KGF Babu ತಂಗಿ ಮನೆಗೆ ಬೆಂಕಿ ಕೇಸ್​​ಗೆ ಟ್ವಿಸ್ಟ್​ ನೀಡಿದ ವ್ಯಕ್ತಿ

ಕೆಜಿಎಫ್ ಬಾಬು

ಕೆಜಿಎಫ್ ಬಾಬು

ಬೆಂಕಿ ಹಾಕಿದ್ದು ಯಾರು ಅಂತ ನನಗೆ ಗೊತ್ತು ಎಂದು ಕಿರಣ್ ಹೇಳಿಕೆ ನೀಡಿದ್ದಾರೆ. ಇದೀಗ ಎಸ್​.ಆರ್​.ನಗರ ಪೊಲೀಸರು ಕಿರಣ್ ಹೇಳಿಕೆಯನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.

  • Share this:

ಬೆಂಗಳೂರು: ಕೆಜಿಎಫ್ ಬಾಬು (KGF Babbu) ತಂಗಿ ಮನೆಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಪೊಲೀಸರ ಮುಂದೆ ಹಾಜರಾಗಿರುವ ವ್ಯಕ್ತಿಯೋರ್ವ ಸ್ವಯಂ ಪ್ರೇರಿತವಾಗಿ ಪ್ರಕರಣದ ಬಗ್ಗೆ ತಿಳಿದಿರುವ ಮಾಹಿತಿಯನ್ನು ಹೇಳಿದ್ದಾರೆ. ಕಿರಣ್ ಪ್ರಕರಣಕ್ಕೆ ಟ್ವಿಸ್ಸ್ಟ್ ಕೊಟ್ಟಿರುವ ವ್ಯಕ್ತಿ. ಪೊಲೀಸರ (Police) ಮುಂದೆ ಬಂದು ಕಿರಣ್ ಹೇಳಿಕೆ ನೀಡಿದ್ದಾರೆ. ಕೆಜಿಎಫ್ ಬಾಬು ಮನೆಗೆ ಬೆಂಕಿ (Fire) ಹಾಕುವ ಬಗ್ಗೆ ಕೆಲವರು ಮಾತಾಡುತ್ತಿದ್ರು‌. ಅವರು ಮಾತನಾಡುತ್ತಿದ್ದ ವಿಚಾರ ನಾನು ಕೇಳಿಸಿಕೊಂಡಿದ್ದೆ ಎಂದು ಕೆಲವು ಹೆಸರುಗಳ ಪ್ರಸ್ತಾಪ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಬೆಂಕಿ ಹಾಕಿದ್ದು ಯಾರು ಅಂತ ನನಗೆ ಗೊತ್ತು ಎಂದು ಕಿರಣ್ ಹೇಳಿಕೆ ನೀಡಿದ್ದಾರೆ. ಇದೀಗ ಎಸ್​.ಆರ್​.ನಗರ ಪೊಲೀಸರು ಕಿರಣ್ ಹೇಳಿಕೆಯನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.


ನಗರದ ಸುಧಾಮನಗರದ (Sudhama Nagar) ಸಿಕೆಸಿ ಗಾರ್ಡನ್​ (CKC Garden) ನಲ್ಲಿರುವ ಉದ್ಯಮಿ ಕೆಜಿಎಫ್ ಬಾಬು (KGF Babu), ತಂಗಿ ಮನೆಗೆ ದುಷ್ಕರ್ಮಿಗಳು ತಡರಾತ್ರಿ ಬೆಂಕಿ ಹಚ್ಚಿದ್ದರು.


ಯುವರಾಜ್​ನಿಂದ ತೊಂದರೆ; ಕೆಜಿಎಫ್ ಬಾಬು ಆರೋಪ


ನಾನು ಚುನಾವಣೆಯಲ್ಲಿ ನಿಲ್ತೀನಿ ಅಂತ ಆರ್ ಯುವರಾಜ್ ತೊಂದರೆ ಕೊಡ್ತಿದ್ದಾರೆ ಅಂತ ಹೇಳಿದ್ದಾರೆ. ನಮ್ಮ ಸಹೋದರಿಗೆ ಯುವರಾಜ್ ಬಂದು ಧಮ್ಕಿ ಹಾಕಿದ್ದಾರೆ. ನಿಮ್ಮ ಅಣ್ಣನಿಗೆ ಹೇಳಿ, ನಮ್ಮ ತಂದೆ ಹಿಸ್ಟರಿ ಗೊತ್ತಿಲ್ವಾ? ನಾನು ಕಾರ್ಪೊರೇಟರ್ ಆಗಿ ನಿಮಗೆ ತೊಂದರೆ ಏನು ಕೊಟ್ಟಿಲ್ಲ ಅಂತ ಹೇಳಿ ಹೋಗಿದ್ದರು. ರಾತ್ರಿ ಬಂದು ಬೆಂಕಿ ಹಾಕಿ ಹೋಗಿದ್ದಾರೆ. ನಾನು ಚುನಾವಣೆಯಲ್ಲಿ ನಿಲ್ಲುತ್ತೇನೆ ಅಂತ ಆರ್ ಯುವರಾಜ್, ಆರ್ ವಿ ದೇವರಾಜ್ ತೊಂದರೆ ಕೊಡ್ತಿದ್ದಾರೆ. ಮನೆಗಳನ್ನ ಕಟ್ಟಿಸಿ ಕೊಡಲಾಗುತ್ತಿದೆ, ಇದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಪೊಲೀಸರಿಗೆ ಕೆಜಿಎಫ್ ಬಾಬು ತಂಗಿ ದೂರು


ಇನ್ನು, ಕೆಜಿಎಫ್ ಬಾಬು ಮನೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಮಾಹಿತಿ ನೀಡಿದ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಅವರು, ಎಸ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ರಾತ್ರಿ 2:30 ರಿಂದ 2:50 ಸುಮಾರಿಗೆ ಬೆಂಕಿ ಹಾಕಿದ್ದಾರೆ  ಎಂದು ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆಗೆ ಹೆಚ್​​ಡಿಕೆ ಸ್ಪಷ್ಟನೆ


ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ನೀಡಿದ್ದ ಬ್ರಾಹ್ಮಣ ಸಿಎಂ ಹೇಳಿಕೆ ವಿವಾದ (Brahmin CM controversy) ಜೋರಾಗುತ್ತಿದೆ. ಒಂದೆಡೆ ಕುಮಾರಸ್ವಾಮಿ ಹೇಳಿಕೆಯನ್ನು ಚುನಾವಣಾ ಅಸ್ತ್ರವಾಗಿ ಬಳಸಲು ಬಿಜೆಪಿ ಪ್ಲಾನ್ (BJP) ಮಾಡಿದ್ದರೆ, ಮತ್ತೊಂದೆಡೆ ಎಚ್‌ಡಿ ಕುಮಾರಸ್ವಾಮಿ ತಮ್ಮ ಹೇಳಿಕೆ ಕುರಿತಂತೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.


ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ (JP Bhavan) ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಮೂರು ದಿನಗಳ ಹಿಂದೆ ಮಾಧ್ಯಮಗಳಿಗೆ ಕೊಟ್ಟ ಪ್ರತಿಕ್ರಿಯೆ ವಿವಾದದ ರೂಪ ಪಡೆದಿದೆ. ಸಮಾಜದಲ್ಲಿ ಒಬ್ಬೊಬ್ಬರು ಅವರದೇ ಆದ ವಿಶ್ಲೇಷಣೆ ಕಲ್ಪಿಸುತ್ತಿದ್ದಾರೆ. ಇದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ ಅಂದಿದ್ದಾರೆ.


ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೆ ಅಂತ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.


ಇದನ್ನೂ ಓದಿ: Karnataka Politics: ಅವರದ್ದು ಊರು-ಮನೆ ದಾಟಿದ ಸಾಮರ್ಥ್ಯ: ಹೆಚ್​​ಡಿಕೆ ಹೇಳಿಕೆಗೆ ಸಿ ಟಿ ರವಿ ತಿರುಗೇಟು


ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ


ನಾನು ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ ಅಂತ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಾನು ಸಾರ್ವಜನಿಕರ ಅಹವಾಲು ಕೇಳುವಾಗ ನಿನ್ನ ಜಾತಿ  ಯಾವುದು ಅಂತ ಕೇಳಿಲ್ಲ. ನಮ್ಮ ಕುಟುಂಬ ಮೊದಲಿನಿಂದಲೂ ನಾಡಿನ ಎಲ್ಲಾ ಸಮಾಜದ ಬಗ್ಗೆ ಗೌರವದಿಂದ ನಡೆದುಕೊಂಡಿದೆ. ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೆ. ನಾನು ಹೇಳಿದ ಹಿನ್ನೆಲೆಗೆ ಸ್ಪಷನೆ ಕೊಟ್ಟಿದ್ದೇನೆ ಎಂದಿದ್ದಾರೆ.

Published by:Mahmadrafik K
First published: