ಬಿಗ್​ಬಾಸ್​ ಸ್ಪರ್ಧಿ ಜಯಶ್ರೀಗೆ ಲೈಂಗಿಕ ಕಿರುಕುಳ; ಮಾವನ ವಿರುದ್ಧವೇ ಪೊಲೀಸರಿಗೆ ದೂರು

ಕನ್ನಡ ಬಿಗ್ ಬಾಸ್​ 3ನೇ ಸೀಸನ್ ಸ್ಪರ್ಧಿಯಾಗಿದ್ದ ಜಯಶ್ರೀ ನಟನೆ ಕಡೆಗೆ ಗಮನಹರಿಸಿದ್ದರು. ಖಾಸಗಿ ಕಂಪೆನಿಯಲ್ಲಿ ಹೆಚ್​ಆರ್ ಆಗಿದ್ದ ಅವರು ಕೊನೆಗೆ ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು.

Sushma Chakre | news18-kannada
Updated:September 11, 2019, 7:57 PM IST
ಬಿಗ್​ಬಾಸ್​ ಸ್ಪರ್ಧಿ ಜಯಶ್ರೀಗೆ ಲೈಂಗಿಕ ಕಿರುಕುಳ; ಮಾವನ ವಿರುದ್ಧವೇ ಪೊಲೀಸರಿಗೆ ದೂರು
ಜಯಶ್ರೀ ರಾಮಯ್ಯ
  • Share this:
ಬೆಂಗಳೂರು (ಸೆ. 11): ಬಿಗ್​ಬಾಸ್​ ರಿಯಾಲಿಟಿ ಶೋ 3ನೇ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದ ನಟಿ ಜಯಶ್ರೀ ರಾಮಯ್ಯ ತಮ್ಮ ಸೋದರ ಮಾವನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆಸ್ತಿ ವಿಚಾರವಾಗಿ ತಮಗೆ ಕಿರುಕುಳ ನೀಡುತ್ತಿದ್ದಾರೆ, ತನ್ನನ್ನು ಸೋದರ ಮಾವ ಮನೆಯಿಂದಲೇ ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೋದರಮಾವ ಗಿರೀಶ್ ತನಗೆ ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಜಯಶ್ರೀ. ಜಯಶ್ರೀಯನ್ನ ಮನೆಯಿಂದ ಹೊರ ಹಾಕಿದ ಸೋದರ ಮಾವ ಹಾಗೂ ಜಯಶ್ರೀ ನಡುವೆ ಕೆಲವು ವರ್ಷಗಳಿಂದ ಪ್ರಾಪರ್ಟಿ ವಿಚಾರವಾಗಿ ಮಾತುಕತೆ ನಡೆಯುತ್ತಿತ್ತು. ಹನುಮಂತನಗರದಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದ ಜಯಶ್ರೀ ಜೊತೆಗೆ ಇದೇ ವಿಚಾರವಾಗಿ ಮಾತನಾಡಲು ನಿನ್ನೆ ಗಿರೀಶ್​ ಮನೆಗೆ ತೆರಳಿದ್ದರು. ತಾಯಿಯೊಡನೆ ಮನೆಗೆ ಬಂದ ಜಯಶ್ರೀ ಜೊತೆ ಗಲಾಟೆ ಮಾಡಿದ ಗಿರೀಶ್ ನಡುರಾತ್ರಿ ಮನೆಯಿಂದ ಬೀದಿಗೆ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪೈಲ್ವಾನ್ ಪವರ್: ಮುಚ್ಚಿ ಹೋಗಿದ್ದ ಚಿತ್ರಮಂದಿರಗಳು ರೀ ಓಪನ್..!

ಬೀದಿಗೆ ತಳ್ಳಿದ್ದೂ ಅಲ್ಲದೆ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಾವ ಗಿರೀಶ್ ವಿರುದ್ಧ ಜಯಶ್ರೀ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಗಿರೀಶ್ ಹಾಗೂ ಜಯಶ್ರೀಗೆ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇಬ್ಬರ ವಿಚಾರಣೆ ಬಳಿಕ ಎಫ್ ಐ ಆರ್ ದಾಖಲಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಸದ್ಯಕ್ಕೆ ಅಶೋಕನಗರದಲ್ಲಿರುವ ಅಜ್ಜಿಯ ಮನೆಯಲ್ಲಿ ಜಯಶ್ರೀ ಆಶ್ರಯ ಪಡೆದಿದ್ದಾರೆ.

ನನ್ನ ಮಾವ ಸೈಕೋ: 

ಬಿಗ್ ಬಾಸ್​ ಸ್ಪರ್ಧಿಯಾಗಿದ್ದ ಜಯಶ್ರೀ ನಟನೆ ಕಡೆಗೆ ಗಮನಹರಿಸಿದ್ದರು. ಖಾಸಗಿ ಕಂಪೆನಿಯಲ್ಲಿ ಹೆಚ್​ಆರ್ ಆಗಿದ್ದ ಅವರು ಕೊನೆಗೆ ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ಮೇಲಾದ ಕಿರುಕುಳದ ಬಗ್ಗೆ ಹೇಳಿಕೊಂಡಿರುವ ಅವರು, ನನ್ನ ಮಾವ ನನ್ನ ಬಟ್ಟೆಯ ಬಗ್ಗೆಯೆಲ್ಲ ಮಾತನಾಡುತ್ತಿದ್ದರು. ನನ್ನ ಜೊತೆ ಸೈಕೋ ರೀತಿ ವರ್ತಿಸುತ್ತಿದ್ದರು. ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದರು. ಆತನ ಶೂ ತೆಗೆದು ಅನೇಕ ಬಾರಿ ನನ್ನ ಬಾಯಿಗೆ ಹಾಕಿದ್ದಾನೆ. ಆತನೊಬ್ಬ ದೊಡ್ಡ ಹುಚ್ಚ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಾಂಕಾ ಚೋಪ್ರಾ!ಆರೋಪ ತಳ್ಳಿ ಹಾಕಿದ ಗಿರೀಶ್:

ನಟಿ ಜಯಶ್ರೀಗೆ ಕಿರುಕುಳ ನೀಡಿರುವ ಆರೋಪವನ್ನು ತಳ್ಳಿಹಾಕಿರುವ ಮಾವ ಗಿರೀಶ್, ಆಕೆಗೆ ಸ್ವಾತಂತ್ರ ನೀಡುತ್ತಿಲ್ಲ ಎಂದು ಈ ಆರೋಪ ಮಾಡಿದ್ದಾಳೆ. ಸುಮಾರು ದಿನಗಳಿಂದ ನಮ್ಮ ಮನೆಯಲ್ಲೇ ಇದ್ದ ಜಯಶ್ರೀ ಯಾವಾಗ ಅಂದ್ರೆ ಅವಾಗ ಹೊರಗಡೆ ಹೋಗುತ್ತಿದ್ದಳು. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದಾಳೆ. ಜಯಶ್ರೀಗೆ ಕೊಡಬೇಕಾದ ಆಸ್ತಿ ಎಲ್ಲ ಕೊಟ್ಟಿದ್ದೇವೆ. ಆಕೆ ಬಿಗ್​ಬಾಸ್​ಗೆ ಹೋಗುವಾಗಲೂ ನಾನೇ ಸಹಾಯ ಮಾಡಿದ್ದೆ. ನಮ್ಮ ನಡುವೆ ಆಸ್ತಿ ವಿಚಾರಕ್ಕೆ ಯಾವುದೇ ಜಗಳ-ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

(ವರದಿ: ಮಂಜು ಆರ್ಯ)

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ