ಧಾರವಾಡ ಕೃಷಿ ವಿವಿ ಯುವತಿಯರ ಸಾವಿನ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​; ಅತ್ಯಾಚಾರದ ದೂರು ದಾಖಲು

ನನ್ನ ಮಗಳಿಗೆ ತುಂಬಾ ಕಿರುಕುಳ ನೀಡಿದ್ದಾರೆ. ಅವಳಿಗೆ ಕೆಲಸದಿಂದ ತೆಗೆದು ಹಾಕುವ ಬಗ್ಗೆ ಮಾತನಾಡಿದ್ದನ್ನು ಸ್ವತಃ ಮಗಳು ‌ಮೇಘನಾ ಹೇಳುತ್ತಿದ್ದಳು.

 ನನ್ನ ಮಗಳಿಗೆ ತುಂಬಾ ಕಿರುಕುಳ ನೀಡಿದ್ದಾರೆ. ಅವಳಿಗೆ ಕೆಲಸದಿಂದ ತೆಗೆದು ಹಾಕುವ ಬಗ್ಗೆ ಮಾತನಾಡಿದ್ದನ್ನು ಸ್ವತಃ ಮಗಳು ‌ಮೇಘನಾ ಹೇಳುತ್ತಿದ್ದಳು.

ನನ್ನ ಮಗಳಿಗೆ ತುಂಬಾ ಕಿರುಕುಳ ನೀಡಿದ್ದಾರೆ. ಅವಳಿಗೆ ಕೆಲಸದಿಂದ ತೆಗೆದು ಹಾಕುವ ಬಗ್ಗೆ ಮಾತನಾಡಿದ್ದನ್ನು ಸ್ವತಃ ಮಗಳು ‌ಮೇಘನಾ ಹೇಳುತ್ತಿದ್ದಳು.

  • Share this:
ಧಾರವಾಡ (ಏ. 22) : ಕರ್ನಾಟಕದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಕೃಷಿ ವಿಶ್ವವಿದ್ಯಾಲಯ ಹೊಸ ಹೊಸ ಆವಿಷ್ಕಾರ ಮಾಡುವ ಮೂಲಕ ಹೆಸರಾಗುತ್ತಿದ್ದತ್ತು. ಆದರೆ ಈಗ ಇಲ್ಲಿನ ಸಿಬ್ಬಂದಿಗಳ ಸಾವಿನ ಕುರಿತು ಸುದ್ದಿಯಾಗುತ್ತಿದೆ. ಇಲ್ಲಿನ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಯುವತಿಯರ ಅಪಘಾತ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಯಾಕೆಂದರೆ ಇದು  ಸಾಮಾನ್ಯ ಅಪಘಾತ ಪ್ರಕರಣದಂತಿರಲಿಲ್ಲ. ಕಾರಿನಲ್ಲಿದ್ದ ಪುರಷರಿಬ್ಬರು ಬದುಕುಳಿದಿದ್ದು, ಯುವತಿಯರು ಮಾತ್ರ ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ಇದು ಅಪಘಾತವಲ್ಲ ಕೊಲೆ ಎಂಬ ಶಂಕೆ ಕೂಡ ವ್ಯಕ್ತವಾಗಿದ್ದು, ಯುವತಿಯ ಕುಟುಂಬ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಪರಿಣಾಮ ಇಡೀ ಪ್ರಕರಣಕ್ಕೆ ಹೊಸ ತಿರುವು ಪಡೆಯುತ್ತಿದೆ. 

ಕಳೆದ ಜನವರಿ 31 ರಂದು ಗೋವಾದಿಂದ ಕಾರಿನಲ್ಲಿ ಬರುತ್ತಿದ್ದಾಗ ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ ಬಳಿ ನಡೆದ ಅಪಘಾತದಲ್ಲಿ ಯುವತಿಯರಿಬ್ಬರೂ ಮೃತಪಟ್ಟಿದ್ದರು. ಅವತ್ತು ಆ ಕಾರನ್ನು ವಿಸಿಯ ಆಪ್ತ ಕಾರ್ಯದರ್ಶಿ ಎಂ.ಎ. ಮುಲ್ಲಾ ಚಲಾಯಸುತ್ತಿದ್ದರು. ಜೊತೆಗೆ ಇದೇ ಕೃಷಿ ವಿವಿ ಕಂಪ್ಯೂಟರ್ ಆಪರೇಟರ್ ಉಳವಪ್ಪ ಮೇಸ್ತ್ರಿ ಸಹ ಜೊತೆಯಲ್ಲಿದ್ದರು.

ಯುವತಿಯರು ಮನೆಯಲ್ಲಿ ಬಾಗಲಕೋಟೆಗೆ ವಿಶ್ವವಿದ್ಯಾಲಯದ ಕೆಲಸದ ನಿಮಿತ್ತ ಹೋಗುವುದಾಗಿ ಹೇಳಿದ್ದರು. ಆದ್ರೆ ಅಪಘಾತ ನಡೆದಾಗಲೇ ಅವರು ಹೋಗಿದ್ದ ಗೋವಾಗೆ ಅಂತಾ ಗೊತ್ತಾಗಿದ್ದು. ಹೀಗಾಗಿ ಇಡೀ ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿ ವಿವಿಯ ಕುಲಪತಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ತಿನಿಖೆ ಮಾಡುವಂತೆ ಮನವಿ ಮಾಡಿದ್ದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ, ಅಲ್ಲದೇ ಅನೇಕ ಪ್ರತಿಭಟನೆಗಳು ಸಹ ನಡೆದರು ಯಾವುದೇ ಪ್ರಯೋಜನವಾಗಿರಲಿಲ್ಲ.  ಈಗ ಮೃತ ಮೇಘನಾ ತಾಯಿ ಪ್ರತಿಭಾ ಈ ಎಲ್ಲ ಘಟನೆಗೆ ಮುಲ್ಲಾ ಹಾಗೂ ಉಳವಪ್ಪನೇ ಕಾರಣ ಅಂತಾ ಆರೋಪಿಸಿ ಧಾರವಾಡದ ಉಪನಗರ ಠಾಣೆಯಲ್ಲಿಐಪಿಸಿ ಸೆಕ್ಷನ್ 354 (A) 376, 302, 34 ಅಡಿಯಲ್ಲಿ ದೂರು ದಾಖಲು ದಾಖಲಿಸಿದ್ದಾರೆ.

ನನ್ನ ಮಗಳಿಗೆ ತುಂಬಾ ಕಿರುಕುಳ ನೀಡಿದ್ದಾರೆ. ಅವಳಿಗೆ ಕೆಲಸದಿಂದ ತೆಗೆದು ಹಾಕುವ ಬಗ್ಗೆ ಮಾತನಾಡಿದ್ದನ್ನು ಸ್ವತಃ ಮಗಳು ‌ಮೇಘನಾ ಹೇಳುತ್ತಿದ್ದಳು. ಆದರೆ, ನಮ್ಮ ಕುಟುಂಬ ಸಮಸ್ಯೆ ಯಿಂದ ಬೇರೆಡೆ ಕೆಲಸ ‌ಸಿಕ್ಕ ಮೇಲೆ ಅಲ್ಲಿನ ಕೆಲಸ ‌ಬಿಡುವಂಥೆ ಎಂದು ನಾನು ಹೇಳಿದ್ದೆ. ಆದರೆ ಅಷ್ಟರಲ್ಲಿಯೇ ಮೃತಳಾಗಿದ್ದಾಳೆ.  ಈ ಅಪಘಾತ ಕುರಿತು ಸೂಕ್ತ ತನಿಖೆಯಾಗಬೇಕ., ಮೃತಪಟ್ಟ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ತಪ್ಪಿಸ್ಥರಿಗೆ ಶಿಕ್ಷೇಯಾಗಬೇಕಿದೆ ಎಂದು ಮೃತ ಮೇಘನಾ ತಾಯಿ ಪ್ರತಿಭಾ ಮನವಿ ಮಾಡಿದ್ದರು.

ಕೃಷಿ ವಿವಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಈ ಯುವತಿಯರನ್ನು  ಒತ್ತಾಯ ಪೂರ್ವಕವಾಗಿ  ಗೋವಾಕ್ಕೆಕರೆದುಕೊಂಡು ಹೋಗಿದ್ದರೆಂಬ ಆರೋಪವೂ ಕೇಳಿ ಬಂದಿತ್ತು. ಒಂದು ವೇಳೆ ತನ್ನೊಂದಿಗೆ ಸಹಕರಿಸದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಕೂಡ  ದೂರಿನಲ್ಲಿ ಉಲ್ಲೇಖಿಸಲಾಗಿದೆಈ ಬಗ್ಗೆ ಮೇಘನಾ ತನ್ನ ಗೆಳತಿಯ ತಂದೆಗೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದಳು ಎಂದು ದೂರಿನಲ್ಲಿ ಹೇಳಿರುವ ತಾಯಿ ಪ್ರತಿಭಾ, ಮುಲ್ಲಾ ಮತ್ತು ಉಳವಪ್ಪ ಒತ್ತಾಯ ಪೂರ್ವಕವಾಗಿ ತಮ್ಮ ಮಗಳನ್ನು ಕರೆದೊಯ್ದು ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದಾರೆ ಅಂತಾ ದೂರಿನಲ್ಲಿ ತಿಳಿಸಿದ್ದಾರೆ

ಇನ್ನು ಘಟನೆ ನಡೆದ ದಿನದಿಂದ ಇಲ್ಲಿಯವರೆಗೂ ಘಟನೆಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಿ ಅಂತಾ ಯುವತಿಯ ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿದ್ದವು. ಆದರೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರಲಿಲ್ಲ.   ಈ ಕಾರಣಕ್ಕಾಗಿಯೇ ಮೃತಳ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಅಪಘಾತದಲ್ಲಿ ಕಾರಿನ ಹಿಂಬದಿಯಲ್ಲಿ ಮೃತಪಟ್ಟಿದ್ದು ಹೇಗೆ..?

ಕಾರ ಮುಂದೆ ಕುಳಿತ ಮುಲ್ಲಾ ಹಾಗೂ ಉಳವಪ್ಪ ಬದುಕಿದ್ದಾರೆ. ಮೇಘನಾ ಯಾಕೆ ಎಲ್ಲಿಗೋ ಹೋಗುವುದಾಗಿ ಹೇಳಿ ಮತ್ತೆಲ್ಲಿಗೋ ಹೋಗಿದ್ದಾಳೆ. ಈ ಬಗ್ಗೆ ಕೂಡ ತನಿಖೆ ನಡೆಯಬೇಕು ಎಂದು ಮೃತ ಮೇಘನಾ ಚಿಕ್ಕಪ್ಪ ರಾಜು ಒತ್ತಾಯಿಸಿದ್ದಾರೆ.

ಇಬ್ಬರೂ ಯುವತಿಯರು ಬಡಕುಟುಂಬದಿಂದ ಬಂದಿರು ಹಿನ್ನೆಲೆಯಲ್ಲಿ ಅವರಿಗೆ ಕೆಲಸದ ಅನಿವಾರ್ಯತೆ ಸಾಕಷ್ಟಿತ್ತು. ಹೀಗಾಗಿ ಅದನ್ನೇ ಮುಲ್ಲಾ ಬಂಡವಾಳ ಮಾಡಿಕೊಂಡನೇ ಅನ್ನೋ ಅನುಮಾನ ಕೂಡ ವ್ಯಕ್ತವಾಗಿದ್ದು, ಅಪಘಾತದಲ್ಲಿ ಕಾರಿನಲ್ಲಿ ಹಿಂದೆ ಕುಳಿತಿದ್ದ ಯುವತಿಯರಷ್ಟೇ ಮೃತಪಟ್ಟಿದ್ದರು. ಆದರೆ ಕಾರು ಚಾಲನೆ ಮಾಡುತ್ತಿದ್ದ ಮುಲ್ಲಾಗೆ ಕಾಲು ಮುರಿದಿದ್ದು, ಅವರು ಗುಣಮುಖರಾಗುತ್ತಿದ್ದಾರೆ. ಇನ್ನು ಉಳವಪ್ಪನಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿತ್ತು. ಹೀಗಾಗಿ ಈ ಪ್ರಕರಣದ ತನಿಖೆಯನ್ನು ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ.

(ವರದಿ: ಮಂಜುನಾಥ ಯಡಳ್ಳಿ)
Published by:Seema R
First published: