ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ (Byadarahalli, Bengaluru) ವ್ಯಾಪ್ತಿಯಲ್ಲಿ ಒಂದು ಕಿಡ್ನ್ಯಾಪ್ ಕೇಸ್(Kidnap Case) ದಾಖಲಾಗಿತ್ತು. ವಧುವಿನ ತಂದೆ (Bride Father) ಹಾಗೂ ಇಪ್ಪತ್ತು ಜನ ಸಹಚರರಿಂದ ಕಿಡ್ನ್ಯಾಪ್ ಆಗಿದ್ದ ಯುವತಿಯ ಪ್ರಕರಣದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಿಡ್ನ್ಯಾಪ್ ಆಗಿದ್ದ ವಧು ಉಲ್ಟಾ ಹೊಡೆದು ಹುಡುಗನ (Groom) ಮೇಲೆ ದೂರು ನೀಡಲು ಮುಂದಾಗಿದ್ದಾಳೆ. ತಂದೆಯಿಂದಲೇ ಕಿಡ್ನ್ಯಾಪ್ ಆಗಿದ್ದಾಳೆ ಎನ್ನಲಾದ ಪ್ರಕರಣದಲ್ಲಿ ಅಪಹರಣ ಆಗಿದ್ದರು ಎನ್ನಲಾದ ವಧು ಜಲಜಾ ಆತ ಮದುವೆಯಾಗಿದ್ದ ಗಂಗಾಧರ್ ಮೇಲೆ ಉಲ್ಟಾ ಹೊಡೆದಿದ್ದಾಳೆ.
ಗಂಗಾಧರ್ ನನಗೆ ಮೋಸ ಮಾಡಿದ್ದಾನೆ ಎಂದು ಇಂದು ಡಾಬಸ್ಪೇಟೆ ಠಾಣೆಯಲ್ಲಿ ದೂರು ದಾಖಲಿಸಲು ತನ್ನ ಪೋಷಕರ ಜೊತೆ ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಬೆದರಿಕೆ ಹಾಕಿ ಮದುವೆಯಾದ!
ಗಂಗಾಧರ್ ನನ್ನನ್ನು ಬೆದರಿಸಿ ಕರೆದುಕೊಂಡು ಹೋಗಿದ್ದು, ನನ್ನ ತಂದೆಯನ್ನ ಕೊಲ್ಲುವದಾಗಿ ಹೇಳಿ ನನ್ನನ್ನ ಬಲವಂತದಿಂದ ಮದುವೆಯಾಗಿದ್ದಾನೆ. ಆದ್ರೆ ಆತ ಬೇರೆ ಇನ್ಯಾರದ್ದೋ ಜೊತೆ ಅಫೇರ್ ಇಟ್ಕೊಂಡಿದ್ದಾನೆ. ಅದಕ್ಕೆ ನಾನು ನಮ್ಮಪ್ಪನ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದ., ಅಪ್ಪ ಮನೆ ಹತ್ತಿರ ಬಂದಿದ್ರು ನಾನು ಅಪ್ಪನ ಜೊತೆ ಬಂದೆ ನನ್ನ ಯಾರು ಕಿಡ್ನ್ಯಾಪ್ ಮಾಡಿಲ್ಲ ಎಂದು ಹೇಳಿದ್ದಾಳೆ.
ಇದನ್ನೂ ಓದಿ: Yadagiri: ಬದನೆಕಾಯಿ ಕಳ್ಳತನ; ಮೂವರು ಜೀವದ ಗೆಳೆಯರಲ್ಲಿ ಒಬ್ಬನ ಕೊಲೆ, ಇಬ್ಬರು ಜೈಲು ಪಾಲು
ಯುವತಿ ತಂದೆಯ ದ್ವಂದ್ವ ಹೇಳಿಕೆಗಳು
ಹುಡುಗಿ ನೋಡಿದ್ರೆ ನಮ್ಮಪ್ಪ ಬಂದು ಕರ್ಕೊಂಡು ಹೋದ್ರು ಅಂತಾರೆ. ಆದ್ರೆ ಇಲ್ಲಿ ನಿನ್ನೆ ಈಕೆ ತಂದೆ ದೇವರಾಜು ಹೇಳಿದ್ದು ನಾನು ಆಸ್ಪತ್ರೆ ಬೆಡ್ ಬಿಟ್ಟು ಆಚೇನೆ ಹೋಗಿಲ್ಲ ಅಂತಾ. ಇವತ್ತು ನೋಡಿದ್ರೆ ಆಸ್ಪತ್ರೆ ಹತ್ತಿರ ವಾಕ್ ಮಾಡೋ ಟೈಂ ನಲ್ಲಿ ನಿನ್ನ ಮಗಳು ಸಿಕ್ಕಿದ್ದಾಳೆ ಅಂತಾ ನನ್ನ ಸ್ನೇಹಿತರು ಕಾಲ್ ಮಾಡಿದರು. ಅದಕ್ಕೆ ನಾನು ಅಂದ್ರಹಳ್ಳಿ ಗೇಟ್ಗೆ ಹೋಗಿದ್ದೆ. ನಾನು ಮನೆ ಹತ್ರ ಹೋಗಿರ್ಲಿಲ್ಲ ಅಂತಾ ಡಬಲ್ ಸ್ಟೇಟ್ಮೆಂಟ್ ಕೊಡ್ತಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಸುಳ್ಳು ಆರೋಪ ಬೇಡ ಅಂತ ಗಂಗಾಧರ್ ಕಣ್ಣೀರು
ಈ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ವರ ಗಂಗಾಧರ್ ಮಾತನಾಡಿ, ಜಲಜಾ ಮಾಡ್ತಾ ಇರೋ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು. ಆಕೆ ನನ್ನೆದುರು ಬಂದು ನೀನು ಇಷ್ಟ ಅಂದ್ರೆ ಸುಖವಾಗಿರು ಎಂದು ಸುಮ್ಮನಾಗ್ತೀನಿ. ಆದ್ರೆ ಆಕೆ ಬಂದು ನನ್ನ ಮುಂದೆ ಮಾತಾಡಬೇಕು. ಅದು ಬಿಟ್ಟು ಸುಖಾ ಸುಮ್ಮನೆ ಆರೋಪ ಮಾಡಬಾರದು. ಇದೆಲ್ಲಾ ಅವಳ ಸ್ವ ಹೇಳಿಕೆಗಳಲ್ಲ ಅವರ ಕುಟುಂಬಸ್ಥರು ಬಲವಂತದಿಂದ ಹೇಳಿಸುತ್ತಿದ್ದಾರೆ ಎಂದು ಗಂಗಾಧರ್ ಕಣ್ಣೀರು ಹಾಕುತ್ತಾರೆ.
ಮೇ 25ರಂದು ದೇವಸ್ಥಾನದಲ್ಲಿ ಇಬ್ಬರ ಮದುವೆ
ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳಾದ ಗಂಗಾಧರ್ ಹಾಗೂ ಜಲಜಾ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಗಂಗಾಧರ್ ಸೋದರಿ ಮನೆಯಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಮೇ 25 ರಂದು ತುಮಕೂರಿನ ರಂಗನಾಥಸವಾಮಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ, 30ನೇ ತಾರೀಕು ವಿವಾಹ ನೋಂದಣಿ ಸಹ ಮಾಡಿಸಿಕೊಂಡಿದ್ದರು. ತದನಂತರ ಎಸ್ ಪಿ ಅವರ ಬಳಿ ತೆರಳಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಯುವಕ ಗಂಗಾಧರ್, ಸೋದರ ಸಾಕಮ್ಮ ಮತ್ತು ಸಾಕಮ್ಮಳ ಪತಿಯ ಮೇಲೆ ಹಲ್ಲೆ ನಡೆಸಿ ವಧು ಜಲಜಾಳನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂದು ಮೊದಲು ಹೇಳಲಾಗಿತ್ತು.
ಇದನ್ನೂ ಓದಿ: Dead Body: ಮಾಜಿ ಶಾಸಕರು ಬಾಡೂಟ ಹಾಕಿಸಿದ್ದ ಸ್ಥಳದಲ್ಲಿ ಡೆಡ್ ಬಾಡಿ! ಪೆಂಡಾಲ್ ಒಳಗೆ ಸತ್ತು ಮಲಗಿದ್ದವ ಯಾರು?
ಆಕೆ ವಿಷ ಕುಡಿಯೋದಾಗಿ ಹೇಳಿದ್ದಳು
ಅಂದು ಮಾಧ್ಯಮಗಳ ಜೊತೆ ಮಾತನಾಡಿದ್ದ ಗಂಗಾಧರ್, ಜಲಜಾ ನನಗೆ ಸೋದರಮಾವನ ಮಗಳು. ಎರಡು ವರ್ಷಗಳಿಂದ ಪ್ರೀತಿ ಮಾಡಿದ್ದೇವು. ಆದ್ರೆ ಆಕೆಗೆ ಮನೆಯಲ್ಲಿ ಬೇರೆ ಕಡೆ ವರ ನೋಡುತ್ತಿದ್ದಾಗ ನಾನೇ ದೂರವಾಗಿದ್ದೆ. ಆದರೆ ಜಲಜಾ ನಾನು ಮದುವೆ ಆಗದೇ ಇದ್ದರೆ ವಿಷ ಕುಡೀತಿನಿ ಎಂದು ಹೇಳಿದ್ದರಿಂದ ಮದುವೆಯಾದೆ ಎಂದು ಗಂಗಾಧರ್ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ