಶುರುವಾದ ಜಗಳ ಯಾವ ಬಣ್ಣಕ್ಕೆ ತಿರುಗಿದೆ ನೋಡಿ.


ಬೆಂಗಳೂರಿನಲ್ಲಿ ನಡೆದ ನಿಂದನೆ ಪ್ರಕರಣ ಏನು ನೋಡಿ..


ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಬಿಹಾರ ಮೂಲದ ಯುವಕನೊಬ್ಬ ಕನ್ನಡ ಗೊತ್ತಿಲ್ಲದ ಕಾರಣ ಸ್ಥಳೀಯರಿಂದ ಕಿರುಕುಳ ಮತ್ತು ನಿಂದನೆಗೆ ಒಳಗಾಗಿದ್ದೇನೆ ಅಂತ ಆರೋಪಿಸಿದ್ದಾರೆ ನೋಡಿ. ಅಷ್ಟೇ ಅಲ್ಲದೆ ಈ ವ್ಯಕ್ತಿ ಇದಕ್ಕೆ ಸಂಬಂಧಪಟ್ಟಂತೆ ಒಂದು ವಿಡಿಯೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ.


ಏಪ್ರಿಲ್ 7 ರಂದು ಅಪ್ಲೋಡ್ ಮಾಡಿದ ಈ ವಿಡಿಯೋದಲ್ಲಿ, ಕನ್ನಡ ಗೊತ್ತಿಲ್ಲದ ಕಾರಣ ತನ್ನನ್ನು ನಿಂದಿಸಲಾಗಿದೆ ಮತ್ತು ಬೆದರಿಕೆ ಹಾಕಲಾಗಿದೆ ಎಂದು ವ್ಯಕ್ತಿ ಅಳುತ್ತಾ ಕೋಪದಿಂದ ಹೇಳುತ್ತಿರುವುದನ್ನು ನಾವು ನೋಡಬಹುದಾಗಿದೆ.


ಇದನ್ನೂ ಓದಿ: ಕಾಮನ್​ಮ್ಯಾನ್ ಸಿಎಂ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?


ತಾನು ಬಿಹಾರದ ಮುಜಾಫರ್‌ಪುರ್ ಮೂಲದವನು ಎಂದು ಹೇಳುವ ವ್ಯಕ್ತಿ, ತಾನು ಬೆಂಗಳೂರಿನ ಫುಡ್ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಿರುವುದನ್ನು ನಾವು ವೀಡಿಯೋದ ಪ್ರಾರಂಭದಲ್ಲಿ ನೋಡಬಹುದು.


ಕೋಪಗೊಂಡ ಬಿಹಾರದ ವ್ಯಕ್ತಿ ವಿಡಿಯೋದಲ್ಲಿ ಏನೆಲ್ಲಾ ಹೇಳಿಕೊಂಡಿದ್ದಾರೆ ಗೊತ್ತೇ?


"ಅವರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ? ಅವರು ನಮ್ಮನ್ನು ಕೊಲ್ಲುತ್ತಾರೆಯೇ? ಕರುಣೆ ತೋರಿಸದೆ ಎಲ್ಲರೂ ನಮ್ಮನ್ನು ನಿಂದಿಸುತ್ತಾರೆ ಮತ್ತು ಕೀಳಾಗಿ ಕಾಣುತ್ತಾರೆ. ಕರ್ನಾಟಕ ಸರ್ಕಾರ ಇಲ್ಲಿ ಬಂದು ಕೆಲಸ ಮಾಡುವ ಹಿಂದಿ ಭಾಷಿಕರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇನೆ.


ನಾನು ಇಲ್ಲಿ ಕಷ್ಟಪಟ್ಟು ದುಡಿಯುತ್ತೇನೆ, ಈ ಜನರು ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೋಗುತ್ತಾರೆ. ಈ ಜನರಿಗೆ ಹಿಂದಿ ಮಾತನಾಡುವ ವ್ಯಕ್ತಿ ಬಗ್ಗೆ ಯಾಕಿಷ್ಟು ಕೋಪ? ಬಿಹಾರಿಯಾಗಿರುವುದು ಅಪರಾಧವೇ? ನಾವು ಈ ದೇಶಕ್ಕೆ ಸೇರಿದವರಲ್ಲವೇ? ನಾನು ಸವಾಲು ಹಾಕುತ್ತೇನೆ, ಈಗ ಬಂದು ನನ್ನನ್ನು ಕೊಲ್ಲಿ ನೋಡೋಣ, ನಾನು ನಿಮ್ಮೊಡನೆ ಜಗಳಕ್ಕೆ ಸಿದ್ಧನಿದ್ದೇನೆ" ಎಂದು ಆ ವ್ಯಕ್ತಿ ವೀಡಿಯೋದಲ್ಲಿ ಹೇಳಿದ್ದಾನೆ.


ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದ್ದು, ಜನರು ಈ ವೀಡಿಯೋ ಹಂಚಿಕೊಂಡು ಈ ಕ್ಲಿಪ್ 'ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಜನಾಂಗೀಯ ದ್ವೇಷವನ್ನು ಬಹಿರಂಗಪಡಿಸಿದೆ' ಎಂದು ಹೇಳಿದ್ದಾರೆ.


ವಿಷಯ ಭಾಷೆಯದಲ್ಲ, ಕೆಟ್ಟ ಆಹಾರಕ್ಕೆ ಸಂಬಂಧಿಸಿದ್ದು ಅಂತಾರೆ ಪೊಲೀಸ್ ಕಮಿಷನರ್


ಆದರೆ ಈ ವೈರಲ್ ವಿಡಿಯೋವನ್ನು ಗಮನಿಸಿದ ಬೆಂಗಳೂರು ಪೊಲೀಸರು, ಇದು ಭಾಷೆಯ ವಿಷಯವಲ್ಲ, ಕೆಟ್ಟ ಆಹಾರದ ಬಗ್ಗೆ ವಾಗ್ವಾದದ ಬಗ್ಗೆ ನಡೆದಿರುವ ಜಗಳ ಎಂದು ಹೇಳಿದ್ದಾರೆ. ನಂತರ ಯುವಕ ಬಿಹಾರಕ್ಕೆ ಮರಳಿದ್ದಾನೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.


"ಈ ಫುಡ್ ಕೋರ್ಟ್ ನಲ್ಲಿ ಕೆಲಸ ಮಾಡುವ ಜನರು ಮತ್ತು ಕನ್ನಡವನ್ನು ಮಾತ್ರ ತಿಳಿದಿರುವ ಮತ್ತೊಂದು ಗುಂಪಿನ ನಡುವೆ ವಾಗ್ವಾದ ನಡೆದಿದೆ ಎಂದು ನಾವು ಕಂಡುಕೊಂಡಿದ್ದೇವೆ.


ಇದು ಕಿರುಕುಳದ ವಿಷಯವಾಗಿರಲಿಲ್ಲ. ಯುವಕ ತನ್ನ ಊರಿಗೆ ಮರಳಿರುವುದರಿಂದ, ನಾವು ಅವನಿಂದ ಹೆಚ್ಚಿನ ವಿವರಗಳನ್ನು ಇನ್ನೂ ಸಂಗ್ರಹಿಸುತ್ತಿದ್ದೇವೆ ಮತ್ತು ಇದಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು” ಅಂತ ಆಯುಕ್ತರು ಹೇಳಿದ್ದಾರೆ.


ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ತಿಳಿದ ಮಾಹಿತಿ ಏನು?


ಸುಬ್ರಮಣ್ಯನಗರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯುವಕ ಮತ್ತು ಕೆಲವರ ನಡುವೆ ಕೆಟ್ಟ ಆಹಾರ ಮತ್ತು ಹರಿದ ಕರೆನ್ಸಿ ನೋಟಿನ ಬಗ್ಗೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ. ಯಾದವ್ ಮತ್ತು ಬಂದ ಕೆಲವು ಮಹಿಳಾ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: Jagadish Shettar ರಾಜೀನಾಮೆ ಸಲ್ಲಿಕೆ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಡಿಕೆಶಿ ಅಚ್ಚರಿ ಹೇಳಿಕೆ


"ಈ ರೀತಿಯಾಗಿ ಬೇರೆ ರಾಜ್ಯದ ಜನರಿಗೆ ಯಾವುದಾದರೂ ತೊಂದರೆಯಾದಲ್ಲಿ 112 ಸಂಖ್ಯೆಗೆ ಡಯಲ್ ಮಾಡಲು ನಾನು ನಾಗರಿಕರನ್ನು ವಿನಂತಿಸುತ್ತೇನೆ. ನಮ್ಮ ಸಿಬ್ಬಂದಿಗಳು ಆ ಸ್ಥಳಕ್ಕೆ 30 ನಿಮಿಷಗಳಲ್ಲಿ ತಲುಪುತ್ತಾರೆ” ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಹೇಳಿದರು.

ಒಂದು ತಿಂಗಳ ಹಿಂದಷ್ಟೇ ತಮಿಳುನಾಡಿನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದನ್ನು ತೋರಿಸುವ 'ನಕಲಿ' ವಿಡಿಯೋ ಹೊರಬಂದಿತ್ತು.

top videos
  First published: