• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru: ಗಗನಸಖಿ ಅರ್ಚನಾ ಕೇಸ್​ಗೆ ಬಿಗ್ ಟ್ವಿಸ್ಟ್; ಸತ್ಯ ಬಾಯ್ಬಿಟ್ಟ ಟೆಕ್ಕಿ ಗೆಳೆಯ

Bengaluru: ಗಗನಸಖಿ ಅರ್ಚನಾ ಕೇಸ್​ಗೆ ಬಿಗ್ ಟ್ವಿಸ್ಟ್; ಸತ್ಯ ಬಾಯ್ಬಿಟ್ಟ ಟೆಕ್ಕಿ ಗೆಳೆಯ

ಅರ್ಚನಾ ಧೀಮನ್, ಗಗನಸಖಿ

ಅರ್ಚನಾ ಧೀಮನ್, ಗಗನಸಖಿ

ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಅದರೆ ಆದೀಶ್ ಮೇಲೆ ಅನುಮಾನ ಮೂಡಿದ ಹಿನ್ನೆಲೆ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾನೆ.

 • News18 Kannada
 • 5-MIN READ
 • Last Updated :
 • Bangalore, India
 • Share this:

ಬೆಂಗಳೂರು: ಗಗನಸಖಿ ಅರ್ಚನಾ ಧೀಮನ್ (Air Hostess Archana Dheeman) ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ವಿಷಯ ಬೆಳಕಿಗೆ ಬಂದಿದೆ. ಹಿಮಾಚಲ ಪ್ರದೇಶ (Himachala pradesh) ಮೂಲದ ಅರ್ಚನಾ ಬೆಂಗಳೂರಿನ ಗೆಳೆಯನ ಮನೆಯಲ್ಲಿ ಕೊಲೆಯಾಗಿದ್ದರು. ಇದೀಗ ಗೆಳೆಯ ಟೆಕ್ಕಿ (Techie Friend) ಅದೀಶ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಕೊಲೆಯ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ದುಬೈನ ಖಾಸಗಿ ಏರ್​​ಲೈನ್ಸ್​​ನಲ್ಲಿ  (Dubai Airlines) ಗಗನಸಖಿಯಾಗಿದ್ದ ಅರ್ಚನಾ ಮಾರ್ಚ್ 10ರಂದು ಗೆಳೆಯನ ಭೇಟಿಗಾಗಿ ಬೆಂಗಳೂರಿಗೆ (Bengaluru) ಬಂದಿದ್ದರು. ರಾತ್ರಿ ಪಾರ್ಟಿ ಮಾಡಿದ್ದರು. ನಂತರ ಆದೀಶ್ ವಾಸವಾಗಿದ್ದ ಅಪಾರ್ಟ್​​ಮೆಂಟ್​ಗೆ ಅರ್ಚನಾ ಬಂದಿದ್ದರು. ಈ ವೇಳೆ ನಾಲ್ಕನೇ ಮಹಡಿಯಿಂದ ತಳ್ಳಿ ಅರ್ಚನಾ ಕೊಲೆ ಮಾಡಲಾಗಿತ್ತು.


ಆದೀಶ್ ಕೇರಳ (Kerala) ಮೂಲದವನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದನು. ಕೋರಮಂಗಲದ (Koramanagal, Bengaluru) ಎಂಟನೇ ಬ್ಲಾಕ್​ನಲ್ಲಿರುವ  ರೇಣುಕಾ ರೆಸಿಡೆನ್ಸಿಯ ನಾಲ್ಕನೇ ಮಹಡಿ ಫ್ಲ್ಯಾಟ್​​ನಲ್ಲಿ ವಾಸವಾಗಿದ್ದನು. ಇದೇ ಫ್ಲ್ಯಾಟ್​​ನಿಂದ ಕೆಳಗೆ ಬಿದ್ದು ಅರ್ಚನಾ ಧೀಮನ್ ಸಾವನ್ನಪ್ಪಿದ್ದರು.


ಆರಂಭದಲ್ಲಿ ಅರ್ಚನಾ ಸಾವಿನ ಬಳಿಕ ಇದೊಂದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಗೆಳೆಯ ಆದೀಶ್ ಸಹ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದನು. ಆದ್ರೆ ಅರ್ಚನಾ ತಂದೆ ದೇವರಾಜ್ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.


ಪೊಲೀಸರ ಮುಂದೆ ಸತ್ಯ ಬಿಚ್ಚಿಟ್ಟ ಆದೀಶ್


ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಅದರೆ ಆದೀಶ್ ಮೇಲೆ ಅನುಮಾನ ಮೂಡಿದ ಹಿನ್ನೆಲೆ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾನೆ.


ನನ್ನನ್ನು ಮದುವೆ ಆಗದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸೋದಾಗಿ ಅರ್ಚನಾ ಬೆದರಿಕೆ ಹಾಕಿದ್ದಳು. ಕೊಲೆ ನಡೆದ ದಿನವೂ ನನ್ನ ಮತ್ತು ಆಕೆ ನಡುವೆ ಇದೇ ವಿಚಾರಕ್ಕೆ ಜಗಳ ನಡೆದಿತ್ತು. ಈ ಸಮಯದಲ್ಲಿ ಮಹಡಿಯಿಂದ ತಳ್ಳಿ ಆಕೆಯನ್ನು ಕೊಲೆ ಮಾಡಿದೆ ಎಂದು ಆದೀಶ್ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.


ಬಸ್​​ ಚಾಲಕನಿಗೆ ಕಾರ್ಯಕರ್ತರಿಂದ ಥಳಿತ


ಮಳವಳ್ಳಿಯ ಅನಂತರಾವ್ ವೃತ್ತದಲ್ಲಿ ಜೆಡಿಎಸ್​ ಕಾರ್ಯಕರ್ತರು ಕೆಎಸ್​ಆರ್​ಟಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಮಾಜಿ ಶಾಸಕ ನರೇಂದ್ರಸ್ವಾಮಿ ವಿರುದ್ಧ ಜೆಡಿಎಸ್​ ಕಾರ್ಯಕರ್ತರು ರಸ್ತೆ  ಬ್ಲಾಕ್​ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬಸ್​ನಲ್ಲಿದ್ದ ಪ್ರಯಾಣಿಕ ನಿಂದಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಬಸ್​ಗೆ ಹೊಡೆದಿದ್ದಾರೆ.. ಈ ವೇಳೆ ಚಾಲಕ ಬಸ್​ಗೆ ಹೊಡಿಯಬೇಡಿ ಎಂದಿದ್ದಾನೆ..ಇದ್ರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಚಾಲಕನನ್ನ ಥಳಿಸಿದ್ದಾರೆ.
ತಂದೆ, ಮಗಳು ಸಾವು


ಸಿಗ್ನಲ್​​ನಲ್ಲಿ ನಿಂತಿದ್ದ ಸ್ಕೂಟರ್​ಗೆ ಟಿಪ್ಪರ್​​ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗಳು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಮಂಗಳೂರಿನ ನಂತೂರು ವೃತ್ತದಲ್ಲಿ ನಡೆದಿದೆ. ಟಿಪ್ಪರ್​ ಚಾಲಕನ ಅಜಾಗರೂಕತೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಟಿಪ್ಪರ್​ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಇದನ್ನೂ ಓದಿ: Crime News: ವಿಷ್ಣುವಿನ ಪ್ರತಿ ರೂಪ ಅಂತ ₹2 ಕೋಟಿಗೆ ಸಾಲಿಗ್ರಾಮ ಶಿಲೆ ಮಾರಾಟಕ್ಕೆ ಡೀಲ್​​; ಇಬ್ಬರು ಖತರ್ನಾಕ್​ಗಳು ಅರೆಸ್ಟ್​!


30ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ


ಶಿವಮೊಗ್ಗ ಜಿಲ್ಲೆಯ ಸಾಗರದ ಜೋಗದಲ್ಲಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಜೋಗದ ಕ್ರಿಸ್ತಜ್ಯೋತಿ ವಸತಿ ಶಾಲೆಯ 30ಕ್ಕೂ ಹೆಚ್ಚು ಶಾಲಾ ಮಕ್ಕಳು ಫುಡ್​ ಪಾಯಿಸನ್​ನಿಂದ ಅಸ್ವಸ್ಥಗೊಂಡಿದ್ದಾರೆ. ಸಾಗರ ಆಸ್ಪತ್ರೆಯಲ್ಲಿ ಜೋಗದ ಕ್ರಿಸ್ತಜ್ಯೋತಿ ವಸತಿ ಶಾಲೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು