• Home
  • »
  • News
  • »
  • state
  • »
  • Hubballi: ಬಲವಂತದ ಮತಾಂತರ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಿಸಿದ ಹುಡುಗಿಯನ್ನ ಕನ್ವರ್ಟ್​ ಮಾಡಲು ಬಂದಿದ್ದನಾ?

Hubballi: ಬಲವಂತದ ಮತಾಂತರ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಿಸಿದ ಹುಡುಗಿಯನ್ನ ಕನ್ವರ್ಟ್​ ಮಾಡಲು ಬಂದಿದ್ದನಾ?

ಪೊಲೀಸ್ ಠಾಣೆ

ಪೊಲೀಸ್ ಠಾಣೆ

ಇನ್ನು ಸಲ್ಮಾನ್ @ ಶ್ರೀಧರ್ ಪ್ರೀತಿಸಿದ ಹುಡಗಿಯಿಂದ ಮೂರು ಲಕ್ಷ ಹಣ ಮತ್ತು ಚಿನ್ನವನ್ನು ಸಹ ಪಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದ್ದಾನೆ. ಸದ್ಯ ಸಲ್ಮಾನ್ @ಶ್ರೀಧರ್ ಪೊಲೀಸರ ವಶದಲ್ಲಿದ್ದು, ಮತಾಂತರ ಆರೋಪ ಹೊತ್ತ ಕೆಲವರನ್ನ ವಿಚಾರಣೆಗೆ ಒಳಪಡಿಸಲಾಗಿದೆ.

  • Share this:

ಹುಬ್ಬಳ್ಳಿಯ (Hubballi) ನವನಗರ ಪೊಲೀಸ್ ಠಾಣೆಯಲ್ಲಿ (Navanagara Police Staion) ಬಲವಂತದ ಮತಾಂತರ ಪ್ರಕರಣ ದಾಖಲಾಗಿತ್ತು. ಹುಬ್ಬಳ್ಳಿಗೆ (Hubballi) ಬಂದು ಹಲ್ಲೆಗೊಳಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಧರ್ ಅಲಿಯಾಸ್ ಸಲ್ಮಾನ್ 12 ಜನರ ವಿರುದ್ಧ ದೂರು (Complaint) ದಾಖಲಿಸಿದ್ದನು. ಪ್ರೀತಿಸಿದ ಹುಡುಗಿಯನ್ನು ಮತಾಂತರ ಮಾಡಲು ಬಂದು ಶ್ರೀಧರ್ ಹಲ್ಲೆಗೊಳಗಾಗಿದ್ದಾನೆ ಎಂದು ತಿಳಿದು ಬಂದಿದೆ. ಶ್ರೀಧರ್ ಅಲಿಯಾಸ್ ಸಲ್ಮಾನ್ ಮೂರು ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮಕ್ಕೆ (Islam) ಮತಾಂತರಗೊಂಡು ಸಲ್ಮಾನ್ ಆಗಿ ಬದಲಾಗಿದ್ದನು. ಆದ್ರೆ ಇದು ಬಲವಂತದ ಮತಾಂತರ ಎಂದು ಶ್ರೀಧರ್ ಆರೋಪಿಸಿದ್ದಾನೆ. ತನ್ನನ್ನು ಅಪಹರಿಸಿ ಬೆಂಗಳೂರಿನ ಬನಶಂಕರಿ ಮಸೀದಿಯೊಂದರಲ್ಲಿ (Mosque Banashankari Bengaluru) ಮತಾಂತರಗೊಳಿಸಲಾಗಿದೆ ಎಂದು ಶ್ರೀಧರ್ ಹೇಳಿಕೊಂಡಿದ್ದಾನೆ. ಆದರೆ ಈತ ಹುಬ್ಬಳ್ಳಿಗೆ ಬಂದಿದ್ದು ಯಾಕೆ ಎಂಬುದರ ಸ್ಫೋಟಕ ಮಾಹಿತಿ ಲಭ್ಯವಾಗಿದೆ.


ಶ್ರೀಧರ್ @ ಸಲ್ಮಾನ್ ಹುಬ್ಬಳ್ಳಿಗೆ ಬಂದಿದ್ಯಾಕೆ?


ಸೆಪ್ಟೆಂಬರ್ 17 ರಂದು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಭೈರಿದೇವರಕೊಪ್ಪದ ಹುಡಗಿಯನ್ನ ಭೇಟಿ ಮಾಡಲು ಸಲ್ಮಾನ್ ಬಂದಿದ್ದನು.  ಈ ವೇಳೆ ಅನುಮಾನ ಬಂದು ಸ್ಥಳೀಯರು ಸಲ್ಮಾನ್​​ನನ್ನು ಹಿಡಿದು ಥಳಿಸಿದ್ದಾರೆ. ಲವ್ ಜಿಹಾದ್​ ಮಾಡಲು ಬಂದಿದ್ದಾನೆ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.


ಹಲ್ಲೆ ಮಾಡಿದಾಗ ತಾನೂ ಮುಸ್ಲಿಂ ಅಲ್ಲ, ಹಿಂದೂ ಎಂದು ಹೇಳಿಕೊಂಡಿದ್ದಾನೆ. ತನ್ನನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವಂತೆ ಹಿಂದೂಪರ ಸಂಘಟನೆಗಳು ಸೂಚಿಸಿದ್ದವು


ಯುವತಿಯಿಂದ ಹಣ, ಚಿನ್ನ ಪಡೆದಿರೋ ಆರೋಪಿ


ಇನ್ನು ಸಲ್ಮಾನ್ @ ಶ್ರೀಧರ್ ಪ್ರೀತಿಸಿದ ಹುಡಗಿಯಿಂದ ಮೂರು ಲಕ್ಷ ಹಣ ಮತ್ತು ಚಿನ್ನವನ್ನು ಸಹ ಪಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದ್ದಾನೆ. ಸದ್ಯ ಸಲ್ಮಾನ್ @ಶ್ರೀಧರ್ ಪೊಲೀಸರ ವಶದಲ್ಲಿದ್ದು, ಮತಾಂತರ ಆರೋಪ ಹೊತ್ತ ಕೆಲವರನ್ನ ವಿಚಾರಣೆಗೆ ಒಳಪಡಿಸಲಾಗಿದೆ.


ಇದನ್ನೂ ಓದಿ: Hubballi: ರಾಷ್ಟ್ರಪತಿಗಳ ಕಾರ್ಯಕ್ರಮದ ಪಟ್ಟಿಯಿಂದ ಜಗದೀಶ್ ಶೆಟ್ಟರ್ ಹೆಸರು ಕೈ ಬಿಟ್ಟಿದ್ದು ಯಾಕೆ?


ಬಂಧಿಸಿ ಬಲವಂತದ ಮತಾಂತರ ಆರೋಪ


ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ್, ಮಹ್ಮದ್ ಇಟ್ಬಾಲ್, ರಫಿಕ್, ಶಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಶ್ರೀಧರ್ ದೂರು ದಾಖಲಿಸಿದ್ದಾನೆ.


ಕಳೆದ ಮೇ ತಿಂಗಳಿನಲ್ಲಿ ಶ್ರೀಧರ್ ನನ್ನು ಬೆಂಗಳೂರಿಗೆ (Bengaluru) ಕರೆದುಕೊಂಡು ಹೋಗಿದ್ದರಂತೆ. ಬೆಂಗಳೂರು ನಗರದ ಬನಶಂಕರಿಯ ಮಸೀದಿಯೊಂದರಲ್ಲಿ (Mosque, Banashankari) ಬಲವಂತವಾಗಿ ಬಂಧಿಸಿಟ್ಟಿದ್ದರೆಂಬ ಮಾಹಿತಿಯನ್ನು ಶ್ರೀಧರ್ ಹಂಚಿಕೊಂಡಿದ್ದಾನೆ.


ನಂತರ ಮುಸ್ಲಿಂ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮನವೊಲಿಕೆ ಮಾಡಿ ಮರ್ಮಾಂಗದ ತುದಿ ಕತ್ತರಿಸಿ, ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ ಎಂದು ಶ್ರೀಧರ್ ಆರೋಪಿಸಿದ್ದಾರೆ. ಮತಾಂತರದ ಬಗ್ಗೆ ಬಾಂಡ್ ಪೇಪರ್​​ನಲ್ಲಿ ಶ್ರೀಧರ್ ಅವರ ಸಹಿ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.


ತಿರುಪತಿಯಲ್ಲಿ ಧರ್ಮದ ಬಗ್ಗೆ ತರಬೇತಿ


ಬೆಂಗಳೂರಿನಿಂದ ತಿರುಪತಿಗೆ ಕರೆದೊಯ್ದು ಮುಸ್ಲಿಂ ಧರ್ಮದ ಪ್ರಾರ್ಥನೆ, ಇತರ ಪದ್ಧತಿಗಳ ಕುರಿತು ತರಬೇತಿ ನೀಡಲಾಗಿತ್ತಂತೆ. ಪ್ರತಿವರ್ಷ ಮೂವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವಂತೆ ಶ್ರೀಧರ್​ಗೆ ತಾಕೀತು ಮಾಡಿದ್ದಾರಂತೆ. ಕೈಯ್ಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೊ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟುಭಯೋತ್ಪಾದಕನೆಂದು ಬಿಂಬಿಸುವುದಾಗಿ ಆರೋಪಿಗಳು ಹೆದರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.


ಇದನ್ನೂ ಓದಿ: Karnataka Assembly Elections: ಚಿಕ್ಕಪೇಟೆಯಲ್ಲಿ ಮತ್ತೆ 'ಗರುಡ'ಗಮನ, 'ಕಮಲ' ವಾಹನ ಸವಾರಿಯೇ? ಬಿಜೆಪಿ 'ಉದಯ'ಕ್ಕೆ ಬ್ರೇಕ್ ಹಾಕ್ತಾರಾ 'ದೇವರಾಜ'?


ಸಿಗದ ಸ್ಪಷ್ಟತೆ


ಶ್ರೀಧರ್ ಹೇಳಿಕೆ ಮತ್ತು ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿರುವು ಕಾರಣ ಎಲ್ಲವೂ ಅಸ್ಪಷ್ಟತೆಯಿಂದ ಕೂಡಿದೆ. ಪ್ರಕರಣ ದಾಖಲಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Published by:Mahmadrafik K
First published: