• Home
  • »
  • News
  • »
  • state
  • »
  • Gadag: ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಕೇಸ್​ಗೆ ಟ್ವಿಸ್ಟ್​; ಹತ್ಯೆ ಹಿಂದೆ ತ್ರಿಕೋನ ಪ್ರೇಮಕಥೆ

Gadag: ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಕೇಸ್​ಗೆ ಟ್ವಿಸ್ಟ್​; ಹತ್ಯೆ ಹಿಂದೆ ತ್ರಿಕೋನ ಪ್ರೇಮಕಥೆ

ಬಾಲಕನ ಕೊಲೆಗೆ ಟ್ವಿಸ್ಟ್​

ಬಾಲಕನ ಕೊಲೆಗೆ ಟ್ವಿಸ್ಟ್​

ಕೋಪಗೊಂಡ ಮುತ್ತಪ್ಪ ಶಾಲೆಗೆ ಬಂದು ಗೀತಾಳ ಮಗ ಭರತನಿಗೆ ಜೋರಾಗಿ ಹೊಡೆದಿದ್ದಾನೆ. ನಂತರ ತರಗತಿಯಿಂದ ಹೊರಗೆ ಕರೆದುಕೊಂಡು ಬಂದು ಮೊದಲ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾನೆ.

  • Share this:

ಅತಿಥಿ ಶಿಕ್ಷಕನಿಂದ (Guest Teacher) ನಾಲ್ಕನೇ ವಿದ್ಯಾರ್ಥಿ ಕೊಲೆ (Student Murder Case) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯ ಹಿಂದಿನ ತ್ರಿಕೋನ ಪ್ರೇಮಕಥೆ ಪೊಲೀಸರ ತನಿಖೆಯಲ್ಲಿ (Police Investigation) ಬೆಳಕಿಗೆ ಬಂದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿಯನ್ನು ಮೊದಲನೇ ಮಹಡಿಯಿಂದ ಕೆಳಗೆಸೆದು ಹತ್ಯೆಗೈದಿದ್ದ ಅತಿಥಿ ಶಿಕ್ಷಕ ಮುತ್ತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶಿಕ್ಷಕ, ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಬಾಲಕ ಭರತ್ ತಾಯಿ, ಶಿಕ್ಷಕಿಯೂ ಆಗಿದ್ದ ಗೀತಾ ಬಾರಕೇರಿ ಎಂಬವರ ಮೇಲೂ ಹಲ್ಲೆ ಮಾಡಿದ್ದು, ಸದ್ಯ ಶಿಕ್ಷಕಿಯ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ (KIMS Hubballi) ದಾಖಲು ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿಥಿ ಶಿಕ್ಷಕ ಮುತ್ತಪ್ಪ ಮತ್ತು ವಿದ್ಯಾರ್ಥಿ ತಾಯಿ ಗೀತಾ ನಡುವೆ ಪ್ರೇಮಾಂಕುರವಿತ್ತು.


ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಮುತ್ತಪ್ಪ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಗೀತಾ ಅವರ ಮೇಲೆ ಮುತ್ತಪ್ಪನಿಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಪ್ರತಿನಿತ್ಯ ಸಲುಗೆಯಿಂದಲೇ ಇರುತ್ತಿದ್ದರು. ಮೆಸೇಜ್, ಫೋನ್​​ನಲ್ಲಿ ಮಾತನಾಡೋದು ಜೋರಾಗಿತ್ತು.


ಮತ್ತೋರ್ವನ ಜೊತೆ ಸಲುಗೆಯಿಂದ ಇದ್ದ ಗೀತಾ


ಕೆಲವು ದಿನಗಳ ಹಿಂದೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಲಾಗಿತ್ತು. ಪ್ರವಾಸದ ವೇಳೆ ಶಾಲೆಯ ಮತ್ತೋರ್ವ ಸಹ ಶಿಕ್ಷಕ ಸಂಗನಗೌಡ ಎಂಬವರ ಜೊತೆ ಸಲುಗೆಯಿಂದ ಇರೋದನ್ನು ಮುತ್ತಪ್ಪ ಗಮನಿಸಿದ್ದಾನೆ. ಗೀತಾ ನಡೆಯಿಂದ ಮುತ್ತಪ್ಪ ಕೋಪಗೊಂಡಿದ್ದನು.


ಇದರಿಂದ ಕೋಪಗೊಂಡ ಮುತ್ತಪ್ಪ ಶಾಲೆಗೆ ಬಂದು ಗೀತಾಳ ಮಗ ಭರತನಿಗೆ ಜೋರಾಗಿ ಹೊಡೆದಿದ್ದಾನೆ. ನಂತರ ತರಗತಿಯಿಂದ ಹೊರಗೆ ಕರೆದುಕೊಂಡು ಬಂದು ಮೊದಲ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾನೆ.


big twist in gadag student murder case mrq
ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ


ಸಲಾಕೆಯಿಂದ ಮಾರಣಾಂತಿಕ ಹಲ್ಲೆ


ತದನಂತರ ಗೀತಾ ಬಳಿ ತೆರಳಿ ಸಲಾಕೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಭರತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಅವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.


ಗೀತಾ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಂಗನಗೌಡ, ಮುತ್ತಪ್ಪ ಮತ್ತು ಗೀತಾ ಮೂವರ ತ್ರಿಕೋನ ಪ್ರೇಮಕಥೆಗೆ ಏನೂ ಅರಿಯದ 10 ವರ್ಷದ ಮಗು ಪ್ರಾಣ ಕಳೆದುಕೊಂಡಿದೆ.


big twist in gadag student murder case mrq
ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ


Shivamogga: ಶಾಲಾ ಆವರಣದಲ್ಲೇ ಅಹೋರಾತ್ರಿ ಧರಣಿ


ಮುಖ್ಯ ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬರ್ತಿದೆ. ಶಿವಮೊಗ್ಗದ ಸಾಗರ ತಾಲೂಕಿನ ಕಾಗೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಫೀಕ್ ಅಹಮದ್ ವಿರುದ್ಧ ಕೆಲ ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ.


ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಬಂದ DDPIಗೆ ಕಾಗೆಹಳ್ಳ ಗ್ರಾಮಸ್ಥರು ದಿಗ್ಬಂಧನ ಹಾಕಿದ್ರು. ದೂರುದಾರರನ್ನು ಸ್ಥಳಕ್ಕೆ ಕರೆಸಬೇಕೆಂದು ಆಗ್ರಹಿಸಿ ಪೋಷಕರು, ಶಾಲಾ ಮಕ್ಕಳು ಶಾಲಾ ಆವರಣದಲ್ಲಿ ಗೇಟ್‌ಗೆ ಬೀಗ ಹಾಕಿ ಪ್ರತಿಭಟಿಸಿದರು.


ಗೋಳಗುಮ್ಮಟ ಮೇಲಿಂದ ಜಿಗಿದು ಆತ್ಮಹತ್ಯೆ


ವಿಜಯಪುರದ ಗೋಳಗುಮ್ಮಟದ ಮೇಲಿಂದ ಹಾರಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುಮಾರು 23 ವರ್ಷದ ಯುವತಿ ಗುಮ್ಮಟದ ಒಳಭಾಗದಿಂದ ಆವರಣದ ಒಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಿಯಕರನ ಜೊತೆಗೆ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ: Crime News : ₹5 ಲಕ್ಷಕ್ಕಾಗಿ ಹೆತ್ತವರ ಬಳಿಯೇ ಕಿಡ್ನ್ಯಾಪ್ ನಾಟಕ; ‘ಸುಪುತ್ರ’ನ ಆಟ ಬಯಲಾಗಿದ್ದೇ ರೋಚಕ


₹30 ಲಕ್ಷ ಮೌಲ್ಯದ ಮದ್ಯ ಸೀಜ್


ಬೀದರ್ ಜಿಲ್ಲೆಯ ಹುಮ್ನಾಬಾದ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 458 ಮದ್ಯದ ಕೇಸ್ ಕದ್ದು, ಪರಾರಿಯಾಗಿದ್ದ 10 ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. 30 ಲಕ್ಷ 63 ಸಾವಿರದ 855 ರೂಪಾಯಿ ಮೌಲ್ಯದ 458 ಮದ್ಯದ ಬಾಕ್ಸ್​​ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು