ರಮೇಶ್ ಆತ್ಮಹತ್ಯೆಗೆ ಹೊಸ ತಿರುವು; ಪರಮೇಶ್ವರ್ ಪಿಎ ಮನೆ ತಪಾಸಣೆ ಮಾಡಿದ್ದರೂ ಮನೆಗೆ ಹೋಗಿಯೇ ಇಲ್ಲ ಐಟಿ ಇಲಾಖೆ ಹೇಳಿದ್ದು ಏಕೆ?

ಮಾಜಿ ಡಿಸಿಎಂ ಜಿ.ಪರಮೇಶ್ವರ್ ಪಿಎ ರಮೇಶ್ ಇಂದು ಬೆಳಗ್ಗೆ 9:06ಕ್ಕೆ ಎಂದಿನಂತೆ ಮನೆಯಿಂದ ಹೊರಟಿದ್ದರು. ಮನೆಯಿಂದ ಹೊರಡುವಾಗ ರಮೇಶ್ ಮನೆಯವರಿಗೆ ಟಾಟಾ ಮಾಡಿ ಹೊರಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

HR Ramesh | news18-kannada
Updated:October 12, 2019, 7:26 PM IST
HR Ramesh | news18-kannada
Updated: October 12, 2019, 7:26 PM IST
ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಆತ್ಮಹತ್ಯೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಐಟಿ ಅಧಿಕಾರಿಗಳ ಕಿರುಕುಳಕ್ಕೆ ಹೆದರಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಕಾಂಗ್ರೆಸ್​ ನಾಯಕರು ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಐಟಿ ಇಲಾಖೆ, ನಮ್ಮ ತಂಡ ರಮೇಶ್​ ಅವರ ಮನೆಯನ್ನು ತಪಾಸಣೆ ಮಾಡಿಯೇ ಇಲ್ಲ ಹಾಗೂ ಅವರಿಂದ ಯಾವುದೇ ಹೇಳಿಕೆಯನ್ನೂ ಪಡೆದಿಲ್ಲ ಎಂದು ಹೇಳಿಕೆ ನೀಡಿತ್ತು. ಆದರೆ, ರಮೇಶ್ ಮನೆಗೆ ಐಟಿ ಅಧಿಕಾರಿಗಳು ತೆರಳಿ, ಪರಿಶೀಲನೆ ನಡೆಸಿದ್ದರು ಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷಿಯಾಗಿವೆ. ಐಟಿ ಅಧಿಕಾರಿಗಳು ರಮೇಶ್ ಮನೆಗೆ ಬಂದಿದ್ದ ದೃಶ್ಯಾವಳಿಗಳು ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿವೆ. ರಮೇಶ್ ಮನೆಗೆ ಐಟಿ ಅಧಿಕಾರಿಗಳು ತೆರಳಿ ತಪಾಸಣೆ ನಡೆಸಿದ್ದರೂ, ನಾವು ರಮೇಶ್ ಮನೆಗೆ ಹೋಗಿಯೇ ಇಲ್ಲ ಎಂದು ಐಟಿ ಇಲಾಖೆ ಸ್ಪಷ್ಟನೆ ನೀಡಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅಕ್ಟೋಬರ್ 10ರಂದು ರಮೇಶ್​ ಆರು ಮಂದಿ ಐಟಿ ಅಧಿಕಾರಿಗಳೊಂದಿಗೆ ಮಧ್ಯಾಹ್ನ 1.15ರ ಸಮಯದಲ್ಲಿ  ಜ್ಞಾನಭಾರತಿ ಲೇಔಟ್​ನಲ್ಲಿರುವ ಮನೆಗೆ ಬಂದಿದ್ದರು. ಎರಡು ಇನ್ನೋವಾ ಕಾರುಗಳಲ್ಲಿ ಬಂದಿದ್ದ ಅಧಿಕಾರಿಗಳು ರಮೇಶ್ ಅವರನ್ನು ಸತತ ಐದು ಗಂಟೆಗಳ ಕಾಲ ಮನೆಯಲ್ಲಿಯೇ ವಿಚಾರಣೆ ನಡೆಸಿದ್ದರು. ಐವರು ಪುರುಷ ಹಾಗೂ ಓರ್ವ ಮಹಿಳೆ ಸೇರಿ ಒಟ್ಟು ಆರು ಮಂದಿ ಅಧಿಕಾರಿಗಳು ಆ ತಂಡದಲ್ಲಿದ್ದರು. ಆನಂತರ ಸಂಜೆ 6:10 ಗಂಟೆಗೆ ರಮೇಶ್ ಐಟಿ ಅಧಿಕಾರಿಗಳೊಂದಿಗೆ ತೆರಳಿದರು. ರಮೇಶ್ ಒಬ್ಬ ಒಳ್ಳೆಯ ವ್ಯಕ್ತಿ. ಏಳು ತಿಂಗಳ ಹಿಂದೆ ನಮ್ಮ ಮನೆಗೆ ಬೋಗ್ಯಕ್ಕೆ ನೀಡಿದ್ದೆವು. ಇಂದು ಟಿವಿ ನೋಡಿದಾಗಲೇ ರಮೇಶ್ ಜಿ.ಪರಮೇಶ್ವರ್ ಪಿಎ ಎಂದು ಗೊತ್ತಾಗಿದ್ದು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಮನೆ ಮಾಲೀಕ ದಾಮೋದರ್ ಹೇಳಿದ್ದಾರೆ.

ಆದರೆ, ಐಟಿ ಇಲಾಖೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್​ 131, 132ರ ಅಡಿಯಲ್ಲಿ ಯಾವುದೇ ನಾವು ರಮೇಶ್ ಅವರಿಂದ ಯಾವುದೇ ಹೇಳಿಕೆಯನ್ನು ಪಡೆದಿಲ್ಲ. ಪರಮೇಶ್ವರ್ ಮನೆ ಪರಿಶೀಲನೆ ಮಾಡುವಾಗ ರಮೇಶ್ ಅಲ್ಲಿದ್ದರು. ಸಂಪೂರ್ಣ ತಪಾಸಣೆಯ ವೇಳೆ ಅವರು ಅಲ್ಲಿಯೇ ಇದ್ದರು. ಆ ವೇಳೆ ಪಂಚನಾಮೆಗೆ ಹೇಳಿಕೆ ಪಡೆದುಕೊಂಡಿದ್ದೆವೆ. ನಮ್ಮ ತಂಡ ಅ.10ರಂದು ಪರಮೇಶ್ವರ್ ಮನೆಯಲ್ಲಿ ತಪಾಸಣೆಗೆ ಹೋಗಿತ್ತು. ಆದರೆ ಆ ವೇಳೆ ಪರಮೇಶ್ವರ್ ಪತ್ನಿ ಅವರು ಮನೆಯಲ್ಲಿ ಇಲ್ಲ ಅಂದಿದ್ದರು. ಅವರು ಕೊರಟಗೆರೆಯ ಒಂದು ಕಾರ್ಯಕ್ರಮಕ್ಕೆ ತೆರಳಿದ್ದರು. ನಮ್ಮ ತಂಡ ಅಲ್ಲಿಗೆ ಹೋಗಿ ಅವರಿಗೆ ಎಸ್ಕಾರ್ಟ್ ನೀಡಿ, ಸುರಕ್ಷಿತವಾಗಿ ಕರೆತಂದಿತ್ತು. ಈ ವೇಳೆ ರಮೇಶ್ ಸಹ ಪರಮೇಶ್ವರ್ ಜೊತೆ ಹೋಗಿದ್ದರು. ಪರಮೇಶ್ವರ್ ಅವರನ್ನು ಕರೆತಂದಾಗ ಅವರ ಜೊತೆ ರಮೇಶ್ ಕೂಡ ಬಂದಿದ್ದರು. ಪರಮೇಶ್ವರ್ ಮನೆಯಲ್ಲಿ ಅ. 12ರ ರಾತ್ರಿ 2:45 ರ ಬೆಳಗಿನ ಜಾವದ ತನಕ ತಪಾಸಣೆ ನಡೆಸಿದ್ದೆವು. ಅಲ್ಲಿಯತನಕವೂ ರಮೇಶ್ ಅವರ ಮನೆಯಲ್ಲಿಯೇ ಇದ್ದರು ಎಂದು ಐಟಿ ಇಲಾಖೆ ರಮೇಶ್​ ಆತ್ಮಹತ್ಯೆಯ ಬಗ್ಗೆ ನೀಡಿರುವ ಸ್ಪಷ್ಟನೆ ನೀಡಿದೆ. ಆದರೆ, ಐಟಿ ಅಧಿಕಾರಿಗಳು ಅ.10ರಂದು ಎರಡು ಕಾರುಗಳಲ್ಲಿ ರಮೇಶ್ ಮನೆಗೆ ಬಂದಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನು ಓದಿ: ಪರಮೇಶ್ವರ್ ಆಪ್ತ ಸಹಾಯಕ ರಮೇಶ್​ ಆತ್ಮಹತ್ಯೆ ಸಂಬಂಧ ಆದಾಯ ತೆರಿಗೆ ಇಲಾಖೆ ನೀಡಿದ ಸ್ಪಷ್ಟನೆ ಏನು?

ಬೆಳಗ್ಗೆ ಮನೆಯವರಿಗೆ ಟಾಟಾ ಮಾಡಿ ಹೋಗಿದ್ದ ರಮೇಶ್

ಮಾಜಿ ಡಿಸಿಎಂ ಜಿ.ಪರಮೇಶ್ವರ್ ಪಿಎ ರಮೇಶ್ ಇಂದು ಬೆಳಗ್ಗೆ 9:06ಕ್ಕೆ ಎಂದಿನಂತೆ ಮನೆಯಿಂದ ಹೊರಟಿದ್ದರು. ಮನೆಯಿಂದ ಹೊರಡುವಾಗ ರಮೇಶ್ ಮನೆಯವರಿಗೆ ಟಾಟಾ ಮಾಡಿ ಹೊರಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Loading...

ವಿಶೇಷ ವರದಿ: ಎಸ್.ಶ್ಯಾಮ್

First published:October 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...