ಬೆಂಗಳೂರು: ನಗರದ (Bengaluru College) ರಾಜಾನುಕುಂಟೆ (Rajanakunte) ಬಳಿಯ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ (College Student) ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಪವನ್ ವಿದ್ಯಾರ್ಥಿನಿಯನ್ನು ಕೊಲೆ ಮಾಡಲೇಬೇಕೆಂದು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಕಾಲೇಜು ಒಳಗೆ ಬಂದಿದ್ದ ಅನ್ನೋದು ಗೊತ್ತಾಗಿದೆ. ಆರೋಪಿ ಪವನ್, ಲಯಸ್ಮಿತಾಳನ್ನ ಹುಚ್ಚನಂತೆ ಪ್ರೀತಿಸ್ತಿದ್ದನಂತೆ, ಆತನ ಇನ್ಸ್ಟಾ, ಫೇಸ್ಬುಕ್ನಲ್ಲೂ ಲಯಸ್ಮಿತಾಳ ಫೋಟೋವನ್ನ ವಾಲ್ಪೇಪರ್ ಮಾಡ್ಕೊಂಡಿದ್ದನಂತೆ. ಅಷ್ಟೇ ಅಲ್ಲದೆ ಲಯಸ್ಮಿತಾ ಹೆಸರನ್ನ ಪವನ್ ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದನಂತೆ.
ಲಯಸ್ಮಿತಾಗೆ ಚಾಕು ಇರಿದ ಬಳಿಕ ಪವನ್ ಕೂಡ ತನ್ನ ಎದೆಗೆ ಚೂರಿ ಇರಿದುಕೊಂಡಿದ್ದ. ಪವನ್ ಅದೇ ಕಾಲೇಜಿನ ಬೇರೆ ವಿದ್ಯಾರ್ಥಿಗಳ ಐಡಿ ಕಾರ್ಡ್ ಬಳಸಿ ಕ್ಯಾಂಪಸ್ಗೆ ಎಂಟ್ರಿಕೊಟ್ಟಿದ್ದ ಅನ್ನೋದು ಗೊತ್ತಾಗಿದೆ. ಪವನ್ ಉಳಿದುಕೊಂಡಿದ್ದ ಹಾಸ್ಟೆಲ್ ಸಹಪಾಠಿಗಳನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಪವನ್ ಆರೋಗ್ಯ ಕೂಡಾ ಸುಧಾರಿಸುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Crime News: ಪ್ರೀತಿ ಮರೆತ ವಿದ್ಯಾರ್ಥಿನಿಗೆ ಚಾಕು ಇರಿದ ಪವನ್ ಕಲ್ಯಾಣ್! ಪ್ರಿಯತಮೆ ಸಾವು, ಪಾಗಲ್ ಪ್ರೇಮಿ ಸ್ಥಿತಿ ಚಿಂತಾಜನಕ
ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಆರೋಪಿಯ ಪೋಷಕರು, ಕಾಲೇಜಿನ ಆಡಳಿತ ಮಂಡಳಿ ಬಳಿಯೂ ಘಟನೆ ಬಗ್ಗೆ ಮಾಹಿತಿ ಪಡೆಯಲಿದ್ದೇವೆ ತನಿಖೆ ನಡೆಸಲಾಗ್ತಿದೆ. ಆರೋಪಿ ಹೇಳಿಕೆ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ ಅಂತ ಹೇಳಿದರು.
ತಂದೆಯನ್ನ ಕಳೆದುಕೊಂಡಿದ್ದ ಕುಟುಂಬ
ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ಲಯಸ್ಮಿತಾ ತಂದೆ-ತಾಯಿಗೆ ಮೊದಲ ಮಗಳಾಗಿದ್ದರು. ಹಿರಿಯ ಮಗಳನ್ನು ಕಳೆದುಕೊಂಡ ಕುಟುಂಸ್ಥರು ಶೋಕಸಾಗರದಲ್ಲಿ ಮುಳಿಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಲಯಸ್ಮಿತಾ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಸದ್ಯ ಕುಟುಂಬದ ಹಿರಿಯ ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಅತೀವ ದುಃಖವನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: Student Death: ಮೈಸೂರಿನ ಹೋಟೆಲ್ನಲ್ಲಿ 21 ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು! ಕೊಲೆಗೈದಿರುವ ಶಂಕೆ
ಹಿರಿಯ ಮಗಳನ್ನು ಕಳೆದುಕೊಂಡ ತಾಯಿ ಹೇಳಿದ್ದೇನು?
ಘಟನೆ ಬಗ್ಗೆ ಮಗಳನ್ನು ಕಳೆದುಕೊಂಡ ತಾಯಿ ರಾಜೇಶ್ವರಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿದಲ್ಲಿ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ತಾಲೂಕುನಿಂದ ಕರೆದುಕೊಂಡು ಬೆಂಗಳೂರಿಗೆ ಸೇರಿಸಿದ್ದು ಏಕೆ? 9 ತಿಂಗಳು ಹೆತ್ತು ಒತ್ತು 19 ಸಾಕಿ ಮಗಳ ರಕ್ಷಣೆ ಇರಲಿ ಅಂತ ಕಾಲೇಜಿಗೆ ಹಾಕಿದ್ದೆ.
ಕಾಲೇಜಿನಲ್ಲೇ ಹೀಗೆ ಆದ್ರೆ ಹೆಣ್ಣು ಮಕ್ಕಳು ಏನ್ ಮಾಡ್ಬೇಕು?
ಒಂದು ಯೂನಿವರ್ಸಿಟಿವೊಂದರಲ್ಲಿ ಹೀಗೆ ಆದ್ರೆ ಏನ್ ಮಾಡ್ಬೇಕು? ಕಾಲೇಜು ಕಡೆಯಿಂದ ಇದುವರೆಗೂ ಒಂದು ಫೋನ್ ಬಂದಿಲ್ಲ. ಶಿಕ್ಷಣ ಸಚಿವರು ಇದುವರೆಗೂ ಒಂದು ಸಂತ್ವಾನ ಹೇಳಿಲ್ಲ. ಯುವಕನಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಪರ್ಕ ಇರಲಿಲ್ಲ. ಆತ ದೂರದ ಸಂಬಂಧಿ ಅಷ್ಟೇ. ನಾವು ಅವರ ಸಂಪರ್ಕದಲ್ಲಿ ಇರಲಿಲ್ಲ.
ಮಗಳ ಮೇಲೆ ನಂಬಿಕೆ ಇಟ್ಟುಕೊಂಡು ಕಾಲೇಜಿಗೆ ಕಳುಹಿಸಿದ್ದೇನೆ. ಯುವಕನ್ನು ಫೋನ್ನಲ್ಲಿ ಬ್ಲಾಕ್ ಮಾಡಿದ್ದೀನಿ ಅಂತ ಭಾನುವಾರ ಹೇಳಿದ್ದಳು. ಆದರೆ ಹಿಂಸೆ ನೀಡುತ್ತಿದ್ದಾನೆ, ಬೇರೆ ಬೆದರಿಕೆ ಹಾಕಿದ್ದಾನೆ ಅಂತ ನನಗೆ ಹೇಳಿರಲಿಲ್ಲ. ನನ್ನ ಮಗಳಿಗೆ ಫೋನ್ ಕೂಡ ಇರಲಿಲ್ಲ. ಕಳೆದ 5ನೇ ತಾರೀಖು ಅಷ್ಟೇ ಕಾಲೇಜಿಗೆ ಹೋಗಬೇಕು ಅಂತ ಫೋನ್ ತಗೊಂಡಿದ್ದೇವು. ಕಾಲೇಜಿನಲ್ಲೇ ಹೀಗೆ ಆದ್ರೆ ಹೆಣ್ಣು ಮಕ್ಕಳು ಏನ್ ಮಾಡ್ಬೇಕು? ಹೆಣ್ಣು ಮಕ್ಕಳಿಗೆ ಸ್ವತಂತ್ರ್ಯ ಇಲ್ಲವೇ? ಓದುವ ಹಕ್ಕು ಕೂಡ ಇಲ್ಲವೇ ಅಂತ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ