Shivamogga: ಚಾಕು ಇರಿತ ಕೇಸ್​ಗೆ ಟ್ವಿಸ್ಟ್: ಪ್ರೇಮ್ ​ಸಿಂಗ್​ಗೂ ಮೊದಲೇ ಸದ್ದಾಂ ಎಂಬಾತನ ಮೇಲೆ ಹಲ್ಲೆ

ಶಿವಮೊಗ್ಗ ಗಲಾಟೆ ವಿಚಾರದಲ್ಲಿ ನಾಲ್ಕು ಎಫ್​ಐಆರ್ ದಾಖಲಾಗಿವೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 4ನೇ ಎಫ್‌ಐಆರ್ ದಾಖಲಾಗಿದೆ. ನಾಲ್ವರ ವಿರುದ್ಧ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಗಸ್ಟ್ 15ರಂದು ನಡೆದ ಗಲಾಟೆ ಬಳಿಕ ಶಿವಮೊಗ್ಗ ನಗರ (Shivamogga) ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಇಂದಿನಿಂದ ಶಾಲಾ-ಕಾಲೇಜುಗಳು (School And Collages) ಆರಂಭಗೊಂಡಿವೆ. ಈ ನಡುವೆ ಸೆಕ್ಷನ್ 144 (Section 144) ಮುಂದುವರಿದಿದೆ. ಪ್ರತೀಕಾರಕ್ಕಾಗಿ ಪ್ರೇಮ್‌ಸಿಂಗ್ ಮೇಲೆ ಹಲ್ಲೆ (Assault) ನಡೆದಿದೆಯಾ ಅನ್ನೋ ಅನುಮಾನಗಳು ವ್ಯಕ್ತವಾಗಿವೆ. ಶಿವಮೊಗ್ಗ ನಗರದಲ್ಲಿ ಪ್ರೇಮ್​ಸಿಂಗ್​ ಹಲ್ಲೆಗೂ ಮೊದಲೇ ಲಾಠಿಚಾರ್ಜ್ ವೇಳೆ ಸದ್ದಾಂ ಹುಸೇನ್ ಜಮಖಂಡಿ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಸದ್ದಾಂ ಹುಸೇನ್ ಜಮಖಂಡಿ ಮೇಲೆ ಕಲ್ಲು ಎತ್ತಿಹಾಕಿ ಕೊಲ್ಲಲ್ಲು ಪ್ರಯತ್ನಿಸಲಾಗಿತ್ತು. ಈ ಸಂಬಂಧ ಉಪ್ಪಾರಕೇರಿ ಕ್ರಾಸ್​ನಲ್ಲಿ ಸದ್ದಾಂ ಹುಸೇನ್ ಜಮಖಂಡಿ ನೀಡಿದ ದೂರಿನನ್ವಯ ದೊಡ್ಡಪೇಟೆ ಠಾಣೆಯಲ್ಲಿ ಎಫ್​ಐಆರ್ (FIR) ದಾಖಲಾಗಿದೆ.

ಸದ್ದಾಂ ಹುಸೇನ್​ ತಲೆ, ಕತ್ತು, ಮುಖದ ಭಾಗಕ್ಕೆ 20 ಜನರಿಂದ ಹಲ್ಲೆ  ನಡೆದಿದೆ. ಈ ವೇಳೆ ಬೈಕ್ ಅಲ್ಲೇ ಬಿಟ್ಟು ಸದ್ದಾಂ ತಪ್ಪಿಸಿಕೊಂಡು ಬಂದಿದ್ದನು.

ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನ?

ಇನ್ನು ಈ ಕುರಿತು ನ್ಯೂಸ್ 18 ಜೊತೆ ಮಾತನಾಡಿರುವ ಸದ್ದಾಂ ಹುಸೇನ್, ನಾನು ಮೆಟಲ್ ಸ್ಟೋರ್​ನಲ್ಲಿ ಕೆಲಸ ಮಾಡುತ್ತಿದ್ದೆ. ಅಂಗಡಿ ಬಾಗಿಲು ಹಾಕಿಕೊಂಡು ಬರುತ್ತಿದ್ದ ವೇಳೆ ಸುಮಾರು 20 ಜನರು ಬೈಕ್ ಅಡ್ಡಗಟ್ಟಿದ್ದರು. ನಿನ್ನ ಹೆಸರು ಏನು ಅಂತ ಕೇಳಿದಾಗ ಸದ್ದಾಂ ಅಂತ ಹೇಳಿದೆ. ತಲೆ, ಕತ್ತು, ಮುಖದ ಭಾಗದ ಮೇಲೆ ಹಲ್ಲೆ ನಡೆಸಲಾಯ್ತು. ನಂತ್ರ ಕಲ್ಲು ಎತ್ತಿಹಾಕಿ ಸಾಯಿಸಲು ಯತ್ನಿಸಿದರು ಎಂದು ಸದ್ದಾಂ ಆರೋಪಿಸಿದ್ದಾರೆ. ಸದ್ಯ ಸದ್ದಾಂ ಹುಸೇನ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿದ್ದಾರೆ.

ಇದನ್ನೂ ಓದಿ:  Shivamogga: ಸಹಜ ಸ್ಥಿತಿಯತ್ತ ಶಿವಮೊಗ್ಗ, ಭದ್ರಾವತಿಯಲ್ಲಿ ಕಾರ್​ಗೆ ಬೆಂಕಿ; ಜಬೀವುಲ್ಲಾ ಪತ್ನಿ ಹೇಳಿಕೆ

ಸದ್ದಾಂ ತಾಯಿ ಕಣ್ಣೀರು

ಇನ್ನು ಸದ್ದಾಂ ಹುಸೇನ್​ ತಾಯಿ ಬಿಬೇಷಾ ನ್ಯೂಸ್ ​18ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಗಂಡನನ್ನು ಕೊಲೆ ಮಾಡಿದ್ರು. ಕಾರವಾರದಲ್ಲಿ ಚೀಟಿ ವ್ಯವಹಾರ ಮಾಡ್ತಾ ಇದ್ರು, ಹಣ ಕೊಡ್ತೀವಿ ಅಂತಾ ಕರೆಸಿ ಕೊಲೆ ಮಾಡಿದ್ರು. ಅಲ್ಲಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಳ್ತಿದ್ದೇವೆ. ನಮಗೆ ಇಲ್ಲಿ ಯಾರೂ ಇಲ್ಲ, ಈಗ ಚಿಕಿತ್ಸೆಗೂ ಪರದಾಡುವಂತೆ ಆಗಿದೆ ಅಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಾಲ್ವರ ವಿರುದ್ಧ  ಎಫ್​ಐಆರ್

ಶಿವಮೊಗ್ಗ ಗಲಾಟೆ ವಿಚಾರದಲ್ಲಿ ನಾಲ್ಕು ಎಫ್​ಐಆರ್ ದಾಖಲಾಗಿವೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 4ನೇ ಎಫ್‌ಐಆರ್ ದಾಖಲಾಗಿದೆ. ನಾಲ್ವರ ವಿರುದ್ಧ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿದೆ.

ಭದ್ರಾವತಿಯಲ್ಲಿ ಕಾರಿಗೆ ಬೆಂಕಿ

ವೈಯಕ್ತಿಕ ಹಳೆ ದ್ವೇಷ ಹಿನ್ನೆಲೆ ಮನೆಯ ಮುಂದೆ ನಿಲ್ಲಿಸಿದ್ದ ಕಾರ್​ಗೆ ಬೆಂಕಿ ಹಾಕಿರುವ ಘಟನೆ ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್​ನಲ್ಲಿ ನಡೆದಿದೆ. ಅಬ್ದುಲ್ ಬಷೀರ್ ಎಂಬವರಿಗೆ ಸೇರಿದ ಕಾರ್ ಬೆಂಕಿಗಾಹುತಿಯಾಗಿದೆ. ಅಲಿಂ ಪಾಷಾ ಎಂಬಾತ ಕಾರಿಗೆ ಬೆಂಕಿ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಶಿವಮೊಗ್ಗ


ಅಬ್ದುಲ್ ಬಷೀರ್ ಮನೆ ಮುಂದೆ ಕಾರ್ ನಿಲ್ಲಿಸಿದ್ದರು. ರಾತ್ರಿ ಸುಮಾರು 1 ಗಂಟೆಗೆ ಕಾರ್​ಗೆ ಬೆಂಕಿ ಹಾಕಲಾಗಿದೆ. ಕಾರಿನ ಸೈರನ್ ಕೂಗಿದ್ದರಿಂದ ಅಬ್ದುಲ್ ಬಶೀರ್ ಮನೆಯಿಂದ ಹೊರ ಬರುತ್ತಿದ್ದಂತೆ ಆರೋಪಿ ಕಾಲ್ಕಿತ್ತಿದ್ದಾನೆ. ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  Taj Bawadi: ವಿಜಯಪುರದಲ್ಲಿ ಮತ್ತೆ ಮುನ್ನೆಲೆಗೆ ಬಂದ ತಾಜ್ ಬಾವಡಿ; ಏನಿದು ಸಂಘರ್ಷ?

ಬಿಗಿ ಪೊಲೀಸ್ ಬಂದೋಬಸ್ತ್

ಶಿವಮೊಗ್ಗ ಮತ್ತು ಭದ್ರಾವತಿ (Shivamogga And Bhadravati) ಅವಳಿ ನಗರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ (Police) ಬಂದೋಬಸ್ತ್ ಮಾಡಲಾಗಿದೆ.
Published by:Mahmadrafik K
First published: