ಬೆಂಗಳೂರು: ಹಸುವನ್ನು ಹಿಂದೂ ಸಂಪ್ರದಾಯದಲ್ಲಿ (Hindu Tradition) ದೇವರು ಎಂದು ಪೂಜಿಸುತ್ತಾರೆ. ಗ್ರಾಮೀಣ ಭಾಗದ ರೈತರು (Rural Farmer), ಪಶುಪಾಲಕರು ಹಸುಗಳನ್ನು ತಮ್ಮ ಮನೆ ಮಂದಿಯಂತೆ ಸಾಕುತ್ತಾರೆ. ಹಸುಗಳು ಅದೆಷ್ಟೋ ಜನರ ಜೀವನದ ಆರ್ಥಿಕ ಶಕ್ತಿಗಳು ಆಗಿವೆ. ಹಸುವಿನ ಹಾಲು ಸೇರಿದಂತೆ ವಿವಿಧ ಹಾಲಿನ ಉತ್ಪನ್ನಗಳು ಮಾನವ ಜೀವಿಸಲು, ಆರೋಗ್ಯವಂತವಾಗಿರಲು ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯೋರ್ವ ಗೋಮಾತೆಗೆ ಮೂತ್ರಪಾನ ಮಾಡಿಸಿದ್ದಾರೆ ಎಂಬ ಆರೋಪ ಬೆಂಗಳೂರಿನಲ್ಲಿ (Bengaluru) ಕೇಳಿ ಬಂದಿತ್ತು. ಈ ಕುರಿತ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದವು. ಹಲವು ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯೆ ಕೂಡ ನೀಡಿದ್ದರು. ಟೆಕ್ಕಿಯೊಬ್ಬರು ಈ ಸಂಬಂಧ ಟ್ವೀಟ್ ಮಾಡಿ ಪೊಲೀಸರಿಗೆ ದೂರು ಸಹ ನೀಡಿದ್ದರು. ಆದರೆ ಸದ್ಯ ಪ್ರಕರಣ ನೈಜತೆ ಬೆಳಕಿಗೆ ಬಂದಿದ್ದು, ವಿಡಿಯೋ ಟ್ವೀಟ್ ಮಾಡಿ ದೂರು ಕೊಟ್ಟ ಟೆಕ್ಕಿಯ ನಿಜ ಬಣ್ಣ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
ಬೆಂಗಳೂರಿನ ಬನಶಂಕರಿ ಮೂರನೇ ಹಂತದ ನಿವಾಸಿಯಾಗಿದ್ದ ಟೆಕ್ಕಿ ಕೆಎಸ್ ಜಯೇಸ್ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಟ್ವೀಟ್ ಮಾಡಿ, ವಿಡಿಯೋದಲ್ಲಿ ಕಾಣುವ ವ್ಯಕ್ತಿ ಹಸುವಿಗೆ ಮೂತ್ರಪಾನ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಟ್ವಿಟರ್ನಲ್ಲಿ ಪಶುಸಂಗೋಪನೆ ಇಲಾಖೆ, ಪೊಲೀಸ್ ಇಲಾಖೆಯ ಟ್ವೀಟ್ ಟ್ಯಾಗ್ ಮಾಡಿ ದೂರು ಸಹ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರು ವಿಚಾರಣೆಗೆ ಮುಂದಾಗಿದ್ದರು.
ಇದನ್ನೂ ಓದಿ: Bengaluru: ಕಾರಿನ ಮೇಲೆ ಮಗುಚಿಬಿದ್ದ ಕಾಂಕ್ರಿಟ್ ಲಾರಿ; ತಾಯಿ, ಮಗಳು ಸ್ಥಳದಲ್ಲೇ ಸಾವು!
ಅಸಲಿಗೆ ಆಗಿದ್ದೇನು?
ಫೋಟೋ ಹಾಗೂ ವಿಡಿಯೋವನ್ನು ಟ್ವೀಟ್ ಮಾಡಿದ್ದ ಟೆಕ್ಕಿ ಜಯೇಶ್ ಅವರ ಮನೆಯ ಪಕ್ಕದಲ್ಲೇ ಇದ್ದ ಹಸು ಶೆಡ್ ನಿಂದ ಸಮಸ್ಯೆ ಆಗುತ್ತಿದೆ ಎಂದು ಈ ಹಿಂದೆಯೇ ಟ್ವೀಟ್ ಮಾಡಿ ಕಿತಾಪತಿ ಮಾಡಿದ್ದರು. ಜಯೇಶ್ ಬಿಲ್ಡಿಂಗ್ ಪಕ್ಕದಲ್ಲೇ, ಹೊನ್ನಪ್ಪ ಎಂಬುವವರ ಮನೆಯಿದೆ. ಹೊನ್ನಪ್ಪರ ಮನೆಯಲ್ಲಿ ಹಸು ಹಾಗೂ ಮೇಕೆಗಳನ್ನ ಜೀವನೋಪಾಯಕ್ಕಾಗಿ ಸಾಕುತ್ತಿದ್ದಾರೆ.
ಇನ್ನು, ಟೆಕ್ಕಿ ಟ್ವೀಟ್ ಮಾಡಿದ್ದ ವಿಡಿಯೋದಲ್ಲಿ ಮನೆಯಲ್ಲಿದ್ದ ಹೊನ್ನಪ್ಪ ಎಂಬ ವಯೋವೃದ್ಧ ಅರಿವಿಲ್ಲದೆ ಟಬ್ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದರು. ಇದನ್ನೇ ಪಕ್ಕದ ಮನೆಯಿಂದ ಜಯೇಶ್, ವಿಡಿಯೋ ಮಾಡಿದ್ದರು. ಅಲ್ಲದೆ, ಹಸುವಿಗೆ ನೀರು ಕುಡಿಸಲು ಇಟ್ಟಿದ್ದ ಟಬ್ ನಲ್ಲಿ, ಮೂತ್ರ ಮಾಡಿದ್ದಾರೆಂದು ಬರೆದುಕೊಂಡಿದ್ದರು. ತಮ್ಮ ಟ್ವೀಟ್ಗೆ ಪಶುಸಂಗೋಪನಾ ಇಲಾಖೆ, ಬಿಬಿಎಂಪಿ, ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
ಭಯ ಆಗ್ತಿದೆ ಎಂದು ಹೊನ್ನಪ್ಪ ಕುಟುಂಬಸ್ಥರ ನೋವಿನ ನುಡಿ
ಇನ್ನು, ಜಯೇಶ್ ತನ್ನ ಮನೆಯ ಪಕ್ಕದಲ್ಲಿ ಹಸು, ಮೇಕೆಗಳನ್ನ ಸಾಕಿರುವ ಮನೆಯನ್ನು ಎತ್ತಂಗಡಿ ಮಾಡಿಸಲು ಟೆಕ್ಕಿ ಟ್ವೀಟ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಪ್ರತಿಕ್ರಿಯೆ ನೀಡಿರುವ ಕುಟುಂಬಸ್ಥರು, ಜಯೇಶ್ ನಮಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ನಮ್ಮನ್ನು ಇಲ್ಲಿಂದ ಓಡಿಸಲು, ನಮಗೆ ಗೊತ್ತಿಲ್ಲದೆ ನಮ್ಮ ವಿಡಿಯೋ ಮಾಡಿದ್ದಾರೆ. ನಮ್ಮ ಮನೆಯ ಸುತ್ತಮುತ್ತ ಎಲ್ಲೆಲ್ಲಿ ಕ್ಯಾಮೆರಾ ಇಟ್ಟಿದ್ದಾರೆ ಅಂತಲಯ ಗೊತ್ತಿಲ್ಲ. ಇದರಿಂದ ಭಯ ಆಗ್ತಿದೆ ಎಂದು ಹೊನ್ನಪ್ಪ ಕುಟುಂಬಸ್ಥರು ನೋವಿನಿಂದ ಮಾತನಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ