• Home
  • »
  • News
  • »
  • state
  • »
  • Hubballi: ಹುಡುಗಿಯರೇ ಮತಾಂತರಕ್ಕೆ ಟಾರ್ಗೆಟ್; ಸಲ್ಮಾನ್ ಸ್ಫೋಟಕ ಹೇಳಿಕೆ

Hubballi: ಹುಡುಗಿಯರೇ ಮತಾಂತರಕ್ಕೆ ಟಾರ್ಗೆಟ್; ಸಲ್ಮಾನ್ ಸ್ಫೋಟಕ ಹೇಳಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರಿಗೆ ಹುಡುಗರ ಮತಾಂತರಕ್ಕೆ ಟಾರ್ಗೆಟ್ ಕೊಟ್ಟಿದ್ದರೆ, ಮತ್ತೆ ಕೆಲವರಿಗೆ ಹುಡಿಗಿಯರ ಟಾರ್ಗೆಟ್ ನೀಡಲಾಗಿತ್ತು. ನನಗೆ ಹುಡುಗಿಯ ಟಾರ್ಗೆಟ್ ನೀಡಲಾಗಿತ್ತು ಎಂದು ಶ್ರೀಧರ್ ಹೇಳಿಕೊಂಡಿದ್ದಾನೆ.

  • Share this:

ಹುಬ್ಬಳ್ಳಿ: ಮರ್ಮಾಂಗದ ಮುಂಭಾಗದ ತುದಿ ಕತ್ತರಿಸಿ ಖತ್ನಾಗೊಳಿಸಿ ಒತ್ತಾಯಪೂರ್ವಕ ಮತಾಂತರ (Religious conversion) ಮಾಡಿದ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯಲಾರಂಭಿಸಿದೆ. ಇಸ್ಲಾಂ (Islam) ಧರ್ಮಕ್ಕೆ ಮತಾಂತರಗೊಂಡ ಯುವಕನಿಂದ ನಡೆಯಿತಾ ಲವ್ ಜಿಹಾದ್ (Love Jihad) ಅನ್ನೋ ಪ್ರಶ್ನೆ ಎದ್ದಿದೆ. ಈ ಸಂಬಂಧ ಮತಾಂತರಗೊಂಡ ಶ್ರೀಧರ್ ಬಿಡುಗಡೆ ಮಾಡಿರೊ ಆಡಿಯೋ (Audio Viral) ಇದೀಗ ವೈರಲ್ ಆಗಿದೆ. ಶ್ರೀಧರ್ @ ಮಹ್ಮದ್ ಸಲ್ಮಾನ್ ಮಂಡ್ಯ ಜಿಲ್ಲೆ ಮದ್ದೂರು (Madduru, Mandya) ತಾಲೂಕಿನ ನಿವಾಸಿಯಾಗಿದ್ದಾನೆ. ಒಂದು ವರ್ಷದ ಹಿಂದೆ ತನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು ಎಂದು ಶ್ರೀಧರ್ ದೂರು ನೀಡಿದ್ದ. ಹುಬ್ಬಳ್ಳಿ (Hubballi) ನವನಗರ ಎಪಿಎಂಸಿ ಠಾಣೆಯಲ್ಲಿ 12 ಜನರ ವಿರುದ್ಧ ದೂರು ನೀಡಿದ್ದ. ಈ ಪೈಕಿ ಮಂಡ್ಯ ಜಿಲ್ಲೆ ಓರ್ವ ಹಾಗೂ ಹುಬ್ಬಳ್ಳಿಯ 11 ಜನರಿದ್ದಾರೆ.


ಇದೀಗ ಆತನ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಇಸ್ಲಾಂ ಧರ್ಮಕ್ಕೆ ಒತ್ತಾಯಪೂರ್ವಕವಾಗಿ ಮತಾಂತರಗೊಂಡಿದ್ದ ಶ್ರೀಧರ್ @ ಮಹ್ಮದ್ ಸಲ್ಮಾನ್ ಗೆ ಯುವತಿಯರನ್ನು ಮತಾಂತರ ಮಾಡೋ ಟಾರ್ಗೆಟ್ ನೀಡಲಾಗಿತ್ತಂತೆ. ಯುವತಿಯರನ್ನು ಮತಾಂತರ ಮಾಡುವಂತೆ ತಾಕೀತು ಮಾಡಿದ ಆರೋಪ ಕೇಳಿ ಬಂದಿದೆ.


ಲವ್ ಜಿಹಾದ್​ಗೆ ಹಣ ನೀಡಿದ್ರಾ?


ಅದಕ್ಕಾಗಿ ಶ್ರೀಧರ್ @ ಮಹ್ಮದ್ ಸಲ್ಮಾನ್ ಗೆ ಆರೋಪಿಗಳು ಹಣವನ್ನೂ ನೀಡಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಅವರ ಒತ್ತಾಯದ ಮೇರೆಗೆ ಯುವತಿಯನ್ನು ಪರಿಚಯಿಸಿಕೊಂಡು ಪ್ರೀತಿಸಿದ ನಾಟಕವಾಡಿದ್ದೆ. ಲವ್ ಜಿಹಾದ್ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸಿದ್ದುದಾಗಿ ಆತ ಹೇಳಿಕೊಂಡಿದ್ದಾನೆ.


ವಿಡಿಯೋದಲ್ಲಿ ಸ್ಫೋಟಕ ಮಾಹಿತಿ


ವಿಡಿಯೋ ಹೇಳಿಕೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳನ್ನು ಶ್ರೀಧರ್ ಬಿಚ್ಚಿಟ್ಟಿದ್ದಾನೆ. ತಾನು ಸಂಕಷ್ಟದಲ್ಲಿದ್ದಾಗ ನೆರವಾಗೋದಾಗಿ ಅನ್ಯ ಧರ್ಮೀಯ ವ್ಯಕ್ತಿಯಿಂದ ಆಮಿಷ ಬಂದಿತ್ತು. ಮೌಲ್ವಿಯೊಬ್ಬರಿಂದ ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ ನೀಡಿಸಿ ಮತಾಂತರಕ್ಕೆ ಮೈಂಡ್ ವಾಶ್ ಮಾಡಲಾಗಿತ್ತು.


ಇದನ್ನೂ ಓದಿ: Samrat Restaurant: ಬೆಂಗಳೂರಿನ ಐಕಾನಿಕ್​ ಹೋಟೆಲ್​ ಬಂದ್​, ಇಲ್ಲಿನ ಮಸಾಲೆ ದೋಸೆ-ಬಾದಾಮ್​ ಹಲ್ವಾ ಇನ್ನೂ ನೆನಪು ಮಾತ್ರ!


ಖತ್ನಾ ಮಾಡಿಸಿದ ಮಾರನೇಯ ದಿನದಿಂದ ತಾವು ಹೇಳಿದಂತೆ ಕೇಳುವಂತೆ ತಾಕೀತು ಮಾಡಿ, ಬೆಂದ ಮಾಂಸ ತಿನ್ನುವಂತೆ ಒತ್ತಡ ಹಾಕಲಾಗಿತ್ತು. ಇದೆಲ್ಲಾ ಆಗೋಲ್ಲ ಅಂದಾಗ ನನ್ನ ಕೈಲಿ ಪಿಸ್ತೂಲ್ ಹಿಡಿಸಿ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ್ದರು. ಟೆರರಿಸ್ಟ್ ಅಂತ ಬಿಂಬಿಸೋದಾಗಿ ಬ್ಲಾಕ್ ಮೇಲ್ ಮಾಡಿದ್ದುದಾಗಿ ಆತ ವಿಡಿಯೋದಲ್ಲಿ ತಿಳಿಸಿದ್ದಾನೆ.


ತಿರುಪತಿಯಲ್ಲಿ ತರಬೇತಿ


ಮೊದಲು ಬೆಂಗಳೂರಿನಲ್ಲಿ ಮತಾಂತರ ಮಾಡಿದ ನಂತರ ತಿರುಪತಿಯಲ್ಲಿ ಟ್ರೈನಿಂಗ್ ಕೊಟ್ಟು ಇತರರನ್ನು ಮತಾಂತರಕ್ಕೆ ಪ್ರಚೋದನೆ ನೀಡಿದ್ದರು. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರಿಂದ ಬೇರೆಯವರ ಮತಾಂತರಕ್ಕೆ ಯತ್ನಿಸಲಾಗಿತ್ತು. ಕೆಲವರಿಗೆ ಹುಡುಗರ ಮತಾಂತರಕ್ಕೆ ಟಾರ್ಗೆಟ್ ಕೊಟ್ಟಿದ್ದರೆ, ಮತ್ತೆ ಕೆಲವರಿಗೆ ಹುಡಿಗಿಯರ ಟಾರ್ಗೆಟ್ ನೀಡಲಾಗಿತ್ತು. ನನಗೆ ಹುಡುಗಿಯ ಟಾರ್ಗೆಟ್ ನೀಡಲಾಗಿತ್ತು ಎಂದು ಶ್ರೀಧರ್ ಹೇಳಿಕೊಂಡಿದ್ದಾನೆ.


ಇದನ್ನೂ ಓದಿ:  Bengaluru: ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ವಿಧಾನಸೌಧ ಚಲೋ; ಇತ್ತ ಕಲಬುರಗಿ ಸಿಪಿಐ ಶ್ರೀಮಂತ ಇಲ್ಲಾಳ ಏರ್​​ಲಿಫ್ಟ್​


ಲವ್ ಮಾಡೋಕೆ ಹೇಳಿದ್ದರಂತೆ


ಯುವತಿಯನ್ನು ಗುರುತಿಸಿ ಲವ್ ಮಾಡೋಕೆ ಅವರೇ ಹೇಳಿದ್ದರು. ಅದರ ಪ್ರಕಾರ ಯುವತಿಯನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡಿದ್ದೆ. ಅದಕ್ಕಾಗಿ ನನಗೆ ಹಣವನ್ನು ನೀಡಲಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ. ಆದರೆ ಯುವತಿಯನ್ನು ಪಟಾಯಿಸಲು ಬಂದಾಗ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಶ್ರೀಧರ್ ಮೇಲೆ ಕೆಲವರಿಂದ ಹಲ್ಲೆಯಾಗಿತ್ತು. ಸದ್ಯ ಶ್ರೀಧರ್ ಪೊಲೀಸರ ವಶದಲ್ಲಿದ್ದಾನೆ. ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

Published by:Mahmadrafik K
First published: