ಯಾದಗಿರಿ ರೈತನ ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಿಸ್ಟ್; ಮೊದಲ ಹೆಂಡತಿ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಪತಿರಾಯ!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಳ್ಳಿ ಗ್ರಾಮದ ನಿಂಗಪ್ಪ ಯಾದವ್  ಫೆ. 2ರಂದು ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು. ಆದರೆ, ಆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಯಾದಗಿರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ನಿಂಗಪ್ಪ

ಯಾದಗಿರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ನಿಂಗಪ್ಪ

  • Share this:
ಯಾದಗಿರಿ (ಫೆ.3 ): ಯಾದಗಿರಿಯಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದ ರೈತನ‌ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ತನ್ನ ಪತಿರಾಯ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೊದಲನೇ ಪತ್ನಿ ಹಣಮಂತಿ ಪೊಲೀಸರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದಳು. ಆದರೆ, ಆಕೆಯ ಪತಿರಾಯ ಆತ್ಮಹತ್ಯೆಗೂ ಮುನ್ನ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಆತ್ಮಹತ್ಯೆಗೆ ಮೊದಲನೇ ಪತ್ನಿ ಹಾಗೂ ಆಕೆಯ ಕುಟುಂಬಸ್ಥರೇ ಕಾರಣವೆಂದು ನೋವು ತೋಡಿಕೊಂಡಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಳ್ಳಿ ಗ್ರಾಮದ ನಿಂಗಪ್ಪ ಯಾದವ್  ಫೆ. 2ರಂದು ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆರಂಭದಲ್ಲಿ  ಆತ್ಮಹತ್ಯೆ ಯಾಕೆ ಮಾಡಿಕೊಂಡ ಎಂಬುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಮೊದಲನೇ ಪತ್ನಿ ಹಣಮಂತಿ ಸಾಲಬಾಧೆಯಿಂದ ತನ್ನ ಪತಿರಾಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರಿಗೆ ದಾರಿ ತಪ್ಪಿಸಿದಳು. ಪೊಲೀಸರು ಕೂಡ ಸಾಲ ತೀರಿಸಲಾಗದೆ ಆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಅಸಲಿ ವಿಷಯವೇ ಬೇರೆ ಇತ್ತು.

ಇದನ್ನೂ ಓದಿ: Chikmagalur: ಚಿಕ್ಕಮಗಳೂರಿನಲ್ಲಿ ದಟ್ಟಕಾಡಿನ ಮಧ್ಯೆ ಕಲ್ಲಿನ ಮೇಲಿಂದ ಧುಮ್ಮಿಕ್ಕುತ್ತಿರೋ ಸಂತೋಷ್ ಜಲಪಾತ

ಆತ್ಮಹತ್ಯೆ ಮಾಡಿಕೊಂಡ ನಿಂಗಪ್ಪ ಹಾಗೂ ಆತನ ಮೊದಲನೇ ಪತ್ನಿ ಹಣಮಂತಿ ನಡುವೆ ಆಸ್ತಿ ಹಾಗೂ ಹಣಕಾಸಿನ ವಿಚಾರದಲ್ಲಿ ಜಗಳ ನಡೆಯುತಿತ್ತು. ಈ ವೇಳೆ ಹಲವಾರು ಬಾರಿ ಮೊದಲನೇ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ನಿಂಗಪ್ಪನ ಮೇಲೆ ಹಲ್ಲೆ ನಡೆಸಿದ್ದರಂತೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ನಿಂಗಪ್ಪ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ‌ ನೋವು ತೋಡಿಕೊಂಡಿದ್ದಾನೆ. ಆತ ನೋವು ತೋಡಿಕೊಂಡ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳುತ್ತಿದ್ದ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.

ನಿಂಗಪ್ಪನ ಎರಡನೇ ಹೆಂಡತಿ ರೇಣುಕಾ ಈಗ ಮೊದಲನೇ ಪತ್ನಿ ಹಣಮಂತಿ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ. ಎರಡು ‌ಎಕರೆ ಜಮೀನಿನ ಭಾಗ‌ ಕೇಳಿದಕ್ಕೆ ಕಿರುಕುಳ ‌ನೀಡಿದ್ದು, ಅದರಿಂದಲೇ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಕೂಡ ಎಲ್ಲಾ ಆಯಾಮದಲ್ಲಿ‌ ತನಿಖೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಸುರಪುರ ಪೊಲೀಸ್ ಠಾಣೆ ಪೊಲೀಸರಿಗೆ ಮೊದಲನೇ ಹೆಂಡತಿ ದಾರಿ ತಪ್ಪಿಸಿದಳು. ಆದರೆ, ಎರಡನೇ ಹೆಂಡತಿ ರೇಣುಕಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತಿರಾಯ ನಿಂಗಪ್ಪ ತನ್ನ ಸಾವು ಸಾಲಬಾಧೆ ಅಲ್ಲ. ಅದಕ್ಕೆ ಮೊದಲನೇ ಹೆಂಡತಿ ಹಣಮಂತಿ ಕಾರಣ ಎಂಬ ವಿಡಿಯೋ ಹರಿಯಬಿಟ್ಟಿದ್ದಾಳೆ.

ತನ್ನ ಪತಿರಾಯನ ಆತ್ಮಹತ್ಯೆಗೆ ಕಾರಣವಾದ ಮೊದಲನೇ ಪತ್ನಿ ಹಣಮಂತಿ ನಾಟಕವಾಡಿ ಈಗ ಸಿಕ್ಕಿ ಹಾಕಿಕೊಂಡಿದ್ದಾಳೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ನಿಂಗಪ್ಪ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿತ್ತು. ಆದರೆ, ಆತ್ಮಹತ್ಯೆಗೆ ಆತನ ಮೊದಲನೇ ಪತ್ನಿ ಹಾಗೂ  ಅವರ ಕುಟುಂಬಸ್ಥರು ಕಾರಣವೆಂದು ಗೊತ್ತಾಗಿದೆ ಎಂದಿದ್ದಾರೆ.
Published by:Sushma Chakre
First published: