• Home
  • »
  • News
  • »
  • state
  • »
  • Bandemutt Swamiji: ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಕೇಸ್​ಗೆ ಟ್ವಿಸ್ಟ್; ಹನಿಟ್ರ್ಯಾಪ್​ಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ್ರಾ?

Bandemutt Swamiji: ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಕೇಸ್​ಗೆ ಟ್ವಿಸ್ಟ್; ಹನಿಟ್ರ್ಯಾಪ್​ಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ್ರಾ?

ಬಸವಲಿಂಗ ಸ್ವಾಮೀಜಿ

ಬಸವಲಿಂಗ ಸ್ವಾಮೀಜಿ

ಇತ್ತ ಸ್ವಾಮೀಜಿ ಬರೆದ ಡೆತ್​ನೋಟ್​ನಲ್ಲಿ ಅಂಶಗಳು ಎಫ್​ಐಆರ್​ (FIR) ನಲ್ಲಿ ದಾಖಲಾಗದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರೆಬೆತ್ತಲಾಗಿ ಮಹಿಳೆ ಜೊತೆ ಮಾತಾಡಿರೋ ವಿಡಿಯೋ ವೈರಲ್ ಆಗಿದೆ

  • Share this:

ಬಂಡೇಮಠದ (Bandemutt) ಬಸವಲಿಂಗ ಸ್ವಾಮಿಗಳ (Basavalinga Swamy Suicide Case) ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಸ್ಟ್ ಸಿಕ್ಕಿದೆ. ಹನಿಟ್ರ್ಯಾಪ್​ಗೆ (Honeytrap) ಒಳಗಾಗಿ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದ್ರಾ ಅನುಮಾನ ಮೂಡಿದೆ. ಇದರ ಜೊತೆ ಸ್ವಾಮೀಜಿ ಅರೆಬೆತ್ತಲೆಯಾಗಿರುವ ವಿಡಿಯೋ (Swamiji Video Clip) ಕ್ಲಿಪ್ ಸಹ ವೈರಲ್ ಆಗಿದೆ. ಇತ್ತ ಸ್ವಾಮೀಜಿ ಬರೆದ ಡೆತ್​ನೋಟ್​ನಲ್ಲಿ ಅಂಶಗಳು ಎಫ್​ಐಆರ್​ (FIR) ನಲ್ಲಿ ದಾಖಲಾಗದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರೆಬೆತ್ತಲಾಗಿ ಮಹಿಳೆ ಜೊತೆ ಮಾತಾಡಿರೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮೀಜಿಗೆ ಬ್ಲ್ಯಾಕ್​ಮೇಲ್​ (Blackmail) ಮಾಡಲಾಗಿತ್ತಾ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದಾರೆ.


ಡೆತ್​ನೋಟ್​ನಲ್ಲಿ ಸ್ವಾಮೀಜಿ ನಾಲ್ಕೈದು ಜನರ ಹೆಸರುಗಳನ್ನ ಉಲ್ಲೇಖ ಮಾಡಿದ್ದರಂತೆ. ಎಫ್​ಐಆರ್​ನಲ್ಲಿ ಓರ್ವ ಮಹಿಳೆ ಹಾಗೂ ಹಿತಶತೃಗಳೆಂದು ಉಲ್ಲೇಖ ಮಾಡಲಾಗಿದೆ. ಇದೇ ಕಾರಣದಿಂದ ಶ್ರೀಗಳನ್ನ ಹನಿಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡಿರೋ ಸಾಧ್ಯತೆ ಇದೆ ಎನ್ನಲಾಗಿದೆ.


ಪೊಲೀಸರು ಸ್ವಾಮೀಜಿಯ ಅರೆಬೆತ್ತಲೆ ವಿಡಿಯೋ ಕುರಿತು ಪರಿಶೀಲನೆ ಮಾಡ್ತಿದ್ದಾರೆ. ಅಲ್ಲದೇ ಡೆತ್​ನೋಟ್​ನಲ್ಲಿ ಉಲ್ಲೇಖ ಮಾಡಿರೋ ಹೆಸರು ವ್ಯಕ್ತಿಗಳನ್ನ ಪತ್ತೆ ಮಾಡಲು ಮುಂದಾಗಿದ್ದಾರೆ.


ಡೆತ್‌ನೋಟ್‌ನಲ್ಲಿ ಏನಿದೆ?


ಸಿದ್ದಗಂಗೆಯ ಪೂಜ್ಯರಿಗೆ ನನ್ನ ಸಾಷ್ಟಾಂಗ ಪ್ರಾಣಮಗಳು ಹಾಗೂ ಶ್ರೀ ಮಠದ ಎಲ್ಲಾ ಭಕ್ತರಿಗೆ ನನ್ನ ಕೊನೆ ಶರಣ ಶರಣಾರ್ಥಿಗಳು.


ಪೂಜ್ಯರಲ್ಲಿ ಹಾಗೂ ಮಠದ ಭಕ್ತರಲ್ಲಿ ನನ್ನ ಕೊನೆಯ ನಿವೇದನೆ ಏನೆದಂರೆ, ನಾನು ಈ ಮಠದ ಉತ್ತಾರಾಧಿಕಾರಿಯಾಗಿ 25ವರ್ಷಗಳು ಹೇಗೆ ಇದ್ದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಇಷ್ಟು ದಿನ ನಾನು ಈ ಮಠದ ಒಬ್ಬ ನಿಷ್ಠಾವಂತ ಸೇವಕನಾಗಿ ಪ್ರಮಾಣಿಕನಾಗಿ ಶ್ರದ್ದೆಯಿಂದ ಮಠದ ಕೆಲಸ ಮಾಡಿದ್ದೆನೆ. ಸಿದ್ದಗಂಗಾ ಶ್ರೀಗಳ ಪ್ರೀತಿ ಪಾತ್ರನಾಗಿ ಸೇವೆ ಮಾಡುತ್ತ ಬಂದಿದ್ದೇನೆ.


ಯಾವತ್ತು ಈ ಮಠದ ಅಧರ್ಮವನ್ನು ನನ್ನ ನನ್ನ ವೈಯಕ್ತಿಕ ಜೀವನಕ್ಕೆ ನನ್ನ ಬಂದುಗಳಿಗೆ ಅಗಲಿ, ಮಠಗಳಿಗಾಗಲಿ ಕೊಟ್ಟಿಲ್ಲ, ಖರ್ಚು ಮಾಡಿಲ್ಲ. ಎಲ್ಲವನ್ನು ಮಠದ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಅಷ್ಟೇ ಪ್ರಮಾಣಿಕವಾಗಿ ಬದುಕಿದ್ದೇನೆ.


ಕಷ್ಟಗಳ ಮಧ್ಯೆ ನಾನು ಬಂದಿದ್ದೇನೆ


ಆದರೆ ಈಗ ತುಂಬ ಮನಸ್ಸಿಗೆ ನೋವಾಗಲು ಸಂಗತಿ ಎಂದರೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕೆಟ್ಟ ವಿಚಾರಗಳನ್ನು ನನ್ನ ಮೇಲೆ ಹೊರಿಸಿ ನನ್ನ ಮನಸ್ಸಿಗೆ ನೋವು ಉಂಟು ಮಾಡಿದೆ. ನನ್ನ ಇಪ್ಪತ್ತೈದು ವರ್ಷದ ಪೂರ್ತಿ ಇಂತಹ ಕಷ್ಟಗಳ ಮಧ್ಯೆ ನಾನು ಬಂದಿದ್ದೇನೆ.


ಆದರೆ ಎಲ್ಲಾ ನೋವುಗಳನ್ನು ಸಹಿಸಿ ಸಿದ್ದಗಂಗಾ ಪೂಜ್ಯರ ದರ್ಶನದಿಂದ ಮುಕ್ತಿಯಾಗುತ್ತಿತ್ತು. ಪೂಜ್ಯರು ಎಷ್ಟು ಸಾರಿ ಧರ್ಮ ತುಂಬಿ ಸಿದ್ದಿಸಿದ್ದಾರೆ. ಎಲ್ಲವನ್ನು ಮರೆತು ನನ್ನ ಕೆಲಸಗಳ ಕಡೆ ಗಮನ ಕೊಡುತ್ತಿದ್ದೆ.


ಫೋನ್ ಮಾಡಿ ಕಿರುಕುಳ


ಆದರೆ ಇತ್ತೀಚಿನ ದಿನಗಳಲ್ಲಿ ಕಷ್ಟಗಳು ಬೇರೆ ರೂಪಗಳು ಪಡೆದಿರುತ್ತದೆ. ನನಗೆ ಗೊತ್ತಿಲ್ಲದ ವ್ಯಕ್ತಿಗಳು ಪೋನ್ ಮಾಡುವುದು, ಪರಿಚಯ ಮಾಡಿಕೊಳ್ಳಲು ಯತ್ನಿಸುವುದು ಇದು ನಿರಂತರವಾಗಿ ಆಗಿದೆ.


ಇದನ್ನೂ ಓದಿ:  Bengaluru Crime News: ಅಂದು ಬಿಕ್ಕಿ ಬಿಕ್ಕಿ ಅತ್ತಿದ್ದವಳೇ ಗಂಡನನ್ನ ಕೊಂದಿದ್ಲು: ತಲೆ, ಮರ್ಮಾಂಗಕ್ಕೆ ಇರಿದು ಹತ್ಯೆ


ಆದರೂ ನಾನು ಈ ಎಲ್ಲಾ ಸಂಕೋಲೆಗಳಿಗೆ ಸಿಗದೇ ಇಷ್ಟು ದಿನ ಎಚ್ಚರವಾಗಿ ಇದ್ದೆ. ಆದರೆ ಶತ್ರುಗಳ ನಿರಂತರ ಪ್ರಯತ್ನದಿಂದ ನನಗೆ ಕೊನೆಗೂ ತೊಂದರೆಯಾಗಿದೆ. ಆರೇಳು ತಿಂಗಳ ಹಿಂದೆ ಗೊತ್ತಿಲ್ಲದ ಮಹಿಳೆಯೊಬ್ಬಳು ನನಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದಳು ಎಂದು ಡೆತ್​ ನೋಟ್​ ನಲ್ಲಿ ಉಲ್ಲೇಖವಾಗಿದೆ.


ರಾಮನಗರ ಎಸ್​​ಪಿ ಹೇಳಿದ್ದೇನು?


ರಾಮನಗರ ಎಸ್​​ಪಿ ಸಂತೋಷ್ ಬಾಬು ಸುದ್ದಿಗೋಷ್ಠಿ ನಡೆಸಿ, ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಅನ್ ನ್ಯಾಚುರಲ್ ಡೆತ್ ಅಂತ ದೂರು ನೀಡಲಾಗಿದೆ. ಸ್ಥಳಕ್ಕೆ ನಮ್ಮ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.


ಇದನ್ನೂ ಓದಿ:  Hubballi: ಚಿನ್ನದ ಆಸೆಗೆ ದೊಡ್ಡಮ್ಮನ ಕಿವಿಯನ್ನೇ ಕತ್ತರಿಸಿದ ಭೂಪ; ಕೊಲೆ ಮಾಡಿ ಬೀಗ ಹಾಕ್ಕೊಂಡು ಎಸ್ಕೇಪ್!

 ಸ್ಥಳದಲ್ಲಿ 3 ಪುಟಗಳ ಡೆತ್ ನೋಟ್ ಸಿಕ್ಕಿದೆ. ದೂರಿನ ಅನ್ವಯ ಅನಾಮದೇಯ ಮಹಿಳೆ ವಿರುದ್ಧ IPC ಸೆಕ್ಷನ್​ 306 ರ ಅಡಿ ಕೇಸ್ ದಾಖಲಾಗಿದೆ. ಕೆಲವರ ಹೆಸರೂ ಕೂಡ ಡೆತ್​ನೋಟ್​ನಲ್ಲಿದೆ ಎಂದಿದ್ದಾರೆ.

Published by:Mahmadrafik K
First published: