ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ನಟಿ ತಾಯಿಯ (Actress Mother) ಮಸಾಜ್ ಪಾರ್ಲರ್ಗೆ (Massage Parlor) ನುಗ್ಗಿ ಹಣ ಪಡೆದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ನಟಿ ತಾಯಿ ನನ್ನ ಮಸಾಜ್ ಪಾರ್ಲರ್ಗೆ ನುಗ್ಗಿದ ವ್ಯಕ್ತಿ ತಾನೋರ್ವ ಪೊಲೀಸ್ ಅಧಿಕಾರಿ ಎಂದು ಹೇಳಿ 38 ಸಾವಿರ ರೂಪಾಯಿ ಹಣ (Money) ಕಿತ್ತುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದೀಗ ಆರೋಪಿ ಓರ್ವ ಮಾಜಿ ಹೋಂಗಾರ್ಡ್ ಅನ್ನೋದು ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ ಮಾಜಿ ಹೋಂ ಗಾರ್ಡ್ ಪೊಲೀಸರ ಮುಂದೆ ಚಿನ್ನದ ಸರವೊಂದರ ಕಥೆ (Gold Chain Story) ಹೇಳಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡೂ ಆಯಾಮಾಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಮಂಗಳೂರಿನ ನಟಿಯ ತಾಯಿ ನಗರದಲ್ಲಿ ಎರಡು ಮಸಾಜ್ ಪಾರ್ಲರ್ ನಡೆಸುತ್ತಿದ್ದರು. ಸದ್ಯ ಮಕ್ಕಳ ಜೊತೆಯಲ್ಲಿ ವಾಸವಾಗಿದ್ದಾರೆ.
ಮೂರ್ನಾಲ್ಕು ವರ್ಷಗಳ ಹಿಂದೆ ಇವರ ಮಸಾಜ್ ಪಾರ್ಲರ್ಗೆ ಎಂಟ್ರಿ ಕೊಟ್ಟ ಮಾಜಿ ಹೋಂ ಗಾರ್ಡ್ ಶಿವರಾಜ್ ದೇವಾಡಿಗ ಎಂಬಾತ ತಾನು ಪಾಂಡೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಮಸಾಜ್ ಪಾರ್ಲರ್ನಲ್ಲಿ ವೇಶ್ಯಾವಟಿಕೆ ನಡೆಯುತ್ತಿದೆ ಎಂಬ ದೂರು ಬಂದಿದೆ ಅಂತ ಹೇಳಿದ್ದಾನೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ಸ್ಪೆಕ್ಟರ್ ಬಂದು ದಾಳಿ ಮಾಡಬಾರದು ಅಂತ ಆದ್ರೆ 20 ಸಾವಿರ ರೂಪಾಯಿ ಹಣ ನೀಡಿ. ಇಲ್ಲವಾದ್ರೆ ದಾಳಿ ನಡೆಸಿ ನಿಮ್ಮ ಮಗಳ ಹೆಸರಿಗೆ ಕಳಂಕ ತರಲಾಗವುದು ಎಂದು ಬೆದರಿಕೆ ಹಾಕಿದ್ದಾನೆ. ಹೀಗೆ ಬೆದರಿಸಿ ಮಹಿಳೆಯಿಂದ 38 ಸಾವಿರ ರೂಪಾಯಿ ಪಡೆದುಕೊಂಡಿದ್ದನು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಇದೀಗ ಪೊಲೀಸರು ಆರೋಪಿ ಶಿವರಾಜ್ ದೇವಾಡಿಗನನ್ನು ಬಂಧಿಸಿದ್ದಾರೆ. ಆದ್ರೆ ಶಿವರಾಜ್ ಪೊಲೀಸರ ಮುಂದೆ ಚಿನ್ನದ ಕಥೆಯೊಂದನ್ನು ಬಿಚ್ಚಿಟ್ಟಿದ್ದಾನೆ.
ಆರೋಪಿ ಹೇಳಿದ್ದು ಚಿನ್ನದ ಸರ ಕಥೆ
ನಾನು ಮಸಾಜ್ ಮಾಡಿಸಿಕೊಳ್ಳಲು ಪಾರ್ಲರ್ ಒಳಗಡೆ ಹೋದಾಗ ಮಹಿಳೆ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದರು. ಹಣ ಕೊಡು ಇಲ್ಲವಾದರೆ ಹೊರಗೆ ಹೋಗಿ ಜೋರಾಗಿ ಕಿರುಚಿಕೊಳ್ಳುತ್ತೇನೆ ಎಂದು ಹೇಳಿ ನನ್ನ ಬಳಿಯಲ್ಲಿದ್ದ ಚಿನ್ನದ ಸರ ಕಿತ್ಕೊಂಡರು ಎಂದು ಹೇಳಿದ್ದಾನೆ.
ಶಿವರಾಜ್ ದೇವಾಡಿಗ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಹಿಳೆ, ಆತ ಯಾರೂ ಅಂತ ನನಗೆ ಗೊತ್ತಿಲ್ಲ. ಅವನು ನನ್ನ ಗ್ರಾಹಕ ಸಹ ಅಲ್ಲ. ಆತ ಮಾಡಿರೋ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: Couple: ಬೆಳಗ್ಗೆ ಬೇಗ ಏಳಲ್ಲ, ಅಡುಗೆ ಮಾಡಲ್ಲ; ಪತ್ನಿ ವಿರುದ್ಧ ದೂರು ದಾಖಲಿಸಿದ ಪತಿ
ರೈಲ್ವೇ ನಿಲ್ದಾಣದ ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ
ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಸ್ಟೇಷನ್ನ ಡ್ರಮ್ನಲ್ಲಿ ಮಹಿಳೆಯ ಶವ ಪತ್ತೆ ಆಗಿದೆ. ರೈಲ್ವೆ ನಿಲ್ದಾಣಕ್ಕೆ ಶವ ತಂದಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸುಮಾರು 31-35 ಆಸುಪಾಸಿನ ವಯಸ್ಸಿನ ಮಹಿಳೆ ಶವ ಪತ್ತೆ ಆಗಿದ್ದು, ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು ಆಟೋದಲ್ಲಿ ಬಂದ ಮೂವರು ಆರೋಪಿಗಳು ಶವವನ್ನ ತಂದಿಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಎಸ್.ಪಿ ಸೌಮ್ಯಲತಾ ಭೇಟಿ ಪರಿಶೀಲನೆ ನಡೆಸಿದ್ದಾರೆ.
2ನೇ ಮಹಡಿಯಿಂದ ಬಿದ್ದ ಮಗು ಸಾವು
ನಾಲ್ಕು ದಿನದ ಹಿಂದೆ ಅಪಾರ್ಟ್ಮೆಂಟ್ನ ಎರಡನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮೂರು ವರ್ಷದ ಮಗು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿ ಕೆಂಗೇರಿ ಬಳಿಯ ಜ್ಞಾನಭಾರತಿ ಎನ್ಕ್ಲೇವ್ನ ಕಾವೇರಿ ಬ್ಲಾಕ್ನಲ್ಲಿ ದುರ್ಘಟನೆ ನಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ